Advertisement

5ಜಿ ತಂತ್ರಜ್ಞಾನ ಪೂರ್ಣವಾಗಿ ಭಾರತದ್ದೇ: ನಿರ್ಮಲಾ ಸೀತಾರಾಮನ್‌

10:42 PM Oct 14, 2022 | Team Udayavani |

ವಾಷಿಂಗ್ಟನ್‌: 5ಜಿ ತರಂಗಾಂತರವನ್ನು ಸಂಪೂರ್ಣವಾಗಿ ಭಾರತದಲ್ಲೇ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಇತರೆ ಯಾರ ಪಾತ್ರವೂ ಇಲ್ಲ, ಯಾರಿಂದಲೂ ಏನನ್ನೂ ಪಡೆದುಕೊಂಡಿಲ್ಲ. ಇತರೆ ದೇಶಗಳಿಗೆ ಅದನ್ನು ಪೂರೈಸಲೂ ಸಿದ್ಧ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಅವರು ಜಾನ್‌ ಹಾಪಿನ್ಸ್‌ ಅಂತಾರಾಷ್ಟ್ರೀಯ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡುವಾಗ ಮೇಲಿನಂತೆ ನುಡಿದರು. ದ.ಕೊರಿಯದಿಂದ ನೆರವು ಪಡೆಯಲಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಈ ತಂತ್ರಜ್ಞಾನವನ್ನು ಯಾರಿಂದಲೂ ಪಡೆದುಕೊಂಡಿಲ್ಲ. ಇದು ಸಂಪೂರ್ಣ ಭಾರತದ್ದೇ ಉತ್ಪನ್ನ ಎಂದು ನಿರ್ಮಲಾ ಹೇಳಿದ್ದಾರೆ.

ಜಾಗತಿಕವಾಗಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನಿಂದ ಭಾರತ ಹೊರಬರಲಿದೆ. ವೇಗವಾಗಿ ಡಿಜಿಟೈಸ್‌ ಆಗುತ್ತಿದೆ, ಕೇಂದ್ರ ಸರ್ಕಾರ ಅದಕ್ಕೆ ಪೂರಕವಾಗಿ ಎಲ್ಲ ವ್ಯವಸ್ಥೆಯನ್ನು ಸಿದ್ಧಗೊಳಿಸುತ್ತಿದೆ. ಡಿಜಿಟೈಸೇಶನ್‌ ವಿಚಾರದಲ್ಲಿ ಭಾರತ ಒಂದು ಮೈಲುಗಲ್ಲನ್ನೇ ನಿರ್ಮಿಸಲಿದೆ ಎನ್ನುವುದು ನಿರ್ಮಲಾ ಅವರ ವಿಶ್ವಾಸದ ನುಡಿಗಳು. ಇದೇ ವೇಳೆ ಐಎಂಎಫ್ ವಾರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ನಿರ್ಮಲಾ, ಆಸ್ಟ್ರೇಲಿಯ, ಈಜಿಪ್ಟ್ ವಿತ್ತಸಚಿವರೊಂದಿಗೆ ಸಭೆಯನ್ನೂ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next