Advertisement

2,500 ವರ್ಷಗಳಷ್ಟು ಹಳೆಯ ಸಂಸ್ಕೃತ ಸಮಸ್ಯೆ ಬಗೆಹರಿಸಿದ ಭಾರತೀಯ ವಿದ್ಯಾರ್ಥಿ

09:58 AM Dec 16, 2022 | Team Udayavani |

ಲಂಡನ್: ಕ್ರಿ.ಪೂ. 5ನೇ ಶತಮಾನದಿಂದಲೂ ವಿದ್ವಾಂಸರನ್ನು ದಿಗ್ಭ್ರಮೆಗೊಳಿಸಿದ ಸಂಸ್ಕೃತ ವ್ಯಾಕರಣದ ಸಮಸ್ಯೆಯನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಭಾರತೀಯ ಪಿಎಚ್.ಡಿ ವಿದ್ಯಾರ್ಥಿಯು ಅಂತಿಮವಾಗಿ ಪರಿಹರಿಸಿದ್ದಾರೆ.

Advertisement

27 ವರ್ಷದ ರಿಷಿ ಅತುಲ್ ರಾಜ್‌ ಪೋಪಟ್ ಅವರು ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ವಾಸಿಸುತ್ತಿದ್ದ ಪ್ರಾಚೀನ ಸಂಸ್ಕೃತ ಭಾಷೆಯ ಪಾಣಿನಿ ಅವರು ಬರೆದ ಪಠ್ಯವನ್ನು ಡಿಕೋಡ್ ಮಾಡಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.

ಅತುಲ್ ರಾಜ್‌ಪೋಪಟ್, ಕೇಂಬ್ರಿಡ್ಜ್‌ ನ ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಏಷ್ಯನ್ ಮತ್ತು ಮಧ್ಯಪ್ರಾಚ್ಯ ಅಧ್ಯಯನಗಳ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದಾರೆ.

ಪಾಣಿನಿಯು “ಮೆಟಾರೂಲ್” ಅನ್ನು ಕಲಿಸಿದರು, ಇದನ್ನು ಸಾಂಪ್ರದಾಯಿಕವಾಗಿ ವಿದ್ವಾಂಸರು “ಸಮಾನ ಸಾಮರ್ಥ್ಯದ ಎರಡು ನಿಯಮಗಳ ನಡುವಿನ ಸಂಘರ್ಷದ ಸಂದರ್ಭದಲ್ಲಿ, ವ್ಯಾಕರಣದ ಸರಣಿ ಕ್ರಮದಲ್ಲಿ ನಂತರ ಬರುವ ನಿಯಮವು ಗೆಲ್ಲುತ್ತದೆ” ಎಂದು ಅರ್ಥೈಸುತ್ತಾರೆ. ಆದರೆ ಇದು ಸಾಮಾನ್ಯವಾಗಿ ವ್ಯಾಕರಣದ ತಪ್ಪು ಫಲಿತಾಂಶಗಳಿಗೆ ಕಾರಣವಾಯಿತು.

ಇದನ್ನೂ ಓದಿ:ಮಂಗಳೂರು ವಿಶ್ವವಿದ್ಯಾನಿಲಯ: ಆರನೇ ಸೆಮಿಸ್ಟರ್‌ ಅಂಕಪಟ್ಟಿ ಡೌನ್‌ಲೋಡ್‌ಗೆ ಅವಕಾಶ

Advertisement

ರಾಜ್ ಪೋಪಟ್ ಅವರು ಮೆಟಾರುಲ್ ನ ಈ ಸಾಂಪ್ರದಾಯಿಕ ವ್ಯಾಖ್ಯಾನವನ್ನು ತಿರಸ್ಕರಿಸಿದರು. ಪದದ ಎಡ ಮತ್ತು ಬಲ ಬದಿಗಳಿಗೆ ಅನುಕ್ರಮವಾಗಿ ಅನ್ವಯವಾಗುವ ನಿಯಮಗಳ ನಡುವೆ, ಬಲಭಾಗಕ್ಕೆ ಅನ್ವಯವಾಗುವ ನಿಯಮವನ್ನು ನಾವು ಆರಿಸಬೇಕೆಂದು ಪಾಣಿನಿ ಬಯಸಿದ್ದರು ಎಂದು ರಾಜ್ ಪೋಪಟ್ ವಾದಿಸುತ್ತಾರೆ.

“ನಾನು ಕೇಂಬ್ರಿಡ್ಜ್‌ ನಲ್ಲಿ ‘ಯುರೇಕಾ’ ಕ್ಷಣವನ್ನು ಅನುಭವಿಸಿದೆ. ಸುಮಾರು ಒಂಬತ್ತು ತಿಂಗಳ ಈ ಸಮಸ್ಯೆಯನ್ನು ಪರಿಹರಿಸಿ ನಾನು ಹಿಂದಡಿಯಿಡಲು ಸಿದ್ದನಾಗಿದ್ದೆ. ನಾನು ನನ್ನ ಪ್ರಯತ್ನದಲ್ಲಿ ಮುಂದೆ ಸಾಗುತ್ತಿರಲಿಲ್ಲ. ಹಾಗಾಗಿ ನಾನು ಒಂದು ತಿಂಗಳ ಕಾಲ ಪುಸ್ತಕಗಳನ್ನು ಮುಚ್ಚಿಟ್ಟು ಬೇಸಿಗೆ, ಈಜು, ಸೈಕ್ಲಿಂಗ್, ಅಡುಗೆ, ಪ್ರಾರ್ಥನೆ, ಮತ್ತು ಧ್ಯಾನ ಮಾಡುವುದನ್ನು ಆನಂದಿಸಿದೆ. ಇದಾಗಿ ಕೆಲಸಕ್ಕೆ ಮರಳಿದ ಕೆಲ ನಿಮಿಷಗಳಲ್ಲೇ ನಾನು ಪುಟಗಳನ್ನು ತಿರುಗಿಸಿದಂತೆ, ಈ ಮಾದರಿಗಳು ಹೊರಹೊಮ್ಮಲು ಪ್ರಾರಂಭಿಸಿದವು. ಅದು ಅರ್ಥವಾಗಲು ಪ್ರಾರಂಭವಾಯಿತು. ಸಮಸ್ಯೆಯನ್ನು ಪರಿಹರಿಸಲು ಇನ್ನೂ ಎರಡು ವರ್ಷಗಳು ಬೇಕಾಯಿತು” ಎಂದು ಅತುಲ್ ರಾಜ್‌ಪೋಪಟ್ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next