Advertisement
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ನೆರವೇರಿಸಿದ ಮಾತನಾಡಿ, ದೇಶದಲ್ಲಿ ಉತ್ತಮ ಆಸ್ಪತ್ರೆಗಳ ಆವಶ್ಯಕತೆ ಇದ್ದು ಇಂಡಿಯಾನ ಆಸ್ಪತ್ರೆ ಇದಕ್ಕೆ ಪೂರಕವಾಗಿ ಸಾಮಾಜಿಕ ಚಿಂತನೆಯೊಂದಿಗೆ ಸೇವೆ ನೀಡುತ್ತಿದೆ. ಜಿಲ್ಲೆ ಹಾಗೂ ಹೊರಗಿನವರಿಗೆ ಗುಣಮಟ್ಟದ ಚಿಕಿತ್ಸೆ ಇಂಡಿಯಾನದ ಮೂಲಕ ಲಭಿಸುವಂತಾಗಲಿ. ಆಸ್ಪತ್ರೆಯ ಮಾಲಕರು ಸಾಮಾಜಿಕ ಚಿಂತನೆ ಇರುವವರಾಗಿದ್ದು, ಸಂಸ್ಥೆಯೂ ಅದೇ ಸಿದ್ಧಾಂತದಲ್ಲಿ ನಿಂತಿದೆ. ಇಂಡಿಯಾನ ಆಸ್ಪತ್ರೆ ಜನರ ನಂಬಿಕೆ ಯನ್ನು ಉಳಿಸಿಕೊಂಡಿದೆ ಹಾಗೂ ಪಾರದರ್ಶಕತೆ ಕಾಯ್ದುಕೊಂಡಿದೆ ಎಂದರು.
Related Articles
Advertisement
ಕ್ಯಾನ್ಸರ್‌ಗೆ ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವ ತಂತ್ರಜ್ಞಾನದ ಅಗತ್ಯವಿದ್ದು, ಗುಣಪಡಿಸಬಹುದಾದ ನುರಿತ ಚಿಕಿತ್ಸೆಯನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್. ತಿಮ್ಮಯ್ಯ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ವೈದ್ಯಕೀಯ ಆಡಳಿತ ನಿರ್ದೇಶಕ ಡಾ| ಆದಿತ್ಯ ಭಾರದ್ವಾಜ್, ಸಿಇಒ ವಿಜಯಚಂದ್ರ ಇ., ಗೈನಕಾಲಜಿಸ್ಟ್ ಡಾ| ಸಂಗೀತಾ ಕೆ., ವೈದ್ಯಕೀಯ ನಿರ್ದೇಶಕ ಡಾ| ಅಪೂರ್ವ ಶುಭ ಹಾರೈಸಿದರು.
ಸರ್ಜಿಕಲ್ ಆಂಕಾಲಜಿಸ್ಟ್ ಡಾ| ಅಜಯ್ ಕುಮಾರ್ ರೇಡಿಯೇಷನ್ ಆಂಕಾಲಜಿಸ್ಟ್ ಡಾ| ಕೃಷ್ಣರಾಜ್ ಎಚ್.ಆರ್. ಉಪಸ್ಥಿತರಿದ್ದರು.ಮೆಡಿಕಲ್ ಆಂಕಾಲಜಿ ವಿಭಾಗದ ಡಾ| ರಮಾನಾಥ ಶೆಣೈ ವಂದಿಸಿದರು. ಕ್ವಾಲಿಟಿ ಮ್ಯಾನೇಜರ್ ನಿಧಿ ಶಾ ನಿರೂಪಿಸಿದರು.
ಹೊಸ ಕ್ಯಾನ್ಸರ್ ಸೆಂಟರ್‌ನಲ್ಲೇನಿದೆ?ಸಂಸ್ಥೆಯ ಚೇರ್ಮನ್ ಡಾ| ಅಲಿ ಕುಂಬ್ಳೆ ಮಾತನಾಡಿ, ವಿಶಿಷ್ಟ, ಪರಿಷ್ಕೃತ ಹಾಗೂ ಸುಧಾರಿತ ಚಿಕಿತ್ಸಾ ಪದ್ಧತಿ ಇರಲಿದೆ. ಹಲವು ವಿಧದ ಕ್ಯಾನ್ಸರ್‌ಗಳಿಗೆ ಒಂದೇ ಕಡೆ ಆಧುನಿಕ ಚಿಕಿತ್ಸೆ ನೀಡಲಾಗುತ್ತದೆ. ಆಧುನಿಕ ತಂತ್ರಜ್ಞಾನದ ಮೂಲಕ ದೇಹದ ಯಾವುದೇ ಭಾಗಗಳಿಗೆ ಕ್ಯಾನ್ಸರ್ ತಗಲಿದರೂ ಅದಕ್ಕೆ ವಿಶಿಷ್ಟ ಹಾಗೂ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುವುದು ಎಂದರು.