Advertisement

ಜೋಗಿಂದರ್‌ ಶರ್ಮ ತಂದೆ ಮೇಲೆ ಹಲ್ಲೆ

09:16 AM Jul 18, 2017 | |

ರೋಹ್ಟ್ಕ್‌: ಭಾರತದ ಮಾಜಿ ಕ್ರಿಕೆಟಿಗ, ಈಗ ಹರಿಯಾಣ ಪೊಲೀಸ್‌ ವಿಭಾಗದಲ್ಲಿ ಉನ್ನತ ಹುದ್ದೆಯಲ್ಲಿರುವ ಜೋಗಿಂದರ್‌ ಶರ್ಮ ಮತ್ತೆ ಸುದ್ದಿಯಾಗಿದ್ದಾರೆ. ಅದರೆ ತಂದೆಯ ಕಾರಣಕ್ಕೆ! ಅವರ ತಂದೆ, 68ರ ಹರೆಯದ ಓಂ ಪ್ರಕಾಶ್‌ ಶರ್ಮ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

Advertisement

ಓಂ ಪ್ರಕಾಶ್‌ ಶರ್ಮ ಶನಿವಾರ ರಾತ್ರಿ ರೋಹ್ಟ್ಕ್‌ನಲ್ಲಿ ರುವ ತಮ್ಮ ಅಂಗಡಿ ಬಾಗಿಲು ಹಾಕುತ್ತಿರುವಾಗ ಇಬ್ಬರು ಗಿರಾಕಿಗಳ ಆಗಮನವಾಗುತ್ತದೆ. ಅವರು ಸಿಗರೇಟ್‌ ಮತ್ತು ತಂಪು ಪಾನೀಯ ಖರೀದಿಸಿ ಹೋಗುತ್ತಾರೆ. ಕೂಡಲೇ ಮತ್ತೆ ಅಂಗಡಿಗೆ ಬಂದು ಜೋಗಿಂದರ್‌ ತಂದೆ ಮೇಲೆ ಹಲ್ಲೆ ನಡೆಸುತ್ತಾರೆ. ಕಿಸೆಯಿಂದ ಹಣವನ್ನು ದೋಚಲು ಮುಂದಾದಾಗ ಶರ್ಮ ತಡೆಯುತ್ತಾರೆ. ಕೂಡಲೇ ಒಬ್ಟಾತ ಚೂರಿಯಿಂದ ಅವರ ಹೊಟ್ಟೆಗೆ ಇರಿಯಲು ಮುಂದಾಗುತ್ತಾನೆ. 

ಓಂ ಪ್ರಕಾಶ್‌ ಶರ್ಮ ಚೂರಿ ಸೆಳೆದುಕೊಂಡಾಗ ಇಬ್ಬರೂ ಅಂಗಡಿಗೆ ನುಗ್ಗಿ ಡ್ರಾವರ್‌ನಲ್ಲಿದ್ದ ವ್ಯಾಪಾರದ ಅಷ್ಟೂ ಹಣವನ್ನು ದೋಚುತ್ತಾರೆ. ಅದರಲ್ಲಿ ಸುಮಾರು 7 ಸಾವಿರ ರೂ. ಇತ್ತು. ಅಷ್ಟೇ ಅಲ್ಲ, ದುಷ್ಕರ್ಮಿಗಳಿಬ್ಬರೂ ಶರ್ಮರನ್ನು ಅಂಗಡಿಯೊಳಗೆ ಕೂಡಿಹಾಕಿ ಪರಾರಿಯಾಗುತ್ತಾರೆ. 2ನೇ ಪುತ್ರ ದೀಪಕ್‌ ಶರ್ಮ ಬಂದು ಬಾಗಿಲು ಒಡೆದು ಓಂ ಪ್ರಕಾಶ್‌ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸುತ್ತಾರೆ. ಈಗ ಅವರು ಬಿಡುಗಡೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next