Advertisement

ವಿಶ್ವದ ಅಗ್ಗದ ನಗರಗಳಲ್ಲೊಂದು “ಅಹ್ಮದಾಬಾದ್‌’

09:18 PM Dec 01, 2021 | Team Udayavani |

ಲಂಡನ್‌: ಗುಜರಾತ್‌ ರಾಜಧಾನಿ ಅಹ್ಮದಾಬಾದ್‌ ನಗರ, ವಿಶ್ವದಲ್ಲೇ ಅಗ್ಗದ ನಗರಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ಬ್ರಿಟನ್‌ ಮೂಲದ ಎಕಾನಾಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌(ಇಐಯು) ಸಂಸ್ಥೆಯು ನಡೆಸಿರುವ ಸಮೀಕ್ಷೆಯಲ್ಲಿ ಈ ವಿಚಾರ ಹೊರಬಿದ್ದಿದೆ.

ಕೊರೊನಾದಿಂದ ಉಂಟಾದ ಆರ್ಥಿಕ ಹೊಡೆತದಿಂದಾಗಿ ವಿಶ್ವದೆಲ್ಲೆಡೆ ಪ್ರತಿಯೊಂದು ಉತ್ಪನ್ನಗಳ ಮೇಲಿನ ಬೆಲೆ ಏರಿಕೆಯಾಗಿದೆ. ವಿಶ್ವವೇ ದುಬಾರಿಯಾಗಿ, ನಿತ್ಯ ಜೀವನ ನಡೆಸುವುದಕ್ಕೇ ಕಷ್ಟವಾಗಿರುವ ಈ ಸಮಯದಲ್ಲಿ, ಅಲ್ಪ ಆದಾಯದಲ್ಲಿ ಜೀವನ ಸಾಗಿಸಬಲ್ಲ ಟಾಪ್‌ 10 ನಗರಗಳನ್ನು ಸಮೀಕ್ಷೆಯ ಮೂಲಕ ಆಯ್ಕೆ ಮಾಡಲಾಗಿದೆ. ಅದರಲ್ಲಿ ಅಹ್ಮದಾಬಾದ್‌ 7ನೇ ಸ್ಥಾನ ಪಡೆದಿದೆ. ಈ ಟಾಪ್‌ 10 ಪಟ್ಟಿಯಲ್ಲಿ ಭಾರತದ ಯಾವುದೇ ನಗರ ಸ್ಥಾನ ಪಡೆದಿಲ್ಲ.

ಸಿರಿಯಾದ ದಮಾಸ್ಕಸ್‌ ನಗರ ವಿಶ್ವದಲ್ಲೇ ಅತ್ಯಂತ ಅಗ್ಗದ ನಗರವಾಗಿ ಹೊರಹೊಮ್ಮಿದ್ದು ಟಾಪ್‌ 1ರಲ್ಲಿದೆ. ಪಾಕಿಸ್ತಾನದ ಕರಾಚಿ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಒಟ್ಟು 173 ನಗರಗಳಲ್ಲಿ ಜೀವನ ನಡೆಸಲು ಅವಶ್ಯವಾಗಿರುವ ವಸ್ತುಗಳ ಬೆಲೆಯನ್ನು ಪರಿಗಣಿಸಿ ಸಮೀಕ್ಷೆ ನಡೆಸಲಾಗಿದೆ.

Advertisement

ಇದನ್ನೂ ಓದಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ 8 ರೂ. ಇಳಿಕೆ

ದುಬಾರಿ ನಗರಗಳು
ಅಗ್ಗದ ನಗರಗಳ ಜೊತೆಗೆ, ವಿಶ್ವದ ಅತಿ ದುಬಾರಿ ನಗರಗಳನ್ನೂ ಸಮೀಕ್ಷೆ ಮೂಲಕ ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಇಸ್ರೇಲ್‌ನ ಟೆಲ್‌ ಅವಿವ್‌ ನಗರ ಜನಜೀವನಕ್ಕೆ ಅತ್ಯಂತ ದುಬಾರಿ ಎನಿಸಿದೆ.

ಟೆಲ್‌ ಅವಿವ್‌, ಕಳೆದ ವರ್ಷ ಇಐಯು ನೀಡಿದ್ದ ದುಬಾರಿ ನಗರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿತ್ತು. ಆ ವರ್ಷ, ಮೊದಲನೇ ಸ್ಥಾನವನ್ನು ಪ್ಯಾರಿಸ್‌, ಜುರಿಚ್‌ ಮತ್ತು ಹಾಂಗ್‌ಕಾಂಗ್‌ ಹಂಚಿಕೊಂಡಿದ್ದವು. ಈ ವರ್ಷ ಪ್ಯಾರಿಸ್‌ ಮತ್ತು ಸಿಂಗಾಪುರ 2ನೇ ಸ್ಥಾನದಲ್ಲಿದ್ದರೆ, ಜುರಿಚ್‌ 3ನೇ ಹಾಗೂ ಹಾಂಗ್‌ಕಾಂಗ್‌ 4ನೇ ಸ್ಥಾನದಲ್ಲಿದೆ.

ಬೆಂಗಳೂರು ಈಗ ಅಗ್ಗದ ನಗರಿಯಲ್ಲ!
2019ರಲ್ಲಿ ಪ್ರಕಟವಾಗಿದ್ದ ಇಐಯು ಪಟ್ಟಿಯಲ್ಲಿ ವಿಶ್ವದಲ್ಲಿನ ಅಗ್ಗದ ನಗರಗಳಲ್ಲಿ ಭಾರತದ ಬೆಂಗಳೂರು, ಚೆನ್ನೈ ಮತ್ತು ದೆಹಲಿ 5, 8 ಮತ್ತು 10ನೇ ಸ್ಥಾನವನ್ನು ಪಡೆದುಕೊಂಡಿದ್ದವು. ಈ ವರ್ಷ ಪ್ರಕಟವಾದ ಪಟ್ಟಿಯಲ್ಲಿ ಈ ಮೂರೂ ನಗರಗಳು ಟಾಪ್‌ 10ರಿಂದ ಹೊರಗುಳಿದಿವೆ.

ವಿಶ್ವದ ದುಬಾರಿ ನಗರಗಳು:
1. ಟೆಲ್‌ ಅವಿವ್‌
2. ಪ್ಯಾರಿಸ್‌, ಸಿಂಗಾಪುರ
3. ಜುರಿಚ್‌
4. ಹಾಂಗ್‌ಕಾಂಗ್‌
5. ನ್ಯೂಯಾರ್ಕ್‌
6. ಜಿನಿವಾ
7. ಕೋಪನ್‌ಹೇಗ್‌
8. ಲಾಸ್‌ಏಂಜಲೀಸ್‌
9. ಒಸಾಕಾ

ವಿಶ್ವದ ಅಗ್ಗದ ನಗರಗಳು:
1. ದಮಾಸ್ಕಸ್‌(ಸಿರಿಯಾ)
2. ತ್ರಿಪೋಲಿ(ಲಿಬಿಯಾ)
3. ತಾಷ್ಕೆಂಟ್(ಉಜ್ಬೇಕಿಸ್ತಾನ)
4. ತುನಿಸ್‌(ತುನಿಸಿಯಾ)
5. ಅಲ್ಮಾಟಿ(ಕಜಕಿಸ್ತಾನ)
6. ಕರಾಚಿ(ಪಾಕಸ್ತಾನ)
7. ಅಹಮದಾಬಾದ್‌(ಭಾರತ)
8. ಅಲ್ಜೀರ್ಸ್‌(ಅಲ್ಜೀರಿಯಾ)
9. ಬ್ಯೂನಸ್‌ ಐರಿಸ್‌(ಅರ್ಜೆಂಟಿನಾ)

Advertisement

Udayavani is now on Telegram. Click here to join our channel and stay updated with the latest news.

Next