Advertisement

ಭಾರತದ ಯುವಕನಿಗೆ ವಿಶ್ವದ ಅತೀ ವೇಗದ ಕ್ಯಾಲ್ಕುಲೇಟರ್ ಎಂಬ ಹೆಗ್ಗಳಿಕೆ

06:50 PM Sep 20, 2020 | Karthik A |

ಪ್ರತಿಯೊಂದು ಮಾಹಿತಿ, ಲೆಕ್ಕಕ್ಕಾಗಿ ಕಂಪ್ಯೂಟರ್‌ ಬಳಸುವ ಈ ಕಾಲದಲ್ಲಿ ಕ್ಯಾಲ್ಕುಲೇಟರ್‌ನಷ್ಟೇ ವೇಗದಲ್ಲಿ ಲೆಕ್ಕ ಮಾಡುವ ಹೈದಾರಾಬಾದ್‌ನ ಯುವಕನನ್ನು ವಿಶ್ವವೇ ಗುರುತಿಸಿದೆ.

Advertisement

ಕಂಪ್ಯೂಟರ್‌ ಯುಗದಲ್ಲಿ ಪ್ರತಿಯೊಂದಕ್ಕೂ ನಾವು ಕ್ಯಾಲ್ಕುಲೇಟರ್‌, ಮೊಬೈಲ್‌, ಕಂಪ್ಯೂಟರ್‌ ಬಳಸುತ್ತೇವೆ. ಆದರೆ ಮನುಷ್ಯನ ಮೆದುಳು ಕೂಡ ಕಂಪ್ಯೂಟರ್‌ನಂತೆ ಕಾರ್ಯಾಚರಿಸಬಹುದು, ನಾವು ಕಂಪ್ಯೂಟರ್‌ ಅನ್ನು ಬಳಕೆ ಮಾಡುವ ಮಾದರಿಯಲ್ಲೇ ನಮ್ಮ ಮೆದುಳನ್ನು ಬಳಸಬಹುದು ಎನ್ನುವುದಕ್ಕೆ ಪ್ರಸಕ್ತ ಉದಾಹರಣೆ ಹೈದಾರಾಬಾದ್‌ನ ನೀಲಕಂಠ ಬಾನು ಪ್ರಕಾಶ್‌. ಈತನಿಗೆ ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ್‌ ಎಂದು ಕರೆಯುತ್ತಾರೆ. ಇದು ಲಿಮ್ಕಾ ದಾಖಲೆಗೂ ಸೇರ್ಪಡೆಗೊಂಡಿದೆ.

ಆಗಸ್ಟ್‌ 15, 2020ರಲ್ಲಿ ಲಂಡನ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ ಎಟ್‌ ಮೈಂಡ್‌ ನ್ಪೋಟ್ಸ್‌ ಒಲಿಂಪಿಡ್‌(MSO)ನಲ್ಲಿ ಭಾರತಕ್ಕೆ ಚಿನ್ನದ ಪದಕ ಪಡೆಯುವುದರ ಮೂಲಕ ತನ್ನ 21ನೇ ವಯಸ್ಸಿನಲ್ಲಿ ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ್‌ ಎಂದು ಕರೆಯಲ್ಪಟ್ಟಿದ್ದಾನೆ. ಈತ ದೆಹಲಿ ವಿಶ್ವವಿದ್ಯಾನಿಲಯದ ಸೈಂಟ್‌ ಸ್ಟೀಪನ್‌ ಕಾಲೇಜಿನ ಮೆತಮೆಟಿಕ್ಸ್‌ ವಿದ್ಯಾರ್ಥಿ.

“ ಭಾರತ ಮೊದಲ ಬಾರಿಗೆ MSO ದಲ್ಲಿ ಚಿನ್ನದ ಪದಕ ಪಡೆದಿದೆ. ಪ್ರತಿ ವರ್ಷ ಲಂಡನ್‌ ಈ ಸ್ಫರ್ದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತಾ ಬಂದಿದ್ದು, ಇದು ಬೌದ್ಧಿಕ ಸಾರ್ಮಥ್ಯವನ್ನು ಪರೀಕ್ಷಿಸುವ ಸ್ಪರ್ಧೆಗಳನ್ನು ನಡೆಸುತ್ತದೆ’ ಎಂದರು.

57 ವರ್ಷದವರೆಗೆ ಭಾಗವಹಿಸಬಹುದಾದ ಈ ಸ್ಪರ್ಧೆಯಲ್ಲಿ 30 ಮಂದಿ ಭಾಗವಹಿಸಿದ್ದರು. ಯುಕೆ, ಜರ್ಮನಿ, ಪ್ರಾನ್ಸ್‌ ಸೇರಿದಂತೆ ವಿಶ್ವದ 13 ದೇಶಗಳು ಇದರಲ್ಲಿ ಭಾಗವಹಿಸಿದ್ದವು. ಸಣ್ಣ ವಯಸ್ಸಿನಲ್ಲೇ ಈ ಮಟ್ಟದ ಸಾಧನೆ ಮಾಡಿದ ಬಾನು ಪ್ರಕಾಶ್‌ ಅವರಿಗೆ “ ವಿಷನ್‌ ಮ್ಯಾಥ್‌” ಲ್ಯಾಬ್‌ ಮತ್ತು ಮಕ್ಕಳು ಗಣಿತವನ್ನು ಇಷ್ಟಪಟ್ಟು ಕಲಿಯುವಂತೆ ಮಾಡುವ ಕನಸು.

Advertisement

ಭಾರತದ ಯುವಕನಿಗೆ ವಿಶ್ವದ ಅತೀ ವೇಗದ ಕ್ಯಾಲ್ಕುಲೇಟರ್‌ ಎಂಬ ಹೆಗ್ಗಳಿಕೆ
ಪ್ರತಿಯೊಂದು ಮಾಹಿತಿ, ಲೆಕ್ಕಕ್ಕಾಗಿ ಕಂಪ್ಯೂಟರ್‌ ಬಳಸುವ ಈ ಕಾಲದಲ್ಲಿ ಕ್ಯಾಲುಕ್ಯುಲೇಟರ್‌ನಷ್ಟೇ ವೇಗದಲ್ಲಿ ಲೆಕ್ಕ ಮಾಡುವ ಹೈದಾರಾಬಾದ್‌ನ ಯುವಕನನ್ನು ವಿಶ್ವವೇ ಗುರುತಿಸಿದೆ.  ಕಂಪ್ಯೂಟರ್‌ ಯುಗದಲ್ಲಿ ಪ್ರತಿಯೊಂದಕ್ಕೂ ನಾವು ಕ್ಯಾಲ್ಕುಲೇಟರ್‌, ಮೊಬೈಲ್‌, ಕಂಪ್ಯೂಟರ್‌ ಬಳಸುತ್ತೇವೆ. ಆದರೆ ಮನುಷ್ಯನ ಮೆದುಳು ಕೂಡ ಕಂಪ್ಯೂಟರ್‌ನಂತೆ ಕಾರ್ಯಾಚರಿಸಬಹುದು, ನಾವು ಕಂಪ್ಯೂಟರ್‌ ಅನ್ನು ಬಳಕೆ ಮಾಡುವ ಮಾದರಿಯಲ್ಲೇ ನಮ್ಮ ಮೆದುಳನ್ನು ಬಳಸಬಹುದು ಎನ್ನುವುದಕ್ಕೆ ಪ್ರಸಕ್ತ ಉದಾಹರಣೆ ಹೈದಾರಾಬಾದ್‌ನ ನೀಲಕಂಠ ಬಾನು ಪ್ರಕಾಶ್‌. ಈತನಿಗೆ ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ್‌ ಎಂದು ಕರೆಯುತ್ತಾರೆ. ಇದು ಲಿಮ್ಕಾ ದಾಖಲೆಗೂ ಸೇರ್ಪಡೆಗೊಂಡಿದೆ.
ಆಗಸ್ಟ್‌ 15,2020ರಲ್ಲಿ ಲಂಡನ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ ಎಟ್‌ ಮೈಂಡ್‌ ನ್ಪೋಟ್ಸ್‌ ಒಲಿಂಪಿಡ್‌(MSO)ನಲ್ಲಿ ಭಾರತಕ್ಕೆ ಚಿನ್ನದ ಪದಕ ಪಡೆಯುವುದರ ಮೂಲಕ ತನ್ನ 21ನೇ ವಯಸ್ಸಿನಲ್ಲಿ ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ್ ಎಂದು ಕರೆಯಲ್ಪಟ್ಟಿದ್ದಾನೆ. ಈತ ದೆಹಲಿ ವಿಶ್ವವಿದ್ಯಾನಿಲಯದ ಸೈಂಟ್‌ ಸ್ಟೀಪನ್‌ ಕಾಲೇಜಿನ ಮೆತಮೆಟಿಕ್ಸ್‌ ವಿದ್ಯಾರ್ಥಿ.

“ ಭಾರತ ಮೊದಲ ಬಾರಿಗೆ MSO ದಲ್ಲಿ ಚಿನ್ನದ ಪದಕ ಪಡೆದಿದೆ. ಪ್ರತಿ ವರ್ಷ ಲಂಡನ್‌ ಈ ಸ್ಫರ್ದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತಾ ಬಂದಿದ್ದು, ಇದು ಬೌದ್ಧಿಕ ಸಾರ್ಮಥ್ಯವನ್ನು ಪರೀಕ್ಷಿಸುವ ಸ್ಪರ್ಧೆಗಳನ್ನು ನಡೆಸುತ್ತದೆ’ ಎಂದರು. 57 ವರ್ಷದವರೆಗೆ ಭಾಗವಹಿಸಬಹುದಾದ ಈ ಸ್ಪರ್ಧೆಯಲ್ಲಿ 30 ಮಂದಿ ಭಾಗವಹಿಸಿದ್ದರು. ಯುಕೆ, ಜರ್ಮನಿ, ಪ್ರಾನ್ಸ್‌ ಸೇರಿದಂತೆ ವಿಶ್ವದ 13 ದೇಶಗಳು ಇದರಲ್ಲಿ ಭಾಗವಹಿಸಿದ್ದವು.  ಸಣ್ಣ ವಯಸ್ಸಿನಲ್ಲೇ ಈ ಮಟ್ಟದ ಸಾಧನೆ ಮಾಡಿದ ಬಾನು ಪ್ರಕಾಶ್‌ ಅವರಿಗೆ “ ವಿಷನ್‌ ಮ್ಯಾಥ್‌” ಲ್ಯಾಬ್‌ ಮತ್ತು ಮಕ್ಕಳು ಗಣಿತವನ್ನು ಇಷ್ಟಪಟ್ಟು ಕಲಿಯುವಂತೆ ಮಾಡುವ ಕನಸು.

 ರಂಜಿನಿ ಮಿತ್ತಡ್ಕ 

Advertisement

Udayavani is now on Telegram. Click here to join our channel and stay updated with the latest news.

Next