Advertisement

ಪಾಕಿಗೆ ಹೋಗಿದ್ದ ವಿವಾಹಿತ ಸಿಕ್ಖ್ ಮಹಿಳೆ ಇಸ್ಲಾಂ ಗೆ ಮತಾಂತರ,ಮದುವೆ

11:21 AM Apr 20, 2018 | Team Udayavani |

ಹೋಶಿಯಾರ್‌ಪುರ, ಪಂಜಾಬ್‌ : ಪಾಕಿಸ್ಥಾನಕ್ಕೆ ಯಾತ್ರಿಕಳಾಗಿ ಹೋಗಿ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ 31 ವರ್ಷ ಪ್ರಾಯದ ಸಿಕ್ಖ್  ವಿವಾಹಿತ ಮಹಿಳೆ ಕಿರಣ್‌ ಬಾಲಾ, ಅಲ್ಲಿ  ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಬಳಿಕ ಲಾಹೋರ್‌ನ ವ್ಯಕ್ತಿಯೋರ್ವನನ್ನು ಮದುವೆಯಾಗಿರುವುದಾಗಿ ತಿಳಿದು ಬಂದಿದೆ.  

Advertisement

ಸಿಕ್ಖ್ ಮಹಿಳೆ ಬಾಲಾ, ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ ಸಿಕ್ಖ್ ನಿಯೋಗದ ಭಾಗವಾಗಿ ಬೈಶಾಖೀ ಹಬ್ಬದಲ್ಲಿ ಪಾಲ್ಗೊಳ್ಳಲು ಪಾಕಿಸ್ಥಾನಕ್ಕೆ ತೆರಳಿದ್ದಳು.  

ಕಿರಣ್‌ ಬಾಲಾ ಪಾಕ್‌ ಬೇಹು ಸಂಸ್ಥೆ ಇಂಟರ್‌ ಸರ್ವಿಸಸ್‌ ಇಂಟೆಲಿಜೆನ್ಸ್‌ (ಐಎಸ್‌ಐ) ಕೈವಶವಾಗಿರುವ ಸಾಧ್ಯತೆ ಇದ್ದು  ಕೇಂದ್ರ ಮತ್ತು ಪಂಜಾಬ್‌ ಸರಕಾರ ಈ ವಿಷಯದಲ್ಲಿ ಮಧ್ಯಪ್ರವೇಶ ನಡೆಸಿ ನೆರವಾಗಬೇಕು ಎಂದು ಆಕೆಯ ಮಾವ ತಾರ್‌ಸೇಮ್‌ ಹೇಳಿದ್ದಾರೆ.

“ಕಿರಣ್‌ ಬಾಲಾ ಎ.16ರಂದು ನನ್ನನ್ನು ಸಂಪರ್ಕಿಸಿ ತಾನು ಲಾಹೋರ್‌ನ ವ್ಯಕ್ತಿ ಮೊಹಮ್ಮದ್‌ ಆಜಂ ಎಂಬಾತನನ್ನು ಮದುವೆಯಾಗಿರುವುದಾಗಿಯೂ ಮದುವೆಗೆ ಮುನ್ನ ತಾನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವುದಾಗಿಯೂ, ಮದುವೆಯ ಪರಿಣಾಮವಾಗಿ  ಆಮ್ನಾ ಬೀಬಿ ಎಂಬ ಹೊಸ ಹೆಸರನ್ನು ತನಗೆ ಇಡಲಾಗಿರುವುದಾಗಿಯೂ ಫೋನಿನಲ್ಲಿ ತನಗೆ ತಿಳಿಸಿದ್ದಳು’ ಎಂದು  ತಾರ್‌ಸೇಮ್‌ ಹೇಳಿದ್ದಾರೆ. 

“ನನ್ನ ಸೊಸೆಯನ್ನು ಈ ಸ್ಥಿತಿಯಿಂದ ಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ (ನಿವೃತ್ತ) ಅಮರೀಂದರ್‌ ಸಿಂಗ್‌ ನೆರವಾಗಬೇಕ; ನನ್ನ ಸೊಸೆ ಪಾಕ್‌ ಬೇಹು ಸಂಸ್ಥೆ ಐಎಸ್‌ಐ ಕೈವಶವಾಗಿದ್ದಾಳೆ’ ಎಂದು ಗರ್‌ಶಂಕರ್‌ ಎಂಬ ಗ್ರಾಮದಲ್ಲಿ ಸಿಕ್ಖ್ ಧಾರ್ಮಿಕ ಬೋಧಕರಾಗಿರುವ ತಾರ್‌ಸೇಮ್‌ ಸಿಂಗ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next