Advertisement

ಲಡಾಖ್ ನಲ್ಲಿ ಏನಾಗಿತ್ತು ಗೊತ್ತಾ? ಕಾಂಗ್ರೆಸ್ ಟೀಕೆಗೆ ಪ್ರಧಾನಿ ಸಚಿವಾಲಯ ಖಡಕ್ ತಿರುಗೇಟು

06:28 PM Jun 20, 2020 | Nagendra Trasi |

ನವದೆಹಲಿ: ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ, ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚಿದಂಬರಂ ಅವರ ಟೀಕೆಗೆ ಪ್ರಧಾನಿ ಸಚಿವಾಲಯ ಖಡಕ್ ತಿರುಗೇಟು ನೀಡಿದೆ.

Advertisement

ಚೀನಾ ಸೇನೆ ಭಾರತದ ಪ್ರದೇಶದೊಳಕ್ಕೆ ಬಂದಿಲ್ಲ. ಚೀನಾ ಸೈನಿಕರ ಒಳನುಸುಳುವಿಕೆ ಪ್ರಯತ್ನವನ್ನು ನಮ್ಮ ಸೇನೆ ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟನೆ ನೀಡಿದೆ.

ಯಾರೊಬ್ಬರೂ ಭಾರತದ ಪ್ರದೇಶದೊಳಕ್ಕೆ ಪ್ರವೇಶಿಸಿಲ್ಲ ಅಥವಾ ಯಾವುದೇ ನಮ್ಮ ಶಿಬಿರವನ್ನು ವಶಪಡಿಸಿಕೊಂಡಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಪ್ರಧಾನಿ ಕಚೇರಿ ಇಂದು ಸ್ಪಷ್ಟನೆ ನೀಡಿದೆ.ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಒಳನುಗ್ಗಲು ಪ್ರಯತ್ನಿಸಿದ್ದ ಚೀನಿ ಸೈನಿಕರ ಪ್ರಯತ್ನವನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದೆ.

ಚಿದಂಬರಂ ಟೀಕೆ ಏನು?
ಚೀನಾ ಯೋಧರು ಭಾರತದ ಗಡಿ ಪ್ರವೇಶಿಸಿಲ್ಲ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದಾರೆಯೇ ಎಂದು ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಚಿದಂಬರಂ ಪ್ರಶ್ನಿಸಿದ್ದರು. ಅಷ್ಟೇ ಅಲ್ಲ ಲಡಾಖ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಟ್ವೀಟರ್ ನಲ್ಲಿ ಸರ್ಕಾರಕ್ಕೆ ಐದು ಪ್ರಶ್ನೆಗಳನ್ನು ಕೇಳಿದ್ದರು. ಒಂದು ವೇಳೆ ಚೀನಾ ಸೈನಿಕರು ನಮ್ಮ ಗಡಿ ಒಳಗೆ ಪ್ರವೇಶಿಸಿದೇ ನಮ್ಮ ಸೈನಿಕರು ಹೇಗೆ ಸಾವನ್ನಪ್ಪಿದ್ದರು ಎಂದು ಚಿದಂಬರಂ ಪ್ರಶ್ನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next