Advertisement

ಪಾಕಿಗೆ ಭಾರತ ಟೆನಿಸ್‌ ತಂಡ ?

12:31 AM Oct 16, 2019 | Team Udayavani |

ಹೊಸದಿಲ್ಲಿ: ತಟಸ್ಥ ತಾಣದಲ್ಲಿ ಡೇವಿಸ್‌ ಕಪ್‌ ಹೋರಾಟ ನಡೆಸಬೇಕೆಂಬ ಮನವಿಯನ್ನು ಒಂದು ವೇಳೆ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ನಿರಾಕರಿಸಿದರೆ ಅಖೀಲ ಭಾರತ ಟೆನಿಸ್‌ ಫೆಡರೇಶನ್‌ (ಎಐಟಿಎ) ಪಾಕಿಸ್ಥಾನಕ್ಕೆ ತನ್ನ ಡೇವಿಸ್‌ ಕಪ್‌ ತಂಡವನ್ನು ಕಳುಹಿಸುವ ಸಾಧ್ಯತೆಯಿದೆ. ಇದಕ್ಕಾಗಿ ತನ್ನ ಆಟಗಾರರಿಗೆ ಮತ್ತು ಬೆಂಬಲ ಸಿಬಂದಿಗೆ ಪಾಕಿಸ್ಥಾನ ವೀಸಾ ಪಡೆಯಲು ಪ್ರಕ್ರಿಯೆ ಆರಂಭಿಸಿದೆ.

Advertisement

ಪಾಕಿಸ್ಥಾನಕ್ಕೆ ಪ್ರವಾಸಗೈಯುವಂತೆ ಯಾವುದೇ ಆಟಗಾರರಿಗೆ ಎಐಟಿಎ ಒತ್ತಾಯ ಮಾಡುವುದಿಲ್ಲ. ಒಂದು ವೇಳೆ ಪ್ರಮುಖ ಆಟಗಾರರು ಪ್ರಯಾಣಿಸಲು ನಿರಾಕರಿಸಿದರೆ ದ್ವಿತೀಯ ದರ್ಜೆ ತಂಡವನ್ನು ಕಳುಹಿಸಲು ಎಐಟಿಎ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕಾಯುತ್ತಿದ್ದೇವೆ
ಪಾಕಿಸ್ಥಾನ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ಹೋರಾಟದ ತಾಣ ಬದಲಿಸುವ ನಿಟ್ಟಿನಲ್ಲಿ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್)ನ ನಿರ್ಧಾರವನ್ನು ನ. 4ರ ವರೆಗೆ ಕಾಯಲು ಭಾರತ ಬಯಸಿದೆ ಎಂದು ಭಾರತ ತಂಡದ ಆಟವಾಡದ ನಾಯಕ ಮಹೇಶ್‌ ಭೂಪತಿ ಹೇಳಿದ್ದಾರೆ.

ತನ್ನ ನೆರೆಯ ರಾಷ್ಟ್ರದ ಜತೆಗಿನ ಸಂಬಂಧ ಹದಗೆಟ್ಟಿದ್ದರಿಂದ ಭಾರತವು ಪಾಕಿಸ್ಥಾನಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಈ ಸಂಬಂಧ ಭಾರತೀಯ ಆಟಗಾರರು ಡೇವಿಸ್‌ ಕಪ್‌ ತಾಣವನ್ನು ಬದಲಿಸುವಂತೆ ಎಐಟಿಎ ಗೆ ಪತ್ರ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next