Advertisement
ಈ ಹಿನ್ನೆಲೆಯಲ್ಲಿ ಬಜರಂಗ್ ಪುನಿಯಾ, ರವಿ ದಹಿಯ, ವಿನೇಶ್ ಪೋಗಟ್, ಸಾಕ್ಷಿ ಮಲಿಕ್ ನೇತೃತ್ವದಲ್ಲಿ ನಡೆಸಿದ್ದ ಹೋರಾಟವನ್ನು ಕುಸ್ತಿ ಪಟುಗಳು ಸದ್ಯಕ್ಕೆ ಹಿಂಪಡೆದ್ದಾರೆ.
Related Articles
Advertisement
ತನಿಖೆಗೆ 4 ವಾರಗಳ ಗಡುವು: ಕೇಂದ್ರ ಕ್ರೀಡಾ ಸಚಿವಾಲಯ ನೇಮಿಸಿರುವ ಸಮಿತಿಗೆ ವರದಿ ನೀಡಲು 4 ವಾರಗಳ ಕಾಲಾವಕಾಶ ನೀಡಲಾಗಿದೆ. ಈ ಸಮಿತಿ ಕುಸ್ತಿಪಟುಗಳು ಮಾಡಿರುವ ಎಲ್ಲ ಆರೋಪಗಳ ವಿಚಾರಣೆ ನಡೆಸಲಿದೆ. ಅಲ್ಲಿಯವರೆಗೆ ಬೃಜ್‌ಭೂಷಣ್ ಅಧಿಕಾರದಲ್ಲಿರುವುದಿಲ್ಲ ಎಂದು ಸಚಿವ ಅನುರಾಗ್ ಘೋಷಿಸಿದರು.
ಇದರ ಬೆನ್ನಲ್ಲೇ ನಾವು ಧರಣಿ ಮುಗಿಸಿದ್ದೇವೆ. ಸರಕಾರ ನಮಗೆ ಸುರಕ್ಷೆ ಮತ್ತು ಭದ್ರತೆಯ ಭರವಸೆ ನೀಡಿದೆ ಎಂದು ಬಜರಂಗ್ ಪುನಿಯಾ ಹೇಳಿದರು.
ಕುಸ್ತಿ ಸಂಸ್ಥೆ ಸಹ ಕಾರ್ಯದರ್ಶಿ ಅಮಾನತು ಬೃಜ್‌ಭೂಷಣ್ ವಿರುದ್ಧದ ಆರೋ ಪಗಳು ಆಧಾರರಹಿತ, ಪ್ರತಿಭಟಿಸಿದ ಕುಸ್ತಿಪಟುಗಳು ಇನ್ನೂ ಸೂಕ್ತ ಸಾಕ್ಷಿಗಳನ್ನು ನೀಡಿಲ್ಲ ಎಂದಿದ್ದ ಕುಸ್ತಿ ಒಕ್ಕೂಟದ ಸಹ ಕಾರ್ಯದರ್ಶಿ ವಿನೋದ್ ತೋಮರ್‌ರನ್ನು ಕೇಂದ್ರ ಸರಕಾರ ಅಮಾನತು ಮಾಡಿದೆ. ಸ್ವತಃ ಸರಕಾರವೇ ತನಿಖಾ ಸಮಿತಿ ರಚನೆ ಮಾಡಿದ್ದರೂ ತೋಮರ್ ಕುಸ್ತಿಪಟುಗಳ ವಿರುದ್ಧ ಹರಿಹಾಯ್ದಿದ್ದರು.