Advertisement
ಪ್ರಸ್ತುತ ವ್ಯವಸ್ಥೆಯು ಮೆರಿಟ್ ಆಧರಿತವಾಗಿದ್ದು, ವಯಸ್ಸು, ಜ್ಞಾನ, ಉದ್ಯೋಗ ಅವಕಾಶಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿ ಪಾಯಿಂಟ್‌ಗಳನ್ನು ನೀಡಲಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ಅಂದರೆ ಕಡಿಮೆ ವಯಸ್ಸಿನವರಾಗಿದ್ದು, ಹೆಚ್ಚು ಸಂಬಳ ಪಡೆಯುವ ಉದ್ಯೋಗದಲ್ಲಿದ್ದರೆ ಮತ್ತು ವಿಶೇಷ ಕೌಶಲಗಳನ್ನು ಹೊಂದಿದ್ದರೆ ಅಂಥವರಿಗೆ ಅಮೆರಿಕದ ಪೌರತ್ವ ಆದ್ಯತೆಯ ಮೇರೆಗೆ ಲಭ್ಯವಾಗಲಿದೆ. ಈ ನೀತಿಯಿಂದಾಗಿ ಅಮೆರಿಕನ್ನರ ಉದ್ಯೋಗದ ಹಿತಾಸಕ್ತಿಯನ್ನೂ ರಕ್ಷಿಸಬಹುದಾಗಿದೆ. ನಾಗರಿಕ ಸಾಮಾನ್ಯ ಜ್ಞಾನ ಪರೀಕ್ಷೆ ಹಾಗೂ ಇಂಗ್ಲಿಷ್ ಭಾಷೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಪೌರತ್ವಕ್ಕೆ ಪರಿಗಣಿಸಲಾಗುತ್ತದೆ. ಯುವ ಮತ್ತು ಕೌಶಲ್ಯಯುತ ಉದ್ಯೋಗಿಗಳ ಕೋಟಾವನ್ನು ಪ್ರಸ್ತುತ ಇರುವ ಶೇ.12ರಿಂದ ಶೇ.57ಕ್ಕೆ ಏರಿಸಲಾಗಿದೆ. ಅಲ್ಲದೆ, ಗ್ರೀನ್ ಕಾರ್ಡ್ ಬದಲಿಗೆ ‘ಬಿಲ್ಡ್ ಅಮೆರಿಕ’ ಎಂಬ ಹೆಸರಿನ ವೀಸಾ ನೀಡಲಾಗುತ್ತದೆ.
Advertisement
ಟ್ರಂಪ್ ಹೊಸ ವಲಸೆ ನೀತಿಯಿಂದ ಭಾರತಕ್ಕೆ ಅನುಕೂಲ
01:11 AM May 18, 2019 | mahesh |
Advertisement
Udayavani is now on Telegram. Click here to join our channel and stay updated with the latest news.