Advertisement
ಮೊದಲರ್ಧದಲ್ಲಿ ಗೋಲಿಲ್ಲಪಂದ್ಯದ ಮೊದಲ ಅವಧಿಯಲ್ಲಿ ಭಾರತ ಮಹಿಳಾ ತಂಡದ ಪ್ರದರ್ಶನ ಸಾಕಷ್ಟು ಏರಿಳಿತದಿಂದ ಕೂಡಿತ್ತು. ಆದರೆ 3ನೇ ಕ್ವಾರ್ಟರ್‌ನಲ್ಲಿ ನಾಯಕಿ ರಾಣಿ ರಾಮ್‌ಪಾಲ್ ಗೋಲಿನ ಖಾತೆ ತೆರೆದು 1-0 ಮುನ್ನಡೆ ತಂದುಕೊಟ್ಟರು. ಅನಂತರ ಸತತವಾಗಿ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತಾದರೂ ಭಾರತ ಗೋಲು ಗಳಿಸುವಲ್ಲಿ ವಿಫಲವಾಯಿತು.
Related Articles
“ಪಂದ್ಯದ ಆರಂಭದಲ್ಲಿ ನಾವು ಕೊಂಚ ಎಡವಿದೆವು. ಬಳಿಕ ಎದುರಾಳಿಗಳ ಮೇಲೆ ನಿಯಂತ್ರಣ ಸಾಧಿಸಿ ಗೋಲು ಗಳಿಸುವಲ್ಲಿ ಯಶಸ್ವಿಯಾದೆವು’ ಎಂದು ಕೋಚ್ ಸೋರ್ಡ್ ಮರಿನ್ ಹೇಳಿದರು.
Advertisement
ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ 4 ಹಾಗೂ ಗ್ರೇಟ್ ಬ್ರಿಟನ್ ವಿರುದ್ಧ ಒಂದು ಪಂದ್ಯವನ್ನಾಡಲಿದೆ.
ಕಿರಿಯರ ವಿಶ್ವಕಪ್ ಹಾಕಿಗೂ ಒಡಿಶಾ ಆತಿಥ್ಯ?ಭುವನೇಶ್ವರ: ಪುರುಷರ ವಿಶ್ವಕಪ್ ಹಾಕಿ ಕೂಟಕ್ಕೆ ಒಂದರ ಹಿಂದೊಂದರಂತೆ ಆತಿಥ್ಯ ವಹಿಸುತ್ತಿರುವ ಬೆನ್ನಲ್ಲೇ ಒಡಿಶಾದ ಭುವನೇಶ್ವರ ಈಗ ಕಿರಿಯರ ವಿಶ್ವಕಪ್ ಹಾಕಿ ಪಂದ್ಯಾವಳಿಯನ್ನೂ ಸಂಘಟಿಸಲಿದೆ ಎನ್ನಲಾಗಿದೆ. ಒಡಿಶಾ ಕ್ರೀಡಾ ಸಚಿವ ತುಷಾರ್‌ಕಾಂತಿ ಬೆಹೆರಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. “ಆತಿಥ್ಯದ ಸಾಧ್ಯತೆ ಬಗ್ಗೆ ಪ್ರತಿಯೊಂದು ಹಂತದಲ್ಲೂ ಮಾತುಕತೆ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ ಕಿರಿಯ ಹಾಕಿ ವಿಶ್ವಕಪ್ ಪಂದ್ಯಾವಳಿಗೂ ನಾವೇ ಆತಿಥ್ಯ ವಹಿಸಲಿದ್ದೇವೆ’ ಎಂದು ಬೆಹೆರಾ ಹೇಳಿದ್ದಾರೆ. ಈ ಪಂದ್ಯವನ್ನು ಒಲಿಂಪಿಕ್ಸ್ ರೀತಿಯಲ್ಲೇ 16 ಆಟಗಾರ್ತಿಯರೊಂದಿಗೆ ಆಡಲಾಗುವುದು. ಪ್ರತೀ ಪಂದ್ಯದಲ್ಲೂ ಆಟಗಾರ್ತಿಯರನ್ನು ಬದಲಾಯಿಸಲಾಗುತ್ತದೆ. ತೀವ್ರ ಒತ್ತಡವನ್ನು ಹೇಗೆ ನಿಭಾಯಿಸಬೇಕು, ಆಟಗಾರರ ಒಟ್ಟಾರೆ ಪ್ರದರ್ಶನ ಹೇಗಿರಲಿದೆ ಎನ್ನುವುದನ್ನೆಲ್ಲ ಗಮನಿಸಿ ಟೋಕಿಯೊ ಒಲಿಂಪಿಕ್ಸ್‌ಗೆ ಸಮರ್ಥ ತಂಡವನ್ನು ರಚಿಸುವುದೇ ನಮ್ಮ ಮುಖ್ಯ ಗುರಿ.
-ಸೋರ್ಡ್ ಮರಿನ್