Advertisement

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

03:04 PM Jun 17, 2024 | Team Udayavani |

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಭಾರತದಾದ್ಯಂತ ನಡೆದ ಸೈಬರ್‌ ವಂಚನೆ ಪ್ರಕರಣಗಳಲ್ಲಿ ಸಾರ್ವಜನಿಕರು ಕಳೆದುಕೊಂಡ ಹಣ ಕೆಲವು ರಾಜ್ಯಗಳ ವಾರ್ಷಿಕ ವೆಚ್ಚಕ್ಕೆ ಹೋಲಿಸಬಹುದಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:IND-W vs SA-W; 7000 ರನ್ ದಾಖಲೆ ಬರೆದ ಸ್ಮೃತಿ ಮಂಧನಾ; ನಾಯಕಿ ಹರ್ಮನ್ ದಾಖಲೆ ಪತನ

ಕೇಂದ್ರ ಸರ್ಕಾರ ಇತ್ತೀಚೆಗೆ ಬಿಡುಗಡೆಗೊಳಿಸಿದ ಅಂಕಿಅಂಶದ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಸೈಬರ್‌ ವಂಚನೆಯಲ್ಲಿ ಭಾರತೀಯರು ಕಳೆದುಕೊಂಡ ಹಣ ಬರೋಬ್ಬರಿ 25,000 ಸಾವಿರ ಕೋಟಿ. ಇದು ಸಿಕ್ಕಿಂ ರಾಜ್ಯದ ವಾರ್ಷಿಕ ಬಜೆಟ್‌ ಗಿಂತ ದುಪ್ಪಟ್ಟಾದ ಹಣವಾಗಿದೆ.

ಸೈಬರ್‌ ವಂಚನೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಇನ್ಸ್ಟಾಗ್ರಾಮ್‌, ವಾಟ್ಸಪ್‌ ಮತ್ತು ಗೂಗಲ್‌ ಜತೆ ಉನ್ನತ ಮಟ್ಟದ ಸಭೆ ನಡೆಸಿರುವುದಾಗಿ ವರದಿ ತಿಳಿಸಿದೆ.

ಮೂರು ವರ್ಷಗಳಲ್ಲಿ 25,000 ಸಾವಿರ ಕೋಟಿ ಸೈಬರ್‌ ವಂಚನೆಯಲ್ಲಿ ಕಳೆದುಕೊಂಡಿದ್ದು, ಕಳೆದ ವರ್ಷ ದಿನಂಪ್ರತಿ 27 ಸೈಬರ್‌ ವಂಚನೆ ಪ್ರಕರಣ ದಾಖಲಾಗಿತ್ತು. 2024ರ ಜನವರಿಯಿಂದ ಜೂನ್‌ ವರೆಗೆ ಸೈಬರ್‌ ಕ್ರೈಮ್‌ ಗೆ ಸಂಬಂಧಿಸಿದಂತೆ 709 ಪ್ರಕರಣಗಳು ದಾಖಲಾಗಿದ್ದು, ಸುಮಾರು ಒಂದು ಕೋಟಿ ರೂಪಾಯಿಯಷ್ಟು ಕಳೆದುಕೊಂಡಿದ್ದು, ಒಟ್ಟು ಮೊತ್ತ 1,421 ಕೋಟಿ ರೂಪಾಯಿ ಎಂದು ಅಂಕಿಅಂಶ ತಿಳಿಸಿದೆ.

Advertisement

ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ, ದೇಶದಲ್ಲಿನ ಸೈಬರ್‌ ವಂಚನೆ ಜಾಲದಲ್ಲಿ ಬಂಧಿತರ ಸಂಖ್ಯೆ ತುಂಬಾ ಕಡಿಮೆ. ಸೈಬರ್‌ ವಂಚನೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಶೇ.1ರಷ್ಟಿದೆ ಎಂದು ತಿಳಿಸಿದೆ.

ಸೈಬರ್‌ ವಂಚನೆಗೆ ಸಂಬಂಧಿಸಿದಂತೆ ಸುಮಾರು 66,000 ಸಾವಿರಕ್ಕೂ ಅಧಿಕ ಎಫ್‌ ಐಆರ್‌ ದಾಖಲಾಗಿದೆ. ಆದರೆ ಈವರೆಗೆ ಬಂಧಿತರಾದವರ ಸಂಖ್ಯೆ ಕೇವಲ 500 ಮಾತ್ರ ಎಂದು ಅಂಕಿಅಂಶ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next