ಚೆನ್ನೈ : ಯುದ್ಧ ಆರಂಭವಾದ ಬಳಿಕ ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮೊಟಕು ಗೊಳಿಸಿ ವಾಪಸಾಗಿರುವ ಭಾರತೀಯ ವಿದ್ಯಾರ್ಥಿಗಳಿಗೆ ರಷ್ಯಾ ವಿದ್ಯಾಭ್ಯಾಸ ಮುಂದುವರಿಸಲು ನೆರವು ನೀಡುವುದಾಗಿ ಘೋಷಿಸಿದೆ.
ಈ ಬಗ್ಗೆ ಗುರುವಾರ ರಷ್ಯಾದ ಕಾನ್ಸುಲ್ ಜನರಲ್ ಒಲೆಗ್ ಅವ್ದೀವ್ ಚೆನ್ನೈನಲ್ಲಿ ಹೇಳಿಕೆ ನೀಡಿದ್ದು”ಉಕ್ರೇನ್ ತೊರೆದ ಭಾರತೀಯ ವಿದ್ಯಾರ್ಥಿಗಳು
ಉಕ್ರೇನ್‌ನಂತೆ ರಷ್ಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು. ವೈದ್ಯಕೀಯ ಪಠ್ಯಕ್ರಮವು ಬಹುತೇಕ ಒಂದೇ ಆಗಿದೆ ಎಂದಿದ್ದಾರೆ.
ವಿದ್ಯಾರ್ಥಿಗಳಿಗೆ ಅವರಿಗೆ ಜನರ ಭಾಷೆ ತಿಳಿದಿದೆ, ಉಕ್ರೇನ್‌ನಲ್ಲಿರುವಂತೆ, ಅವರಲ್ಲಿ ಹೆಚ್ಚಿನವರು ರಷ್ಯನ್ ಭಾಷೆಯನ್ನು ಮಾತನಾಡುತ್ತಾರೆ. ಅವರಿಗೆ ರಷ್ಯಾದಲ್ಲಿ ಪೂರ್ಣ ಸ್ವಾಗತವಿದೆ ಎಂದು ಹೇಳಿದ್ದಾರೆ.