Advertisement
ರಾಕೆಟ್ ವಿಶೇಷತೆ :
- ಅದು ಆರು ಮೀಟರ್ ಎತ್ತರ ಹೊಂದಿದೆ.
- ಭಾರತದ ಎರಡು ಮತ್ತು ವಿದೇಶದ ಒಂದು ಪೇಲೋಡ್‌ಗಳನ್ನು ಹೊಂದಿದೆ.
- ದೇಶದ ಬಾಹ್ಯಾಕಾಶ ಕ್ಷೇತ್ರಕ್ಕೆ ಆಧುನಿಕತೆಯ ಸ್ಪರ್ಶ ನೀಡಿದ ವಿಜ್ಞಾನಿ ಡಾ.ವಿಕ್ರಂ ಸಾರಾಭಾಯ್ ಹೆಸರಿನಲ್ಲಿ ಹೆಸರು ಇರಿಸಲಾಗಿದೆ.
- ಅದು ಸಿಂಗಲ್ ಎಂಜಿನ್ ಹೊಂದಿದ್ದು, 815 ಕೆಜಿ ವರೆಗೆ ಇರುವ ಉಪಗ್ರಹಗಳನ್ನು ಹೊತ್ತೂಯ್ಯಲಿದೆ.
- ದೇಶದಲ್ಲಿ ಖಾಸಗಿ ಕಂಪನಿಗಳಿಗೆ ರಾಕೆಟ್ ಉಡಾವಣೆ ಮಾಡಲು ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ.
- ಈ ಉಡಾವಣೆ ಯಶಸ್ವಿಯಾದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅವಕಾಶವನ್ನು ಇತರರಿಗೆ ಸೃಷ್ಟಿ ಮಾಡಲಿದೆ.
- ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೇಷನ್ ಆ್ಯಂಡ್ ಅಥೋರೈಸೇಷನ್ ಸೆಂಟರ್ (ಇನ್-ಸ್ಪೇಸ್) ನೇತೃತ್ವದಲ್ಲಿ ಹೊಸ ಸಂಶೋಧನೆಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಲು.
Related Articles
Advertisement
3 ರಾಕೆಟ್‌ಗಳು :
ಸ್ಕೈರೂಟ್ ಏರೋಸ್ಪೇಸ್ ಎಂಬ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್ ವಿಕ್ರಂ-1 480 ಕೆಜಿ ಸಾಮರ್ಥ್ಯ, ವಿಕ್ರಂ-2 595 ಕೆಜಿ ಸಾಮರ್ಥ್ಯ ವಿಕ್ರಂ-3 595 ಕೆಜಿ ಸಾಮರ್ಥ್ಯ ಇರುವ ರಾಕೆಟ್‌ಗಳನ್ನು ಅಭಿವೃದ್ಧಿಪಡಿಸಿತ್ತು.
“ಪ್ರಾರಂಭ’ ಹೆಸರಿನ ಮಿಷನ್:
“ಪ್ರಾರಂಭ’ ಎಂಬ ಹೆಸರಿನ ಧ್ಯೇಯವನ್ನು ಇರಿಸಿಕೊಂಡು ಸ್ಕೈರೂಟ್ ಏರೋಸ್ಪೇಸ್ ಮೂರು ಪೇಲೋಡ್‌ಗಳನ್ನು ಉಡಾಯಿಸಲಿದೆ. ಅದರಲ್ಲಿ ಚೆನ್ನೈನ ಸ್ಪೇಸ್ ಕಿಡ್ಜ್ (Spacekidz) ಎಂಬ ಸಂಸ್ಥೆ ನಿರ್ಮಿಸಿದ “ಫನ್-ಸ್ಯಾಟ್’ ಎಂಬ ಉಪಗ್ರಹವೂ ನಭಕ್ಕೆ ಉಡಾವಣೆಗೊಳ್ಳಲಿದೆ. ಅದು 2.5 ಕೆಜಿ ತೂಕ ಹೊಂದಿದೆ. ಅಮೆರಿಕ, ಭಾರತ, ಸಿಂಗಾಪುರ ಮತ್ತು ಇಂಡೋನೇಷ್ಯಾದ ಮಕ್ಕಳು ಅದನ್ನು ನಿರ್ಮಿಸಿದ್ದಾರೆ.