ಬೆಂಗಳೂರು: ಭಾರತ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಅಮೋಘ ನಿರ್ವಹಣೆಯಿಂದಾಗಿ ಬೆಂಗಳೂರು ಎಫ್ಸಿ ತಂಡವು ಪೆನಾಲ್ಟಿ ಶೂಟೌಟ್‌ನಲ್ಲಿ ಮುಂಬಯಿ ಸಿಟಿ ಎಫ್ಸಿ ತಂಡವನ್ನು ಸೋಲಿಸಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ನ ಫೈನಲ್ ಹಂತಕ್ಕೇರಿತು.
ಪಂದ್ಯದ ಆರಂಭದಲ್ಲಿ ಮತ್ತು ಪೆನಾಲ್ಟಿ ಶೂಟೌಟ್‌ನಲ್ಲಿ ಸಂಧು ಅವರು ಎದುರಾಳಿ ತಂಡ ಹೊಡೆದ ಪೆನಾಲ್ಟಿಗಳನ್ನು ಯಶಸ್ವಿಯಾಗಿ ರಕ್ಷಿಸಿದ್ದರು. ಪೆನಾಲ್ಟಿ ಶೂಟೌಟ್‌ನಲ್ಲಿ 16 ಗೋಲುಗಳು ಹೊಡೆದ ಬಳಿಕ ಸಂದೇಶ್ ಜಿಂಗನ್ ಸ್ಪಾಟ್ ಕಿಕ್ ಮೂಲಕ ಗೋಲು ದಾಖಲಿಸುವ ಮೂಲಕ ಬೆಂಗಳೂರು 9-8 ಅಂತರದಿಂದ ಗೆದ್ದು ಸಂಭ್ರಮಿಸಿತು. ಈ ಮೊದಲು ನಿಗದಿತ ಆಟದ ಸಮಯದಲ್ಲಿ ಎರಡೂ ತಂಡಗಳು 2-2 ಸಮಬಲ ಸ್ಥಾಪಿಸಿದ್ದವು.
ಬೆಂಗಳೂರು ಎಫ್ಸಿ ತಂಡವು ಶನಿವಾರ ನಡೆಯುವ ಫೈನಲ್ ಹೋರಾಟದಲ್ಲಿ ಎಟಿಕೆ ಮೋಹನ್ ಬಗಾನ್ ಅಥವಾ ಹೈದರಾಬಾದ್ ಎಫ್ಸಿ ತಂಡವನ್ನು ಎದುರಿಸಲಿದೆ.