Advertisement

ಲಡಾಖ್‌: ಚೀನ ಮತ್ತೆ ಕ್ಯಾತೆ, ಭಾರತೀಯ ಸೇನೆಯಿಂದ ಹೆಚ್ಚುವರಿ ತುಕಡಿಗಳ ರವಾನೆ

09:08 AM May 19, 2020 | Hari Prasad |

ಹೊಸದಿಲ್ಲಿ: ಗಾಲ್ವಾನ್‌ ನದಿಯ ಬಳಿ ಚೀನದ ಸೇನಾಪಡೆ ಗಳು ಟೆಂಟ್‌ ಹಾಕಿವೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಲಡಾಖ್‌ ಸಮೀಪದ ಅಂತಾರಾಷ್ಟ್ರೀಯ ಗಡಿಯಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ.
ಅಲ್ಲದೆ, ಈ ಪ್ರದೇಶಗಳಿಗೆ ಸೇನಾಪಡೆಯ ಮತ್ತಷ್ಟು ತುಕಡಿಗಳನ್ನು ಜಮಾವಣೆ ಮಾಡಲಾಗುತ್ತಿದೆ.

Advertisement

ಅಂತಾರಾಷ್ಟ್ರೀಯ ಗಡಿಯಲ್ಲಿ ಚೀನ ತನ್ನ ಹೆಚ್ಚುವರಿ ಸೇನಾಪಡೆಗಳನ್ನು ರವಾನಿಸಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಪಡೆಗಳು ಈ ಭಾಗದಲ್ಲಿ ಕಟ್ಟೆಚ್ಚರ ವಹಿಸಿವೆ.

ಈ ಬಗ್ಗೆ ಪ್ರತಿ ಕ್ರಿಯೆ ನೀಡಿರುವ ಸರಕಾರದ ಹಿರಿಯ ಅಧಿಕಾರಿಗಳು, ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಸೇನಾ ತುಕಡಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ, ಸಿಕ್ಕಿಂನ ಉತ್ತರ ಭಾಗದಲ್ಲಿರುವ ಭಾರತ – ಚೀನ ಗಡಿ ಭಾಗದಲ್ಲಿರುವ ‘ನಕುಲಾ’ ದಾರಿಯಲ್ಲಿ ಭಾರತ ಮತ್ತು ಚೀನ ಪಡೆಗಳು ಪರಸ್ಪರ ಕೈ ಮಿಲಾಯಿಸಿದ್ದವು.

ಅದಲ್ಲದೆ, ಭಾರತ-ಚೀನ ನೈಜ ಗಡಿ ನಿಯಂತ್ರಣ ರೇಖೆಯಲ್ಲಿ ಚೀನದ ಯುದ್ಧ ವಿಮಾನಗಳು ಹಾರಾಟ ನಡೆಸಿ ಆತಂಕ ಸೃಷ್ಟಿಸಿದ್ದವು. ಇದಕ್ಕೆ ಪ್ರತಿಯಾಗಿ, ಭಾರತದ ಯುದ್ಧ ವಿಮಾನಗಳೂ ಕೂಡ ಹಾರಾಟ ನಡೆಸಿದ್ದವು. ಲಡಾಖ್ ನಲ್ಲಿ ಈಗ ಚೀನ ಮತ್ತೆ ಕ್ಯಾತೆ ತೆಗೆದಿದೆ.

Advertisement

1962ರಲ್ಲಿ ಭಾರತೀಯ ಸೇನಾ ನೆಲೆಯನ್ನು ಚೀನಪಡೆಗಳು ಸುತ್ತುವರಿದಿದ್ದ ಗಾಲ್ವಾನ್‌ ನದಿಯ ಬಳಿ ಚೀನದ ಸೇನಾಪಡೆಗಳು ಟೆಂಟ್‌ ಹಾಕಿರುವ ಬಗ್ಗೆ ವರದಿಯಾಗಿದೆ.

ಇದು ಗಡಿಯಲ್ಲಿ ಉದ್ವಿಘ್ನ ವಾತಾವರಣಕ್ಕೆ ಕಾರಣವಾಗಿದ್ದು, ಭಾರತ – ಚೀನ ನಡುವಿನ ಯುದ್ಧ ಭೀತಿಯನ್ನು ಹೆಚ್ಚಿಸಿದೆ.

ಇದೇ ವೇಳೆ, ಪೂರ್ವ ಲಡಾಖ್‌ನ ಡೆಮ್‌ಚೋಕ್‌ ಬಳಿ ಕೂಡ ಚೀನ ಪಡೆಗಳಿಂದ ನಿರ್ಮಾಣ ಚಟುವಟಿಕೆಗಳು ಕಂಡು ಬಂದಿದ್ದು, ಈ ಭಾಗದಲ್ಲಿ ಉದ್ವಿಘ್ನ ವಾತಾವರಣ ಏರ್ಪಟ್ಟಿದೆ. ಈ ಮಧ್ಯೆ, ದಿಲ್ಲಿಯಲ್ಲಿ ಸಭೆ ಸೇರಿದ ರಾಷ್ಟ್ರೀಯ ಭದ್ರತಾ ಮಂಡಳಿ, ಲಡಾಖ್‌ನಲ್ಲಿನ ಪರಿಸ್ಥಿತಿಯ ಅವಲೋಕನ ನಡೆಸಿತು.

Advertisement

Udayavani is now on Telegram. Click here to join our channel and stay updated with the latest news.

Next