Advertisement

ಭಾರತೀಯ ಸ್ಟಾರ್ಟಪ್‌ ಗಳ ಬಗ್ಗೆ ನ್ಯಾಸ್ಕಾಮ್‌ ವರದಿ : 2025ರೊಳಗೆ 12.5 ಲಕ್ಷ ಉದ್ಯೋಗ

09:59 AM Nov 08, 2019 | Hari Prasad |

ಹೊಸದಿಲ್ಲಿ: ಭಾರತದಲ್ಲಿ ದಿನೇ ದಿನೆ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟಪ್‌ಗ್ಳಿಂದಾಗಿ, 2025ರೊಳಗೆ 12.5 ಲಕ್ಷ ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನ್ಯಾಷನಲ್‌ ಅಸೋಸಿಯೇಷನ್‌ ಆಫ್ ಸಾಫ್ಟ್ ವೇರ್‌ ಆ್ಯಂಡ್‌ ಸರ್ವೀಸಸ್‌ ಕಂಪೆನೀಸ್‌ (ನ್ಯಾಸ್ಕಾಮ್‌) ಸಂಸ್ಥೆಯು ತನ್ನ ವರದಿ ಯೊಂದರಲ್ಲಿ ಹೇಳಿದೆ.

Advertisement

2019ರಲ್ಲಿ ಈ ಕ್ಷೇತ್ರದಲ್ಲಿ 3.9ರಿಂದ 4.3 ಲಕ್ಷದಷ್ಟು ನೇರ ಉದ್ಯೋಗ ಸೃಷ್ಟಿಯಾಗಿದೆ. 2025ರೊಳಗೆ ಇದರ ಸಂಖ್ಯೆ 12.5 ಲಕ್ಷಕ್ಕೇರ ಬಹುದು. ಅದೇ ವೇಳೆಗೆ, ಪರೋಕ್ಷ ಉದ್ಯೋಗಗಳ ಸಂಖ್ಯೆ 39 ಲಕ್ಷದಿಂದ 44 ಲಕ್ಷಕ್ಕೇರುವ ಅಂದಾಜಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದಲ್ಲಿ ಪ್ರತಿಭಾನ್ವಿತರು ಇಂದು ಮಹಾನಗರಗಳ ವ್ಯಾಪ್ತಿಯನ್ನೂ ಮೀರಿ ಬೆಳೆಯುತ್ತಿದ್ದಾರೆ. ನವ ಪದವೀಧರರು ಮೆಟ್ರೋಪಾಲಿಟನ್‌ ಗೀಳು ಬಿಟ್ಟು ತಮ್ಮೂರುಗಳಲ್ಲೇ ಇದ್ದುಕೊಂಡು ಸ್ಟಾರ್ಟಪ್‌ಗ್ಳ ಇಂದಿನ ಆವಶ್ಯಕತೆಗೆ ತಕ್ಕಂತೆ ಇರುವ ಹೊಸ ತಂತ್ರಜ್ಞಾನಗಳನ್ನು ಅಂತರ್ಜಾಲದ ಮೂಲಕ ಕರಗತ ಮಾಡಿಕೊಂಡಿದ್ದಾರೆ. ಇದರಿಂದ, ಉದ್ಯೋಗಗಳು ಅವರಿಗೆ ಸುಲಭವಾಗಿ ಸಿಗುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

2014ರಲ್ಲಿ ಶುರುವಾದ ಸ್ಟಾರ್ಟಪ್‌ ಟ್ರೆಂಡ್‌, ವಾರ್ಷಿಕವಾಗಿ ಶೇ. 40ರಷ್ಟು ಬೆಳವಣಿಗೆ ಕಾಣುತ್ತಿದ್ದು, 2025 ರೊಳಗೆ ಈಗಿನ ಬೆಳವಣಿಗೆಗಿಂತ ನಾಲ್ಕು ಪಟ್ಟು ಹೆಚ್ಚು ವೃದ್ಧಿಯಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next