Advertisement
ವಿ. ಜ್ಯೋತಿ ಸುರೇಖಾ, ತಿೃಷಾ ದೇಬ್, ಪಿ. ಲಿಲಿ ಚಾನು, ಮುಸ್ಕಾನ್ ಕಿರಾರ್, ದಿವ್ಯಾ ದಯಾಳ್ ಹಾಗೂ ಮಧುಮಿತಾ ಅವರನ್ನೊಳಗೊಂಡ ಭಾರತ ಕಳೆದ 4 ವಿಶ್ವಕಪ್ ಹಂತದ ಸ್ಪರ್ಧೆಗಳಲ್ಲಿ 2 ಪದಕ ಗೆದ್ದ ಸಾಧನೆ ಮಾಡಿತ್ತು. ಅಂಟಾಲ್ಯಾ ಮತ್ತು ಬರ್ಲಿನ್ ಸ್ಪರ್ಧೆಗಳೆರಡರಲ್ಲೂ ಬೆಳ್ಳಿ ಪದಕ ಜಯಿಸಿತ್ತು. ಜ್ಯೋತಿ ಸುರೇಖಾ ಮತ್ತು ಮುಸ್ಕಾನ್ ಕಿರಾರ್ ಈ ಎರಡೂ ಪದಕ ವಿಜೇತ ಭಾರತೀಯ ತಂಡದ ಸದಸ್ಯರಾಗಿದ್ದರು. ಅಂಟಾಲ್ಯಾದಲ್ಲಿ ದಿವ್ಯಾ ದಯಾಳ್ ಹಾಗೂ ಬರ್ಲಿನ್‌ನಲ್ಲಿ ತಿೃಷಾ ದೇಬ್ ಭಾರತ ತಂಡದ ತೃತೀಯ ಸದಸ್ಯರಾಗಿದ್ದರು. ಅಮೆರಿಕದ ಸಾಲ್ಟ್ಲೇಕ್ ಸಿಟಿಯಲ್ಲಿ ನಡೆದ 3ನೇ ಹಂತದ ಸ್ಪರ್ಧೆಗೆ ಆರ್ಚರಿ ಅಸೋಸಿಯೇಶನ್ ಆಫ್ ಇಂಡಿಯಾ (ಎಎಐ) ಅರ್ಜಿ ಸಲ್ಲಿಸಿಲ್ಲ.
“ಕೊನೆಗೂ ನಾವಿದನ್ನು ಸಾಧಿಸಿದೆವು. ದೇವರ ದಯೆಯಿಂದ ನಮ್ಮ ತಂಡವೀಗ ವಿಶ್ವದ ಅಗ್ರಸ್ಥಾನಕ್ಕೆ ನೆಗೆದಿದೆ. ಎಲ್ಲ ಸಾಧಕಿಯರಿಗೂ ಅಭಿನಂದನೆಗಳು. ಬೇಸರವೆಂದರೆ, ಕಂಪೌಂಡ್ ಆರ್ಚರಿ ಸ್ಪರ್ಧೆಯನ್ನು ಒಲಿಂಪಿಕ್ಸ್‌ನಲ್ಲಿ ಅಳವಡಿಸದಿರುವುದು…’ ಎಂಬುದಾಗಿ ಭಾರತ ತಂಡದ ಕೋಚ್ ಜೀವನ್‌ಜೋತ್ ಸಿಂಗ್ ತೇಜ ಪ್ರತಿಕ್ರಿಯಿಸಿದ್ದಾರೆ. ಸುರೇಖಾ-ಅಭಿಷೇಕ್ ನಂ.5
ಕಂಪೌಂಡ್ ಮಿಶ್ರ ತಂಡ ರ್‍ಯಾಂಕಿಂಗ್‌ನಲ್ಲಿ ಜ್ಯೋತಿ ಸುರೇಖಾ-ಅಭಿಷೇಕ್ ವರ್ಮ 5ನೇ ಸ್ಥಾನ ಉಳಿಸಿಕೊಂಡಿದ್ದಾರೆ. ಈ ಜೋಡಿ ಸೆ. 29-30ರಂದು ಟರ್ಕಿಯಲ್ಲಿ ನಡೆಯುವ ಕಂಪೌಂಡ್ ಮಿಕ್ಸೆಡ್ ಟೀಮ್ ಸ್ಪರ್ಧೆಗೆ ಅರ್ಹತೆ ಪಡೆದಿದೆ. ಇದೇ ವೇಳೆ ರಿಕರ್ವ್ ಮಿಶ್ರ ತಂಡ 7ನೇ ರ್‍ಯಾಂಕಿಂಗ್ ಕಾಯ್ದುಕೊಂಡಿದೆ. ವನಿತಾ ರಿಕರ್ವ್ ತಂಡ 8ನೇ ಸ್ಥಾನದಲ್ಲೇ ಮುಂದುವರಿದರೆ, ಪುರುಷರ ರಿಕರ್ವ್ ತಂಡ 12ನೇ ಸ್ಥಾನಕ್ಕೆ ಜಾರಿದೆ. ಕಳೆದ ವರ್ಷ ಮೆಕ್ಸಿಕೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವನಿತಾ ರಿಕರ್ವ್ ತಂಡ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 2014ರ ಏಶ್ಯಾಡ್‌ನ ಕಂಪೌಂಡ್ ಟೀಮ್ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡ ಚಿನ್ನ ಹಾಗೂ ವನಿತಾ ತಂಡ ಕಂಚಿನ ಪದಕ ಜಯಿಸಿತ್ತು.