ಉಕ್ರೇನ್‌ನಲ್ಲಿ ಘನಘೋರ ಕಾಳಗ ನಡೆಯುತ್ತಿದ್ದರೂ, ಭಾರತ ಸರ್ಕಾರ ಮಾತ್ರ ಆ ದೇಶದಲ್ಲಿರುವ ವಿದ್ಯಾರ್ಥಿಗಳು ಮತ್ತು ತನ್ನ ಪ್ರಜೆಗಳನ್ನು ಪಾರು ಮಾಡುವ ಕೆಲಸದಲ್ಲಿ ತೊಡಗಿದೆ.
ಜಗತ್ತಿನ ಅತ್ಯಂತ ಪ್ರಬಲ ಮತ್ತು ಪ್ರಭಾವಿ ರಾಷ್ಟ್ರಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕ, ಯು.ಕೆ., ಚೀನಾ, ಜರ್ಮನಿ ಮತ್ತು ಇತರ ರಾಷ್ಟ್ರಗಳು ತಮ್ಮ ತಮ್ಮ ಪ್ರಜೆಗಳನ್ನು ಯುದ್ಧ ಪೀಡಿತ ರಾಷ್ಟ್ರದಿಂದ ಪಾರು ಮಾಡಲು ಸಾಧ್ಯವಾಗದೇ ಕೈಚೆಲ್ಲಿವೆ.
ಚೀನಾದ 6 ಸಾವಿರ ಪ್ರಜೆಗಳು ಅಲ್ಲಿದ್ದರೂ, ಅವರನ್ನು ಪಾರು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ. ರಷ್ಯಾ ದಾಳಿ ಶುರುವಾದ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದ ಬೈಡೆನ್ ಸರ್ಕಾರ, ಉಕ್ರೇನ್‌ನಿಂದ ತನ್ನ ಪ್ರಜೆಗಳನ್ನು ತೆರವುಗೊಳಿಸುವುದು ಅಸಾಧ್ಯ.
ಇದನ್ನೂ ಓದಿ:ಸಾಲ ಕೊಡಿಸುವುದಾಗಿ ಹೇಳಿ ಮಹಿಳೆಯಿಂದ 35 ಸಾವಿರ ಹಣ ಪಡೆದು ವಂಚನೆ
ಗಡಿ ದಾಟಲು ವಾಣಿಜ್ಯಿಕ ಅಥವಾ ಇತರ ವಾಹನಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿತ್ತು. ಯು.ಕೆ. ಮತ್ತು ಜರ್ಮನಿ ಸರ್ಕಾರಗಳು ತಮ್ಮ ತಮ್ಮ ರಾಯಭಾರ ಕಚೇರಿಯನ್ನೇ ಮುಚ್ಚಿವೆ. ಮೊರೊಕ್ಕೋ, ನೈಜೀರಿಯಾ, ಈಜಿಪ್ಟ್ ದೇಶಗಳೂ ಕೂಡ ತಮ್ಮವರನ್ನು ಪಾರು ಮಾಡುವ ಕಾರ್ಯಾಚರಣೆ ಅಸಾಧ್ಯವಾಗಿ ಕೈ ಚೆಲ್ಲಿವೆ.