Advertisement

ಭಾರತದ ಕೋವಿಡ್ ಬೆಳವಣಿಗೆ ಆತಂಕಕಾರಿಯಾಗಿದೆ : ಸೌಮ್ಯಾ ಸ್ವಾಮಿನಾಥನ್

08:30 AM May 11, 2021 | Team Udayavani |

ನವದೆಹಲಿ : ದೇಶದಲ್ಲಿ ಕೋವಿಡ್ ಸಂಖ್ಯೆ ಗಣನೀಯವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ವಿಶ್ಯ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್  ಹೇಳಿಕೆಯೊಂದನ್ನು ನೀಡಿದ್ದು, ಭಾರತದ ಈ ಕೋವಿಡ್ ಬೆಳವಣಿಗೆ ʼಆತಂಕಕಾರಿಯಾಗಿದೆʼ ಎಂದು ಹೇಳಿದ್ದಾರೆ. ಅಲ್ಲದೆ ದೇಶದಲ್ಲಿ ನಿಖರವಾದ ಕೋವಿಡ್ ಅಂಕಿ–ಅಂಶಗಳನ್ನು ಅಂದಾಜಿಸಲು ಕಾರ್ಯಪ್ರವೃತ್ತರಾಗಬೇಕು ಅವರು ತಿಳಿಸಿದ್ದಾರೆ.

Advertisement

ಸದ್ಯದ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ಅಲ್ಲದೆ ಭಾರತ ಮತ್ತು ಆಗ್ನೇಯ ದೇಶಗಳಲ್ಲಿ ವರದಿಯಾಗುತ್ತಿರುವ ಪ್ರಕರಣಗಳು, ಮತ್ತು ಸಾವಿನ ಸಂಖ್ಯೆ ತುಂಬಾ  ಕಳವಳ ತರಿಸಿದೆ ಎಂದಿದ್ದಾರೆ. ಇಷ್ಟೊಂದು ಪ್ರಕರಣಗಳು ಮತ್ತು ಸಾವಿನ ಸಂಖ್ಯೆಯನ್ನು ನಾವು ಊಹೆ ಮಾಡಿರಲಿಲ್ಲ ಎಂದು ಸೌಮ್ಯ ಹೇಳಿದ್ದಾರೆ.  ಇದೇ ಹಿನ್ನೆಲೆಯಲ್ಲಿ ಸರ್ಕಾರಗಳು ಪ್ರಕರಣಗಳ ನಿಜವಾದ ವರದಿಯನ್ನು ನೀಡಲು ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡಬೇಕು ಎಂದು ಅವರು ಸೂಚಿಸಿದ್ದಾರೆ.

ಮತ್ತೊಂದು ಪ್ರಮುಖ ಮಾಹಿತಿಯನ್ನು ಹೇಳಿರುವ ಅವರು, ಸದ್ಯ ಜರುಗುತ್ತಿರುವ ಸಾವಿನ ಎಲ್ಲಾ ಪ್ರಕರಣಗಳೂ ಕೋವಿಡ್ ನಿಂದಲೇ ನಡೆಯುತ್ತಿಲ್ಲ. ಬೇರೆ ಬೇರೆ ಕಾಯಿಲಿಗಳಿಂದಲೂ, ಔಷಧ ಸಿಗದೆ ಕೆಲವು ಜನ ಸಾಯುತ್ತಿದ್ದಾರೆ. ಈ ಎಲ್ಲ ಅಂಕಿ ಅಂಶಗಳು ನಿಖರವಾಗಿ ವರದಿಯಾಗಬೇಕು ಎಂದು ಅವರು ತಿಳಿಸಿದ್ದಾರೆ.

ಇನ್ನು ರೂಪಾಂತರ ಕೋವಿಡ್ ವೈರಸ್‌ನ ಹರಡುವಿಕೆ, ಅದರಿಂದ ಆಗುವ ರೋಗದ ತೀವ್ರತೆ, ಲಸಿಕೆ ಪಡೆದುಕೊಂಡವರಲ್ಲಿನ ಪ್ರತಿಕಾಯ ಪ್ರತಿಕ್ರಿಯೆಗಳ ಬಗ್ಗೆ ಭಾರತದಲ್ಲಿ ಅಧ್ಯಯನ ನಡೆಯುತ್ತಿದೆ. ದೇಶದ ವಿವಿಧ ಪ್ರದೇಶಗಳಲ್ಲಿನ ಸಂಪೂರ್ಣ ಚಿತ್ರಣದ ಮಾಹಿತಿ ಕಲೆಹಾಕಬೇಕಬೇಕೆಂದು ಡಬ್ಲುಎಚ್‌ಒ ವಿಜ್ಞಾನಿಗಳು ಕರೆ ನೀಡಿದ್ದಾರೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next