Advertisement

101ನೇ ವಯಸ್ಸಲ್ಲೂ ಸಾಧನೆ

06:00 AM Oct 09, 2017 | Team Udayavani |

ಹೊಸದಿಲ್ಲಿ: ಬದುಕಿನ ಶತಮಾನದ ಹೊಸ್ತಿಲಿನಲ್ಲಿರುವ ವೃದ್ಧೆಯೊಬ್ಬರು ನ್ಯೂಜಿಲೆಂಡ್‌ನ‌ಲ್ಲಿ 100 ಮೀಟರ್‌ ಓಟದಲ್ಲಿ ಗೆದ್ದು ಜಗತ್ತನ್ನೇ ನಿಬ್ಬೆರಗಾಗಿಸಿದ್ದಲ್ಲದೆ, ಸ್ಪೇನ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವರ್ಲ್ಡ್ ಮಾಸ್ಟರ್ಸ್‌ ರೇಸ್‌ನಲ್ಲಿ ಭಾಗವಹಿ ಸಲು ತಯಾರಿ ನಡೆಸಿದ್ದಾರೆ. ಚಂಡೀಗಢದ ಮನ್‌ ಕೌರ್‌ ನ್ಯೂಜಿಲೆಂಡ್‌ಗೆ ತೆರಳಿ ಕಳೆದ ವರ್ಷ ನಡೆದ 100 ಮೀಟರ್‌ ರೇಸ್‌ನಲ್ಲಿ ಕೇವಲ 1 ನಿಮಿಷ 14 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ್ದರು.

Advertisement

ಭಾರತದಲ್ಲಿ ಗುರುತಿಸಲೇ ಇಲ್ಲ!: ಇಂತಹ ಸಾಧನೆಗೈದರೂ ತಾಯ್ನಾಡಿನಲ್ಲಿ ಈ ಅಜ್ಜಿಯನ್ನು ಗುರುತಿಸಿದವರ ಸಂಖ್ಯೆ ಅತ್ಯಂತ ಕಡಿಮೆ. ಆದರೆ ವಿಶ್ವದ ಇತರೆಡೆ ಆಕೆಗೆ ಭಾರೀ ಸಮ್ಮಾನವೇ ಕಾದಿತ್ತು. ನ್ಯೂಜಿಲೆಂಡ್‌ನ‌ಲ್ಲಿ ರನ್ನಿಂಗ್‌ ರೇಸ್‌ಗಾಗಿ ತೆರಳಿದ್ದಾಗಲೇ ಕೌರ್‌ ಅಲ್ಲಿ ಜನಪ್ರಿಯವಾಗಿದ್ದರು. ಅಷ್ಟೇ ಅಲ್ಲ ರೇಸ್‌ನಲ್ಲಿ ಗೆದ್ದಾಗ ನ್ಯೂಜಿಲೆಂಡ್‌ ಅಧಿಕಾರಿಗಳು ಅವರಿಗೆ ಔತಣಕೂಟ ಹಮ್ಮಿಕೊಂಡಿದ್ದರು. ಆದರೆ ಭಾರತಕ್ಕೆ ಬಂದಾಗ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲು ಯಾರೂ ಬಂದಿರಲಿಲ್ಲ ಎಂದು ಕೌರ್‌ ಪುತ್ರ ಗುರುದೇವ್‌ ಸಿಂಗ್‌ ಹೇಳಿದ್ದಾರೆ.

ದಿನಕ್ಕೆ ಆರು ರೋಟಿಯೇ ಆಹಾರ: 101ನೇ ವಯಸ್ಸಿನಲ್ಲೂ ಕೌರ್‌ ಇಷ್ಟು ಗಟ್ಟಿ ಮುಟ್ಟಾಗಿರುವುದರ ಗುಟ್ಟು ರೋಟಿ! ದಿನಕ್ಕೆ ಆರು ರೋಟಿ ಸೇವಿಸುವ ಕೌರ್‌, ಇದರ ಜತೆಗೆ ಮೊಳಕೆ ಕಾಳು ಮತ್ತು ಬಾರ್ಲಿ ಸೇವಿಸುತ್ತಾರೆ. ಜತೆಗೆ ಸೋಯಾ ಹಾಲು, ಹಣ್ಣುಗಳು ಮತ್ತು ಹಣ್ಣಿನ ರಸವೇ ಆಕೆಯ ಪ್ರಮುಖ ಆಹಾರ ಎಂದು ಪುತ್ರ ಸಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next