Advertisement

ರಷ್ಯಾದೊಂದಿಗೆ ಭಾರತದ ರಕ್ಷಣ ಬಾಂಧವ್ಯ

06:25 PM Mar 04, 2022 | Team Udayavani |
ಸ್ವಾತಂತ್ರ್ಯ ಸಿಕ್ಕಿದ ಬಳಿಕ ಆರಂಭದಲ್ಲಿ ಭಾರತವು ಶಸ್ತ್ರಾಸ್ತ್ರಗಳ ಆಮದಿಗೆ ಬ್ರಿಟಿಷರು ಮತ್ತು ಪಾಶ್ಚಾತ್ಯ ದೇಶಗಳನ್ನೇ ನೆಚ್ಚಿಕೊಂಡಿತ್ತು. 1970ರ ದಶಕದ ವೇಳೆ ಯುಎಸ್‌ಎಸ್‌ಆರ್‌ ಭಾರತದ ಅತೀ ದೊಡ್ಡ ರಕ್ಷಣ ಸಾಮಗ್ರಿಗಳ ಪೂರೈಕೆದಾರನಾಗಿ ಹೊರಹೊಮ್ಮಿತು. ಅನಂತರದಲ್ಲಿ ನ್ಯೂಕ್ಲಿಯರ್‌ ಸಬ್‌ಮರೀನ್‌ಗಳು, ವಿಮಾನವಾಹಕಗಳು, ಟ್ಯಾಂಕ್‌ಗಳು, ಗನ್‌, ಯುದ್ಧವಿಮಾನಗಳು, ಕ್ಷಿಪಣಿಗಳು ಸೇರಿದಂತೆ ಮೂಲ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ರಷ್ಯಾದಿಂದಲೇ ತರಿಸಲು ಭಾರತ ಆರಂಭಿಸಿತು. ಇತ್ತೀಚೆಗೆ ವಿವಿಧ ದೇಶಗಳಿಂದ ನಾವು ರಕ್ಷಣ ಸಾಮಗ್ರಿಗಳನ್ನು ಖರೀದಿಸುತ್ತಿದ್ದರೂ ರಷ್ಯಾ ಮೂಲದ ಸಾಮಗ್ರಿಗಳದ್ದೇ ಸಿಂಹಪಾಲು...
Now pay only for what you want!
This is Premium Content
Click to unlock
Pay with

ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾಕ್ಕೆ ಅಮೆರಿಕ, ಬ್ರಿಟನ್‌ ಸೇರಿದಂತೆ ಹಲವು ರಾಷ್ಟ್ರಗಳು “ಆರ್ಥಿಕ ದಿಗ್ಬಂಧನ’ದ ಬಿಸಿ ತಾಗಿಸಿವೆ. ಆದರೆ, ಭಾರತ ಮಾತ್ರ ಈ ಯುದ್ಧದ ವಿಚಾರದಲ್ಲಿ ತಟಸ್ಥ ಧೋರಣೆ ಅನುಸರಿಸಿದ್ದು, ರಷ್ಯಾವನ್ನು ಎದುರುಹಾಕಿಕೊಳ್ಳುವ ಗೋಜಿಗೆ ಹೋಗಿಲ್ಲ. ಇದಕ್ಕೆ ಕಾರಣವೂ ಇದೆ. ಭಾರತ ಮತ್ತು ರಷ್ಯಾ ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದು, ಶಸ್ತ್ರಾಸ್ತ್ರಗಳು ಹಾಗೂ ರಕ್ಷಣ ಸಾಮಗ್ರಿ ವಿಚಾರದಲ್ಲಿ ರಷ್ಯಾಗೆ ಭಾರತವೇ ಅತೀ ದೊಡ್ಡ ಆಮದುದಾರ ರಾಷ್ಟ್ರ.

Advertisement

ರಷ್ಯಾದ್ದೇ ಸಿಂಹಪಾಲು :

ಸ್ವಾತಂತ್ರ್ಯ ಸಿಕ್ಕಿದ ಬಳಿಕ ಆರಂಭದಲ್ಲಿ ಭಾರತವು ಶಸ್ತ್ರಾಸ್ತ್ರಗಳ ಆಮದಿಗೆ ಬ್ರಿಟಿಷರು ಮತ್ತು ಪಾಶ್ಚಾತ್ಯ ದೇಶಗಳನ್ನೇ ನೆಚ್ಚಿಕೊಂಡಿತ್ತು. 1970ರ ದಶಕದ ವೇಳೆ ಯುಎಸ್‌ಎಸ್‌ಆರ್‌ ಭಾರತದ ಅತೀ ದೊಡ್ಡ ರಕ್ಷಣ ಸಾಮಗ್ರಿಗಳ ಪೂರೈಕೆದಾರನಾಗಿ ಹೊರಹೊಮ್ಮಿತು. ಅನಂತರದಲ್ಲಿ ನ್ಯೂಕ್ಲಿಯರ್‌ ಸಬ್‌ಮರೀನ್‌ಗಳು, ವಿಮಾನವಾಹಕಗಳು, ಟ್ಯಾಂಕ್‌ಗಳು, ಗನ್‌, ಯುದ್ಧವಿಮಾನಗಳು, ಕ್ಷಿಪಣಿಗಳು ಸೇರಿದಂತೆ ಮೂಲ ಹಾಗೂ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ರಷ್ಯಾದಿಂದಲೇ ತರಿಸಲು ಭಾರತ ಆರಂಭಿಸಿತು. ಇತ್ತೀಚೆಗೆ ವಿವಿಧ ದೇಶಗಳಿಂದ ನಾವು ರಕ್ಷಣ ಸಾಮಗ್ರಿಗಳನ್ನು ಖರೀದಿಸುತ್ತಿದ್ದರೂ ರಷ್ಯಾ ಮೂಲದ ಸಾಮಗ್ರಿಗಳದ್ದೇ ಸಿಂಹಪಾಲು.

ಪ್ರಮುಖ ರಕ್ಷಣ ಒಪ್ಪಂದಗಳು :

ಅತ್ಯಾಧುನಿಕ ಎಸ್‌-400 ಟ್ರಯಂಫ್ ವೈಮಾನಿಕ ರಕ್ಷಣಾ ವ್ಯವಸ್ಥೆ: 37,700 ಕೋಟಿ ರೂ. ವೆಚ್ಚದಲ್ಲಿ 5 ವ್ಯವಸ್ಥೆಗಳ ಖರೀದಿಗೆ ಒಪ್ಪಂದ ನಡೆದಿದೆ. 2021ರಲ್ಲಿ ಈ ಪೈಕಿ ಒಂದನ್ನು ಡೆಲಿವರಿ ಮಾಡಲಾಗಿದೆ.

Advertisement

ಎಕೆ 203 ರೈಫ‌ಲ್‌: ಅಮೇಠಿಯ ಫ್ಯಾಕ್ಟರಿಯಲ್ಲಿ ಸುಮಾರು 6 ಲಕ್ಷ ರೈಫ‌ಲ್‌ಗ‌ಳ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಚಕ್ರ 3 ಮತ್ತು ಚಕ್ರ 4: ಎರಡು ಅಣ್ವಸ್ತ್ರಸಹಿತ ಖಂಡಾಂತರ ಜಲಾಂತರ್ಗಾಮಿಗಳನ್ನು ಭೋಗ್ಯಕ್ಕೆ ಪಡೆಯಲು ಮಾತುಕತೆ ನಡೆದಿದೆ.

ಐಎನ್‌ಎಸ್‌ ವಿಕ್ರಮಾದಿತ್ಯ: 2013ರಿಂದ ಕರ್ತವ್ಯದಲ್ಲಿರುವ ಭಾರತದ ಏಕೈಕ ವಿಮಾನವಾಹಕ ನೌಕೆಯನ್ನು ಖರೀದಿಸಿದ್ದೂ ರಷ್ಯಾದಿಂದ.

ಬ್ರಹ್ಮೋಸ್‌: ಭಾರತವು ಸದ್ಯದಲ್ಲೇ ರಫ್ತು ಮಾಡಲಿರುವ ಬ್ರಹ್ಮೋಸ್‌ ಕ್ಷಿಪಣಿಯನ್ನು ಭಾರತ ಮುತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದೆ.

ಯುದ್ಧ ವಿಮಾನಗಳು: ಭಾರತಕ್ಕೆ ನೂರಾರು ಸುಖೋಯ್‌ ಮತ್ತು ಮಿಗ್‌ ಜೆಟ್‌ಗಳನ್ನು ರಷ್ಯಾ ಒದಗಿಸಿದೆ.

  • 2016ರಿಂದ 2020ರವರೆಗೆ ಜಾಗತಿಕ ಶಸ್ತ್ರಾಸ್ತ ವ್ಯಾಪಾರದಲ್ಲಿ ಅಮೆರಿಕದ ಪಾಲು – ಶೇ.37
  • ಈ ಅವಧಿಯಲ್ಲಿ ರಷ್ಯಾದ ಪಾಲು – ಶೇ.20
  • 2000-2020ರ ವರೆಗೆ ಭಾರತದ ಶಸ್ತ್ರಾಸ್ತ್ರ ಆಮದಿನಲ್ಲಿ ರಷ್ಯಾದ ಪಾಲು- ಶೇ.66.5
  • ಈ ಅವಧಿಯಲ್ಲಿ ಶಸ್ತ್ರಾಸ್ತ್ರ ಖರೀದಿಗೆ ಭಾರತ ಮಾಡಿದ ಒಟ್ಟು ವೆಚ್ಚ – 4.06 ಲಕ್ಷ ಕೋಟಿ ರೂ.
  • ಈ ಪೈಕಿ ರಷ್ಯಾದಿಂದ ಖರೀದಿಸಲು ಭಾರತ ಮಾಡಿದ ವೆಚ್ಚ – 2.70 ಲಕ್ಷ ಕೋಟಿ ರೂ.
  • ಈ ಅವಧಿಯಲ್ಲಿ ಅಮೆರಿಕದಿಂದ ಭಾರತ ಖರೀದಿಸಿದ ಶಸ್ತ್ರಾಸ್ತ್ರಗಳ ಮೌಲ್ಯ-33,200 ಕೋಟಿ ರೂ.
  • ಇಸ್ರೇಲ್‌ನಿಂದ ಖರೀದಿಸಿದ ಶಸ್ತ್ರಾಸ್ತ್ರಗಳ ಮೌಲ್ಯ – 30,900 ಕೋಟಿ ರೂ.
Advertisement

Udayavani is now on Telegram. Click here to join our channel and stay updated with the latest news.