Advertisement

ಉಕ್ರೈನ್‌ ವಿರುದ್ಧದ ಯುದ್ಧದಲ್ಲಿ Russiaದಿಂದ ಭಾರತೀಯರ ಬಳಕೆ; ರಕ್ಷಣೆಗಾಗಿ ಜೈಶಂಕರ್‌ ಮೊರೆ

03:10 PM Feb 21, 2024 | Team Udayavani |

ನವದೆಹಲಿ: ಉಕ್ರೈನ್‌ ವಿರುದ್ಧ ಯುದ್ಧ ಮಾಡಲು ರಷ್ಯಾ ಖಾಸಗಿ ಸೈನಿಕರು ಮತ್ತು ಕೈದಿಗಳನ್ನು ಬಳಸಿಕೊಂಡಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದ್ದು, ರಷ್ಯಾ ಹಲವು ಭಾರತೀಯ ಕಾರ್ಮಿಕರನ್ನು ಬಳಸಿಕೊಂಡಿರುವ ಆಘಾತಕಾರಿ ಅಂಶ ಕೂಡಾ ಬಹಿರಂಗಗೊಂಡಿದೆ.

Advertisement

ದನ್ನೂ ಓದಿ:ಹೊಸಬರಿಗೆ ಟಿಕೆಟ್ ನೀಡಿ… ಚಿಕ್ಕಮಗಳೂರು-ಉಡುಪಿ ಬಿಜೆಪಿ ಕಾರ್ಯಕರ್ತರಿಂದ ಕೇಂದ್ರಕ್ಕೆ ಪತ್ರ

ದ ಹಿಂದು ದೈನಿಕ ವರದಿ ಪ್ರಕಾರ, ಸೇನಾ ಭದ್ರತಾ ಸಹಾಯಕ ಹುದ್ದೆ ಎಂದು ನಂಬಿಸಿ ಭಾರತೀಯ ಏಜೆಂಟ್‌ ಮೂವರು ಭಾರತೀಯರನ್ನು ರಷ್ಯಾಕ್ಕೆ ಕಳುಹಿಸಿ ವಂಚಿಸಲಾಗಿತ್ತು. ಈ ಮೂವರನ್ನು ರಷ್ಯಾ ಉಕ್ರೈನ್‌ ವಿರುದ್ಧ ಯುದ್ಧದಲ್ಲಿ ಹೋರಾಡಲು ಬಳಸಿಕೊಂಡಿರುವುದಾಗಿ ವಿವರಿಸಲಾಗಿದೆ.

2023ರ ನವೆಂಬರ್‌ ಹೊತ್ತಿಗೆ ಅಂದಾಜು 18 ಮಂದಿ ಭಾರತೀಯರನ್ನು ರಷ್ಯಾ ಮತ್ತು ಉಕ್ರೈನ್‌ ಗಡಿಯ ವಿವಿಧ ಭಾಗಗಳಲ್ಲಿ ನಿಯೋಜಿಸಲಾಗಿತ್ತು. ಅವರಲ್ಲಿ ಒಬ್ಬರು ಯುದ್ಧದಲ್ಲಿ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

ವಂಚನೆಗೊಳಗಾಗಿರುವ ಹೈದರಾಬಾದ್‌ ನ ವ್ಯಕ್ತಿಯ ಕುಟುಂಬ ಸದಸ್ಯರೊಬ್ಬರು ಇದೀಗ ಎಐಎಂಐಎಂ ಸಂಸದ ಅಸಾದುದ್ದೀನ್‌ ಓವೈಸಿಯ ಮೊರೆ ಹೋಗಿದ್ದು, ಈ ನಿಟ್ಟಿನಲ್ಲಿ ಓವೈಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈಶಂಕರ್‌ ಹಾಗೂ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಪತ್ರ ಬರೆದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಭಾರತೀಯರು ವಾಪಸ್‌ ಆಗಲು ನೆರವು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

ಉತ್ತರಪ್ರದೇಶ, ಗುಜರಾತ್‌, ಪಂಜಾಬ್‌ ಮತ್ತು ಜಮ್ಮ-ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗದ ಜನರು ರಷ್ಯಾದಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನೆಲ್ಲಾ ಕೂಡಲೇ ರಕ್ಷಣೆ ಮಾಡಿ, ಭಾರತಕ್ಕೆ ವಾಪಸ್‌ ಕರೆತರಬೇಕ ಎಂದು ಓವೈಸಿ ಮನವಿ ಮಾಡಿಕೊಂಡಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next