Advertisement

ಭಾರತದ ಆರ್ಥಿಕ ಪ್ರಗತಿ ದರದ ನಿರೀಕ್ಷೆ ಶೇ.6.8ಕ್ಕೇರಿಕೆ: ಎಸ್‌ ಆ್ಯಂಡ್‌ ಪಿ

10:30 PM Mar 26, 2024 | Team Udayavani |

ನವದೆಹಲಿ: ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ದರದ ನಿರೀಕ್ಷೆಯನ್ನು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ರೇಟಿಂಗ್ಸ್‌ ಸಂಸ್ಥೆ ಶೇ.6.8ಕ್ಕೇರಿಸಿದೆ. ಆದರೆ, ನಿರ್ಬಂಧಿತ ಬಡ್ಡಿ ದರಗಳು ಅರ್ಥವ್ಯವಸ್ಥೆಯ ಬೆಳವಣಿಗೆಗೆ ಅಡ್ಡಿ ಉಂಟು ಮಾಡುವ ಆತಂಕವಿದೆ ಎಂದೂ ಹೇಳಿದೆ.

Advertisement

2024-25ರ ವಿತ್ತ ವರ್ಷದಲ್ಲಿ ಭಾರತದ ಪ್ರಗತಿಯ ದರ ಶೇ.6.4ರಷ್ಟಿರಲಿದೆ ಎಂದು ಕಳೆದ ವರ್ಷದ ನವೆಂಬರ್‌ ನಲ್ಲಿ ಅಮೆರಿಕ ಮೂಲದ ಎಸ್‌ ಆ್ಯಂಡ್‌ ಪಿ ಅಂದಾಜಿಸಿತ್ತು. ಆದರೆ, ದೇಶೀಯವಾಗಿ ಬೇಡಿಕೆ ಹೆಚ್ಚಳ, ರಫ್ತು ಪ್ರಮಾಣ ಏರಿಕೆ ಮತ್ತಿತರ ಕಾರಣಗಳಿಂದಾಗಿ ಈ ಅಂದಾಜನ್ನು ಶೇ.6.8ಕ್ಕೇರಿಸುತ್ತಿದ್ದೇವೆ ಎಂದು ಸಂಸ್ಥೆ ಈಗ ಹೇಳಿದೆ.

ಏಷ್ಯಾದ ಉದಯೋನ್ಮುಖ ಆರ್ಥಿಕತೆಗಳಲ್ಲಿ ಪ್ರಗತಿ ದರ ಸ್ವಲ್ಪ ಮಟ್ಟಿಗೆ ಇಳಿಕೆಯಾಗಲಿದೆ. ಆದರೆ, ಭಾರತ, ಇಂಡೋನೇಷ್ಯಾ, ಫಿಲಿಪ್ಪೀನ್ಸ್‌ ಮತ್ತು ವಿಯೆಟ್ನಾಂನ ಆರ್ಥಿಕತೆಯು ಉತ್ತಮ ಪ್ರಗತಿ ಸಾಧಿಸಲಿದೆ ಎಂದೂ ಎಸ್‌ ಆ್ಯಂಡ್‌ ಪಿ ರೇಟಿಂಗ್ಸ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next