Advertisement

Rajanath Singh: 22 ವರ್ಷಗಳ ಬಳಿಕ U.K ಗೆ ಭಾರತದ ರಕ್ಷಣಾ ಸಚಿವರ ಭೇಟಿ

09:20 PM Jan 07, 2024 | Team Udayavani |

ನವದೆಹಲಿ: ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸೋಮವಾರದಿಂದ 2 ದಿನಗಳ ಕಾಲ ಯುನೈಟೆಡ್‌ ಕಿಂಗ್‌ಡಮ್‌ಗೆ ಪ್ರವಾಸ ಆರಂಭಿಸಲಿದ್ದಾರೆ. 22 ವರ್ಷಗಳ ಬಳಿಕ ದೇಶದ ರಕ್ಷಣಾ ಸಚಿವರೊಬ್ಬರು ಆ ದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. 2002ರ ಜ.22ರಂದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಅಂದಿನ ರಕ್ಷಣಾ ಸಚಿವ ಜಾರ್ಜ್‌ ಫ‌ರ್ನಾಂಡಿಸ್‌ ಲಂಡನ್‌ಗೆ ಭೇಟಿ ನೀಡಿದ್ದರು.

Advertisement

ಭೇಟಿ ವೇಳೆ ಉಭಯ ದೇಶಗಳ ನಡುವೆ ರಕ್ಷಣೆ, ಭದ್ರತೆ ಮತ್ತು ಕೈಗಾರಿಕಾ ಸಹಕಾರದ ಕುರಿತು ಬ್ರಿಟನ್‌ ರಕ್ಷಣಾ ಸಚಿವ ಗ್ರ್ಯಾಂಟ್‌ ಶಾಪ್ಸ್‌ ಅವರೊಂದಿಗೆ ರಾಜನಾಥ್‌ ಸಿಂಗ್‌ ಮಾತುಕತೆ ನಡೆಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ವಿದೇಶಾಂಗ ಸಚಿವ ದೇವಿಡ್‌ ಕೆಮೆರಾನ್‌ ಜತೆ ರಾಜನಾಥ್‌ ಮಾತುಕತೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next