Advertisement

Bangladeshದಲ್ಲಿ ಹಿಂದೂಗಳ ಸುರಕ್ಷೆ ಬಗ್ಗೆ ಭಾರತೀಯರ ಕಳವಳ: ಮೋದಿ

12:40 AM Aug 16, 2024 | Team Udayavani |

ಹೊಸದಿಲ್ಲಿ: ನೆರೆ ದೇಶ ಬಾಂಗ್ಲಾದಲ್ಲಿ ಹಿಂದೂಗಳು ಹಾಗೂ ಅಲ್ಪಸಂಖ್ಯಾಕರ ಸುರಕಕ್ಷೆ ಬಗ್ಗೆ 140 ಕೋಟಿ ಭಾರತೀಯರು ಚಿಂತಿತರಾಗಿದ್ದಾರೆ. ಅಲ್ಲಿನ ಪರಿಸ್ಥಿತಿ ಆದಷ್ಟು ಬೇಗ ಸಹಜತೆಗೆ ಮರಳುವ ವಿಶ್ವಾಸವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Advertisement

ಜತೆಗೆ ಭಾರತವು ಶಾಂತಿಗೆ ಬದ್ಧವಾಗಿದ್ದು, ನಾವು ಬಾಂಗ್ಲಾದೇಶದ ಹಿತೈಷಿಗಳಾಗಿದ್ದೇವೆ. ಆ ದೇಶದ ಅಭಿವೃದ್ಧಿಯ ಪಯಣದಲ್ಲಿ ನಮ್ಮ ದೇಶ ಸದಾ ಬೆಂಬಲ ನೀಡಲಿದೆ ಎಂದೂ ಭರವಸೆ ನೀಡಿದ್ದಾರೆ. ಬಾಂಗ್ಲಾದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ ಸರಕಾರ ಪತನಗೊಂಡ ಬಳಿಕ ಹಿಂದೂ ಸಮುದಾಯ ಮತ್ತು ದೇಗುಲಗಳನ್ನು ಗುರಿಯಾಗಿಸಿ ನಡೆಯುತ್ತಿರುವ ದಾಳಿಯ ಹಿನ್ನೆಲೆಯಲ್ಲಿ ಮೋದಿ ಈ ಮಾತುಗಳನ್ನಾಡಿದ್ದಾರೆ.

ನಮ್ಮ ನೆರೆರಾಷ್ಟ್ರವು ಶಾಂತಿ ಮತ್ತು ಸಮೃದ್ಧಿಯ ಹಾದಿಯಲ್ಲಿ ಸಾಗಲಿ ಎಂದು ನಾವು ಬಯಸುತ್ತೇವೆ. ನಾವು ಮಾನವತೆಯ ಕಲ್ಯಾಣದ ಮೇಲೆ ನಂಬಿಕೆ ಇಟ್ಟವರು. ಬಾಂಗ್ಲಾದ ಅಭಿವೃದ್ಧಿಯ ಪಯಣದಲ್ಲಿ ನಾವೂ ಸಾಥ್‌ ನೀಡುತ್ತೇವೆ ಎನ್ನುವ ಮೂಲಕ ಮೋದಿಯವರು ಬಾಂಗ್ಲಾದ ಮಧ್ಯಂತರ ಸರಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬದ್ಧ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ರಾಜಸ್ಥಾನಿ ಲೆಹರಿಯಾ ಪೇಟದಲ್ಲಿ ಮೋದಿ ಶೈನ್‌
ಹೊಸದಿಲ್ಲಿ: ಸ್ವಾತಂತ್ರೊéàತ್ಸವದಲ್ಲಿ ಪ್ರಧಾನಿ ಮೋದಿ ಕಿತ್ತಳೆ ಬಣ್ಣದ ರಾಜಸ್ಥಾನಿ ಪೇಟ ಧರಿಸಿ ಮಿಂಚಿದ್ದಾರೆ. ಪ್ರತೀ ಬಾರಿಯೂ ಭಾರ ತೀಯ ಸಂಸ್ಕೃತಿ ಬಿಂಬಿಸುವ ವಿಭಿನ್ನ ಪೇಟವನ್ನು ಮೋದಿ ಧರಿಸುತ್ತಾ ಬಂದಿದ್ದಾರೆ. ಈ ಬಾರಿ ಹಳದಿ-ಹಸುರು ಪಟ್ಟಿ ಇದ್ದ ರಾಜಸ್ಥಾನಿ ಪೇಟ ಧರಿಸಿದ್ದರು. ಈ ಪೇಟದ ಜತೆಗೆ ಮೋದಿ ಬಿಳಿ ಬಣ್ಣದ ಕುರ್ತಾ -ಪ್ಯಾಂಟ್‌ ಧರಿಸಿದ್ದರು. ಇದರ ಮೇಲೆ ನೀಲಿ ಬಣ್ಣದ ಜಾಕೆಟ್‌ ಹಾಕಿದ್ದರು. ಲೆಹರಿಯಾ ವಿನ್ಯಾಸ ಥಾರ್‌ ಮರುಭೂಮಿಯಲ್ಲಿ ಕಂಡು ಬರುವ “ನ್ಯಾಚ್ಯು ರಲ್‌ ವೇವ್‌’ ಮಾದರಿಯಿಂದ ಪ್ರೇರಿತವಾಗಿದೆ.

5 ವರ್ಷದಲ್ಲಿ ಮೆಡಿಕಲ್‌ ಸೀಟು 75,000ಕ್ಕೆ: ಮೋದಿ
ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿನ ವೈದ್ಯಕೀಯ ಕೋರ್ಸುಗಳ ಸೀಟುಗಳ ಸಂಖ್ಯೆಯನ್ನು 75,000ಕ್ಕೆ ಏರಿಕೆ ಮಾಡಲಾಗುತ್ತದೆ. ಹೀಗೆಂದು ಮೋದಿ ಹೇಳಿದ್ದಾರೆ. ಈಗಾಗಲೇ ದೇಶದಲ್ಲಿ ಎಂಬಿಬಿಎಸ್‌ ಸೀಟುಗಳ ಸಂಖ್ಯೆ 1.12 ಲಕ್ಷ ಇವೆ. “ಪ್ರತಿ ವರ್ಷ ನಮ್ಮ ದೇಶದಿಂದ 25,000 ಮಂದಿ ಯುವಕರು ವಿದೇಶ ಗಳಿಗೆ ವೈದ್ಯಕೀಯ ಶಿಕ್ಷಣಕ್ಕಾಗಿ ತೆರಳುತ್ತಾರೆ.

Advertisement

ಈ ವಿಚಾರ ವೈಯಕ್ತಿಕವಾಗಿ ನನಗೆ ಅಚ್ಚರಿಯನ್ನೂ ತಂದಿದೆ’ ಎಂದರು. ಹೀಗಾಗಿ ನಮ್ಮ ದೇಶದ ಯುವಕರಿಗೆ ದೇಶದಲ್ಲಿಯೇ ಉತ್ತಮ ವೈದ್ಯಕೀಯ ಶಿಕ್ಷಣ ನೀಡಲು ಮುಂದಿನ 5 ವರ್ಷಗಳಲ್ಲಿ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು 75,000ಕ್ಕೆ ಹೆಚ್ಚಿಸುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದಿದ್ದಾರೆ.

ಎನ್‌ಸಿಸಿ ಕೆಡೆಟ್‌ಗಳಿಂದ ಮೈ ಭಾರತ್‌ ಚಿಹ್ನೆ
ದೇಶದ ವಿವಿಧ ಶಾಲೆಗಳ 2000 ವಿದ್ಯಾರ್ಥಿಗಳು, ಭೂಸೇನೆ, ನೌಕಾಪಡೆ, ಐಎಎಫ್ನ ಎನ್‌ಸಿಸಿ ಕೆಡೆಟ್‌ಗಳ ಗುಂಪು ಕೆಂಪುಕೋಟೆ ಎದುರು ಕುಳಿತು ತ್ರಿವರ್ಣ ವಸ್ತ್ರಗಳಿಂದ “ಮೈ ಭಾರತ್‌’ ಚಿಹ್ನೆಯನ್ನು ರೂಪಿಸಿದ್ದು ವಿಶೇಷವಾಗಿತ್ತು. ಅದರಲ್ಲಿ 500 ಎನ್‌ಎಸ್‌ಎಸ್‌ ಸ್ವಯಂಸೇವಕರೂ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ 6,000 ವಿಶೇಷ ಅತಿಥಿಗಳು ಭಾಗಿ
ಮೈ ಭಾರತ್‌ ಸ್ವಯಂ ಸೇವಕರು, ಬಿಆರ್‌ಒ ಸಿಬ್ಬಂದಿ, ಬುಡಕಟ್ಟು ಕುಶಲಕರ್ಮಿಗಳು, ಮೇರಿ ಮಾತಿ ಮೇರಾ ದೇಶ್‌ ಸ್ವಯಂಸೇವಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಶುಶ್ರೂಕಿ ಯರು, ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಸೇರಿ 6,000 ವಿಶೇಷ ಅತಿಥಿಗಳು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.