Advertisement
2008ರಲ್ಲಿ ಉಡಾವಣೆಗೊಂಡಿದ್ದ ಚಂದ್ರಯಾನ ಚಂದಿರನ ಅಂಗಳದಲ್ಲಿ ನೀರಿರುವುದನ್ನು ಗುರುತಿಸಿ ಹೆಗ್ಗಳಿಕೆ ಮೆರೆದಿತ್ತು. ಆದರೆ, ಉಡಾವಣೆಯಾಗಿ ವರ್ಷ ಕಳೆಯುವಷ್ಟರಲ್ಲೇ ಅಂದರೆ, 2009ರ ಆ.29ರಂದು ನಿರ್ವಹಣಾ ಘಟಕದ ಸಂಪರ್ಕ ಕಡಿದುಕೊಂಡಿದ್ದ ಈ ನೌಕೆ, ಎಲ್ಲಿದೆ ಎನ್ನುವ ಸುಳಿವೇ ಇರಲಿಲ್ಲ. ಇದಕ್ಕೆ ಆಗ ಪ್ರತಿಕ್ರಿಯಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) “”ಚಂದ್ರಯಾನ ಯೋಜನೆ ಪರಿಪೂರ್ಣಗೊಂಡಿದೆ” ಎಂದು ಘೋಷಿಸಿತ್ತು. ಇದರೊಂದಿಗೆ ಒಂದೇ ವರ್ಷದ ಅವಧಿಯಲ್ಲಿ ಭಾರತದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ ಅಂತ್ಯಗೊಂಡಿತ್ತು. ಆದರೆ, ಈಗ ನಾಸಾ ವಿಜ್ಞಾನಿಗಳು ಈ ನೌಕೆ ಚಂದ್ರನ ಸುತ್ತ “ಜೀವಂತ’ವಾಗಿ ಸುತ್ತುತ್ತಿರುವುದನ್ನು ಪತ್ತೆಹಚ್ಚಿದ್ದು, ಭಾರತದ ನಿರೀಕ್ಷೆ ಮತ್ತೂಮ್ಮೆ ಗರಿಗೆದರಿದೆ. ಈ ನೌಕೆ ಜತೆ ಮತ್ತೆ ಸಂಪರ್ಕ ಸಾಧಿಸಬಹುದು ಎನ್ನುವ ಅಭಿಪ್ರಾಯ ವಿಜ್ಞಾನಿಗಳಿಂದ ವ್ಯಕ್ತವಾಗಿದೆ.
Related Articles
Advertisement
3,80,000 ದೂರದಲ್ಲಿದೆ ನೌಕೆ!ವಿಜ್ಞಾನಿಗಳು ನೀಡಿರುವ ಮಾಹಿತಿಯ ಪ್ರಕಾರ, ಚಂದ್ರಯಾನ-1 ಭೂಮಿಯಿಂದ ಅಂದಾಜು 3,80,000 ಕಿಲೋಮೀಟರ್ ದೂರದಲ್ಲಿರುವುದು ಕಂಡುಬಂದಿದೆ. ಈ ಕಾರ್ಯಾಚರಣೆಗೆ ಜೆಪಿಎಲ್ ತಂಡ 70 ಮೀಟರ್ ಆ್ಯಂಟೇನಾ ಬಳಸಿಕೊಂಡಿದೆ. ಇದು ಕ್ಯಾಲಿಫೋರ್ನಿಯಾದ ಗೋಲ್ಡ್‌ಸ್ಟೋನ್ ದೀಪ್ ಸ್ಪೇಸ್ ಕಮ್ಯುನಿಕೇಷನ್ ಕಾಂಪ್ಲೆಕ್ಸ್‌ನಲ್ಲಿದ್ದು, ಭಾರಿ ಪ್ರಮಾಣದ ಬೆಳಕು ಚೆಲ್ಲುವಂತೆ ಮಾಡಿ ಪತ್ತೆ ಮಾಡುವಲ್ಲಿ ನಾಸಾ ತಂಡ ಯಶಸ್ವಿಯಾಗಿದೆ. ಚಂದ್ರಯಾನ 1 ಸಂಕ್ಷಿಪ್ತ ಪರಿಚಯ
* ಉದ್ದಗಲ, ಎತ್ತರ 1.5 ಮೀಟರ್
* ಉಡಾವಣೆಯ ವೇಳೆ ಇದ್ದ ತೂಕ 1,380 ಕಿಲೋಗ್ರಾಂ.
* ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ.
* ಬಳಸಲಾದ ರಾಕೆಟ್ ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಸಿ11
* ನೌಕೆ ಅಭಿವೃದ್ಧಿಗೆ ತಗುಲಿದ ವೆಚ್ಚ 379.72 ಕೋಟಿ ರೂ.