Advertisement
ಈ ವಿಶೇಷ ಉಡುಗೆಯನ್ನು ಫ್ಯಾಶನ್ ಡಿಸೈನರ್ ಎಗ್ಗೀ ಜಾಸ್ಮಿನ್ ಅವರು ವಿನ್ಯಾಸ ಗೊಳಿಸಿದ್ದಾರೆ. ಬಂಗಾರದ ಬಣ್ಣದಲ್ಲಿದ್ದ ಉಡುಗೆಯಲ್ಲಿ ಹಾವು, ದಂತದಂತಹ ವಿಶೇಷ ವಿನ್ಯಾಸ ಮಾಡಲಾಗಿತ್ತು.ಒಡಿಶಾದ ಸುಂದರಗಢ ಜಿಲ್ಲೆಯವರಾಗಿರುವ ನವದೀಪ್, ಎಂಜಿನಿಯರಿಂಗ್ ಮತ್ತು ಎಂಬಿಎ ಪದವೀಧರೆ ಯಾಗಿದ್ದು, ಬ್ಯಾಂಕ್‌ನಲ್ಲಿ ಸಹಾಯಕ ಮ್ಯಾನೇಜರ್ ಆಗಿ ಹಾಗೂ ಕಾಲೇಜಿನದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಏಳು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅವರಿಗೆ 6 ವರ್ಷದ ಮಗನಿದ್ದಾನೆ. ಅವರು ಕಳೆದ ವರ್ಷ ಮಿಸೆಸ್ ಇಂಡಿಯಾ ವರ್ಲ್ಡ್ 2021 ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.
ವರ್ಲ್ಡ್ ನ ಅಂತಿಮ ಸುತ್ತಿನಲ್ಲಿ ಅಮೆರಿಕದ ಶೈಲಿನ್ ಫೋರ್ಡ್ ಜಯ ಸಾಧಿಸಿದ್ದು, ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. 58 ರಾಷ್ಟ್ರಗಳ ಸ್ಪರ್ಧಾಳುಗಳಿದ್ದ ಸ್ಪರ್ಧೆಯಲ್ಲಿ ಗೆದ್ದ ಶೈಲಿನ್‌ಗೆ, ಮಿಸೆಸ್ ವರ್ಲ್ಡ್ 2021 ಆಗಿರುವ ಕೇಟ್ ಶ್ನೆàಯರ್ಡ್ ಕಿರೀಟ ತೊಡಿಸಿದ್ದಾರೆ. ಭಾರತ ಮೂಲದವರು ಹಾಗೂ ಅರಬ್ ಸಂಯುಕ್ತ ಸಂಸ್ಥಾನದ ನಿವಾಸಿಯಾಗಿರುವ ದೇಬಾಂಜಲಿ ಕಮಸ್ತ್ರ ಎರಡನೇ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದ ಅವರು 14 ವರ್ಷಗಳ ಹಿಂದೆ ದುಬಾೖಗೆ ಸ್ಥಳಾಂತರಗೊಂಡಿದ್ದರು.
Related Articles
Advertisement