ಹೊಸದಿಲ್ಲಿ: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಆಹಾರಗಳು ದುಬಾರಿಯಾಗಿದ್ದರೂ ಅವುಗಳನ್ನು ಕೊಂಡುಕೊಳ್ಳಲು ಗ್ರಾಹಕ ಹಿಂಜರಿಯುತ್ತಿಲ್ಲ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ತೀವ್ರ ಸಂಚಲನ ಮೂಡಿಸಿದ ಸ್ವಿಗ್ಗಿ ಒಳ್ಳೆಯ ಗ್ರಾಹಕ ವಲಯವನ್ನು ಹೊಂದಿದೆ. ಇದಕ್ಕೆ ಪೈಪೋಟಿ ಎಂಬಂತೆ ಝೋಮೇಟೋ, ಉಬರ್ ಈಟ್ಸ್ ಮೊದಲಾದ ಆಹಾರ ವಿತರಣಾ ಸಂಸ್ಥೆಗಳೂ ಇವೆ. ಇದಕ್ಕೆ ಪೂರಕವಾಗಿ ಮಂಗಳವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಸೋಮವಾರ ಬಿಡುಗಡೆಯಾದ ತನ್ನ ವಾರ್ಷಿಕ ವರದಿಯಲ್ಲಿ, ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ಹೇಳುವಂತೆ, 2019ರ ಜನವರಿ ಮತ್ತು ನವೆಂಬರ್ ನಡುವೆ, ಭಾರತೀಯರು ನಿಮಿಷಕ್ಕೆ ಸರಾಸರಿ 95 ಬಿರಿಯಾನಿಗಳನ್ನು ಆದೇಶಿಸಿ¨ªಾರೆ.ಅಂದರೆ ಪ್ರತಿ ಸೆಕೆಂಡಿಗೆ 1.6 ಬಿರಿಯಾನಿಗಳು ಮಾರಾಟವಾಗುತ್ತವೆ.
ಬಿರಿಯಾನಿಯ ಮೇಲಿನ ಜನರ ಪ್ರೀತಿ ಕಡಿಮೆಯಾಗಿಲ್ಲ. ಇದು ಸತತ ಮೂರನೇ ವರ್ಷವಾಗಿದ್ದು, ಇದು ಸ್ವಿಗ್ಗಿಯಲ್ಲಿ ಹೆಚ್ಚು ಆರ್ಡರ್ ಮಾಡಲಾದ ಆಹಾರದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲ ಬಾರಿ ಸ್ವಿಗ್ಗಿ ಬಳಸುವವರೂ ಬಿರಿಯಾನಿಯನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬಿರಿಯಾನಿ ಆಹಾರವನ್ನು ಸ್ವಿಗ್ಗಿ ಒಳ್ಳೆಯ ಪ್ಯಾಕ್ ಮೂಲಕ ಒದಗಿಸುತ್ತಿದೆ. ಬಟರ್ ಚಿಕನ್ ಅನ್ನು ಗ್ರಾಹಕ ಆರ್ಡರ್ ಮಾಡಿದರೆ, ಅದನ್ನು ತಿನ್ನಲು ನಾನ್ ಅಥವಾ ಕೆಲವು ವಿಧದ ಕಾರ್ಬ್ಗಳು ಬೇಕಾಗುತ್ತದೆ. ಆದರೆ ಬಿರಿಯಾನಿ ಸುಲಭವಾಗಿ ತಿನ್ನಬಹುದಾಗಿದ್ದು, ಅದೇ ಕಾರಣಕ್ಕೆ ಗ್ರಾಹಕ ಸ್ನೇಹಿಯಾಗಿದೆ ಎಂದು ಹೇಳಲಾಗುತ್ತಿದೆ. ಬಿರಿಯಾನಿ ತಟ್ಟೆಯಾಕಾರದ ಪಾತ್ರೆಯಲ್ಲೇ ಬರುತ್ತಿದ್ದು, ನೀವು ಅದನ್ನು ಬರುವ ಪಾತ್ರೆಯಿಂದ ಹೊರತೆಗೆಯುವ ಅಗತ್ಯವಿಲ. ಮಾತ್ರವಲ್ಲದೇ ಒಂದು ಚಮಚದ ಸಹಾಯದಿಂದ ತಿನ್ನಬಹುದಾಗಿದೆ. ಇದೇ ಕಾರಣಕ್ಕೆ ಶ್ರಮಿಕ ವರ್ಗ ಇದನ್ನು ಹೆಚ್ಚು ತಿನ್ನುತ್ತಾರೆ.
ಯಾವೆಲ್ಲ ಬಿರಿಯಾನಿ
ಸ್ವಿಗ್ಗಿ ಮೂಲಕ ಹೆಚ್ಚು ಮಾರುಕಟ್ಟೆ ಕಂಡ ಬಿರಿಯಾನಿಗಳಲ್ಲಿ ಕೇವಲ ಚಿಕನ್ ಬಿರಿಯಾನಿಗಳು ಮಾತ್ರ ಅಲ್ಲ. ಅಲ್ಲಿ ಮಟನ್, ಚಿಕನ್, ಸೀಗಡಿ, ತರಕಾರಿ, ಮೊಟ್ಟೆ – ವಿವಿಧ ರೀತಿಯ ಬಿರಿಯಾನಿಗಳು ಸೇರಿದೆ. ದೇಶಾದ್ಯಂತ ಸ್ವಿಗ್ಗಿ 35,000ಕ್ಕೂ ಹೆಚ್ಚು ಆಯ್ಕೆಗಳೊಂದಿಗೆ ಆಹಾರವನ್ನು ವಿತರಿಸುತ್ತಿದೆ.