Advertisement

5 ಗಂಟೆ ಮೊಬೈಲಲ್ಲೇ ದಿನ ಕಳೆದಿದ್ದ ಭಾರತೀಯರು!

08:30 PM Jan 18, 2022 | Team Udayavani |

ನವದೆಹಲಿ: ಕಳೆದ ವರ್ಷ ಲಾಕ್‌ಡೌನ್‌, ವರ್ಕ್‌ ಫ್ರಂ ಹೋಂ, ವರ್ಕ್‌ ಫ್ರಂ ಎನಿವೇರ್‌ ಸೇರಿ ಅನೇಕ ಹೊಸತನಕ್ಕೆ ತೆರೆದುಕೊಂಡಂತ ವರ್ಷ. ಈ ವರ್ಷದಲ್ಲಿ ಭಾರತೀಯರು ಅತಿ ಹೆಚ್ಚು ಫೋನ್‌ ಬಳಕೆ ಮಾಡಿದ್ದಾರೆ.

Advertisement

ಆ್ಯಪ್‌ಅನ್ನೀ ಹೆಸರಿನ ಜಾಗತಿಕ ಆ್ಯಪ್‌ ಗುಪ್ತಚರ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದ ಜನರು 2021ರಲ್ಲಿ ಪ್ರತಿದಿನ 4.7 ತಾಸುಗಳ ಕಾಲ ಫೋನ್‌ನಲ್ಲೇ ಕಳೆದಿದ್ದಾರೆ.

2021ರಲ್ಲಿ ಭಾರತೀಯರು 665 ಬಿಲಿಯನ್‌ ಗಂಟೆಗಳ ಸಮಯವನ್ನು ಫೋನಿನಲ್ಲಿ ಕಳೆದಿದ್ದಾರೆ. ಅದು 2019ರಲ್ಲಿ 381 ಬಿಲಿಯನ್‌ ಗಂಟೆಯಷ್ಟಾಗಿತ್ತು. ಹೆಚ್ಚು ಮೊಬೈಲ್‌ ಬಳಸಿದ ದೇಶಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಭಾರತ ತನ್ನದಾಗಿಸಿಕೊಂಡಿದೆ. ಅದರಲ್ಲಿ ಬ್ರೆಜಿಲ್‌ ಮೊದಲ ಸ್ಥಾನದಲ್ಲಿದ್ದರೆ, ಇಂಡೋನೇಷಿಯಾ, ದಕ್ಷಿಣ ಕೋರಿಯಾ ಮತ್ತು ಮೆಕ್ಸಿಕೋ ಉಳಿದ 3 ಸ್ಥಾನಗಳಲ್ಲಿವೆ.

ಇದನ್ನೂ ಓದಿ:ಪ್ರಧಾನಿ ಮೋದಿಯಿಂದ ಕಾಶಿ ಕ್ಷೇತ್ರಕ್ಕೆ ವಿಶ್ವ ಪ್ರಸಿದ್ಧಿ: ಶಿವಾಚಾರ್ಯ ಮಹಾಸ್ವಾಮೀಜಿ

ಅದರಲ್ಲಿ 7.6 ಬಿಲಿಯನ್‌ ಸಮಯ ಆನ್‌ಲೈನ್‌ ಶಾಪಿಂಗ್‌ ಆ್ಯಪ್‌ಗ್ಳದ್ದಾಗಿದೆ. ಪ್ರತಿ ಭಾರತೀಯ ತಿಂಗಳಿಗೆ ಸರಾಸರಿ 19.8 ಗಂಟೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಮತ್ತು 13 ಗಂಟೆಗಳನ್ನು ಇನ್‌ಸ್ಟಾಗ್ರಾಂನಲ್ಲಿ ಕಳೆದಿದ್ದಾರೆ.

Advertisement

ಡೌನ್‌ಲೋಡ್‌ಗೆ 2ನೇ ಸ್ಥಾನ:
ಭಾರತ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದರಲ್ಲಿ 2ನೇ ಸ್ಥಾನದಲ್ಲಿದೆ. ಅದರಲ್ಲಿ ಮೊದಲನೇ ಸ್ಥಾನದಲ್ಲಿ ಚೀನಾವಿದೆ. ಭಾರತದಲ್ಲಿ 2021ರಲ್ಲಿ 26.6 ಬಿಲಿಯನ್‌ ಆ್ಯಪ್‌ ಡೌನ್‌ಲೋಡ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next