Advertisement

ಮಿಂಚಿದ ಜೆಮಿಮಾ, ಮಂಧನಾ: ವಿಂಡೀಸ್ ವಿರುದ್ಧ ಸರಣಿ ಗೆದ್ದ ಭಾರತೀಯ ಮಹಿಳೆಯರು

09:53 AM Nov 08, 2019 | keerthan |

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಪಂದ್ಯವನ್ನು ಆರು ವಿಕೆಟ್ ಗಳಿಂದ ಗೆದ್ದ ಭಾರತೀಯ ಮಹಿಳೆಯರು ಏಕದಿನ ಸರಣಿಯನ್ನು 2-1 ಅಂತರದಿಂದ ವಶಪಡಿಸಿದ್ದಾರೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ನಾಯಕಿ ಸ್ಟೆಫಾನಿ ಟೇಲರ್ 79 ರನ್ ನೆರವಿನಿಂದ 194 ರನ್ ಗಳಿಸಿತು. ಇದನ್ನು ಬೆನ್ನತ್ತಿದ್ದ ಭಾರತೀಯ ಮಹಿಳೆಯರು ಕೇವಲ ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ಬೆನ್ನಟ್ಟಿದರು.

ಇದನ್ನೂ ಓದಿ : ಕೆಪಿಎಲ್ ಫಿಕ್ಸಿಂಗ್: ಇಬ್ಬರು ರಣಜಿ ಆಟಗಾರರ ಬಂಧನ

ಆರಂಭಿಕ ಆಟಗಾರ್ತಿಯರಾದ ಜೆಮಿಮಾ ರೋಡ್ರಿಗಸ್ ಮತ್ತು ಸ್ಮೃತಿ ಮಂಧನಾ ಬ್ಯಾಟಿಂಗ್ ನೆರವಿನಿಂದ ಭಾರತ ಸುಲಭ ಗೆಲುವು ಸಾಧಿಸಿತು. ಜೆಮಿಮಾ 69 ರನ್ ಗಳಿಸಿದರೆ ಮಂಧನಾ 74 ರನ್ ಗಳಿಸಿದರು.

ಮಂಧನಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಸ್ಟಿಫಾನಿ ಟೇಲರ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next