Advertisement

UK’s Cardiff ;ಯುವತಿಯ ಮೇಲೆ ಅತ್ಯಾಚಾರ: ಭಾರತೀಯ ವಿದ್ಯಾರ್ಥಿ ಸೆರೆ

12:34 AM Jun 19, 2023 | Team Udayavani |

ಹೊಸದಿಲ್ಲಿ: ಕಳೆದ ವರ್ಷ ಇಂಗ್ಲೆಂಡ್‌ನ‌ ಕಾರ್ಡಿಫ್ ನಲ್ಲಿ ಪಾನಮತ್ತ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದ ಭಾರತೀಯ ಮೂಲದ 20 ವರ್ಷದ ವಿದ್ಯಾರ್ಥಿ ಪ್ರೀತಮ್‌ ವಿಕಾಲ್‌ನನ್ನು ಇಂಗ್ಲೆಂಡ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಯುವತಿ ನೀಡಿದ ಮಾಹಿತಿ ಆಧರಿಸಿ ಸತತವಾಗಿ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಫ‌ೂಟೇಜ್‌, ಇನ್‌ಸ್ಟಾಗ್ರಾಮ್‌ ಚಾಟ್‌ ಮೂಲಕ ಯುವಕನನ್ನು ಪತ್ತೆಹಚ್ಚಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಪ್ರೀತಮ್‌ ವಿಕಾಲ್‌ ಮತ್ತು ಯುವತಿ ತಂತಮ್ಮ ಗುಂಪು ಗಳಲ್ಲಿ ಪ್ರತ್ಯೇಕವಾಗಿ ಕಾರ್ಡಿಫ್ ನಲ್ಲಿ ರಾತ್ರಿ ಪಾರ್ಟಿಗೆ ತೆರಳಿದ್ದರು.

ಪಾರ್ಟಿ ಮುಗಿಸಿ ಹೊರಬಂದಾಗ ಯುವತಿ ವಿಪರೀತ ಕುಡಿದಿದ್ದಳು. ಆ ವೇಳೆ ಪ್ರೀತಮ್‌ ಆಕೆಯನ್ನು ಎತ್ತಿಕೊಂಡು ಕಾರ್ಡಿಫ್ ನಲ್ಲಿನ ತನ್ನ ಫ್ಲ್ಯಾಟ್‌ಗೆ ತೆರಳಿ, ಅಲ್ಲಿ ಅತ್ಯಾಚಾರ ನಡೆಸಿದ್ದ.

Advertisement

Udayavani is now on Telegram. Click here to join our channel and stay updated with the latest news.

Next