Advertisement

ಉಗ್ರರ ಹಣದ ಮೂಲ ಯಾವುದು?: ಭಾರತ ಪ್ರಶ್ನೆ

03:45 AM Jun 23, 2017 | Team Udayavani |

ವಿಶ್ವಸಂಸ್ಥೆ: ಆಫ್ಘಾನಿಸ್ತಾನದಲ್ಲಿ ಉಗ್ರ ಚಟುವಟಿಕೆಗಳು ತೀವ್ರಗೊಳ್ಳುತ್ತಿದ್ದು, ಸರ್ಕಾರಿ ವಿರೋಧಿ ಶಕ್ತಿಗಳಿಗೆ ಶಸ್ತ್ರಾಸ್ತ್ರ, ತರಬೇತಿ, ಹಣ ನೀಡುವ ಮೂಲ ಯಾವುದು ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಹೆಸರಿಸದೇ ಭಾರತ ಪ್ರಶ್ನಿಸಿದೆ. ಅಲ್ಲದೇ ಆಫ‌^ನ್‌ನಲ್ಲಿ ನಡೆಯುತ್ತಿರುವ ಉಗ್ರ ದಾಳಿ ಬಗ್ಗೆ ಖಂಡಿಸದೇ ದೂರ ಇರುವ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. 

Advertisement

“ಆಫ್ಘಾನಿಸ್ತಾನದಲ್ಲಿ ಹಿಂಸಾಚಾರ ಹೆಚ್ಚುತ್ತಿದೆ. ಉಗ್ರ ಚಟುವಟಿಕೆ, ದೌರ್ಜನ್ಯಗಳು ತೀವ್ರಗೊಳ್ಳುತ್ತಿವೆ. ಇವುಗಳನ್ನು ಸರ್ಕಾರಿ ವಿರೋಧಿ ಶಕ್ತಿಗಳು, ರಾಜಕೀಯ ಮೇಲಾಟಗಳ ಹೆಸರಲ್ಲಿ ನಿರ್ಲಕ್ಷಿಸಲಾಗುತ್ತಿದೆ. ಹೀಗೆ ಮಾಡುತ್ತಿರುವುದರ ಬಗ್ಗೆ ನಾವು ಕೆಲ ಪ್ರಮುಖ ಪ್ರಶ್ನೆಗಳನ್ನು ಹೊಂದಿದ್ದೇವೆ’ ಎಂದು ಭಾರತ ಕಟುವಾಗಿ ಪ್ರಶ್ನಿಸಿದೆ. 

ಭಾರತ ರಾಯಭಾರಿ ಸೈಯದ್‌ ಅಕºರುದ್ದೀನ್‌ ಅವರು ಬುಧವಾರದ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಆಫ್ಘಾನಿ ಸ್ತಾನದ ಕುರಿತ ಚರ್ಚೆಯಲ್ಲಿ ಈ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಮೂಲಕ ಅಲ್ಲಿ ಪಾಕಿಸ್ತಾನವೇ ದುಷ್ಕೃತ್ಯಗಳನ್ನು ಮಾಡುತ್ತಿದೆ ಎಂದು ಆಫ್ಘಾನ್‌ನ ಆರೋಪಗಳಿಗೆ ದನಿಗೂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next