Advertisement

ಸೂರ್ಯಕಾಂತಿ ಎಣ್ಣೆ ಆಮದು ಶೇ.89.6 ಹೆಚ್ಚಳ

12:41 AM Sep 14, 2022 | Team Udayavani |

ಹೊಸದಿಲ್ಲಿ: ಉಕ್ರೇನ್‌ ಬಿಕ್ಕಟ್ಟು ಆರಂಭವಾದ ಬಳಿಕ, ರಷ್ಯಾ ಮತ್ತು ಅರ್ಜೆಂಟೀನಾಗಳು ಭಾರತಕ್ಕೆ ಪ್ರಮುಖ ಸೂರ್ಯಕಾಂತಿ ಎಣ್ಣೆ ಪೂರೈಕೆದಾರ ರಾಷ್ಟ್ರಗಳಾಗಿ ಹೊರಹೊಮ್ಮಿವೆ. ಆಗಸ್ಟ್‌ ತಿಂಗಳಲ್ಲಿ ಭಾರತವು ಬರೋಬ್ಬರಿ 1.35 ಲಕ್ಷ ಟನ್‌ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿದೆ.

Advertisement

ರಷ್ಯಾ-ಉಕ್ರೇನ್‌ ಯುದ್ಧಕ್ಕೆ ಮುನ್ನ ಭಾರ ತವು ಆಮದು ಮಾಡಿಕೊಳ್ಳುತ್ತಿದ್ದ ಸೂರ್ಯ ಕಾಂತಿ ಎಣ್ಣೆಯ ಪೈಕಿ ಶೇ.70ರಷ್ಟನ್ನು ಉಕ್ರೇನ್‌ ಪೂರೈಸುತ್ತಿತ್ತು. ಶೇ.20ರಷ್ಟನ್ನು ರಷ್ಯಾದಿಂದ ತರಿಸಲಾಗುತ್ತಿತ್ತು. ಆದರೆ ಯುದ್ಧ ಆರಂಭವಾದ ಬಳಿಕ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದ್ದು, ಈಗ ರಷ್ಯಾ ಮತ್ತು ಅರ್ಜೆಂಟೀನಾವೇ ಹೆಚ್ಚಿನ ಪ್ರಮಾಣದಲ್ಲಿ ಭಾರತಕ್ಕೆ ಈ ಎಣ್ಣೆಯನ್ನು ಸರಬರಾಜು ಮಾಡುತ್ತಿವೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಭಾರತ 71,340 ಟನ್‌ ಎಣ್ಣೆಯನ್ನು ಆಮದು ಮಾಡಿಕೊಂಡಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ಅದು 1.35 ಲಕ್ಷ ಟನ್‌ಗೆàರಿದೆ. ಅಂದರೆ ಶೇ.89.6ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next