ಮುಂಬೈ : ಹಣದುಬ್ಬರದ ಆತಂಕದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ದೊಡ್ಡ ಮಟ್ಟದಲ್ಲಿ ಬಾಂಡ್ ಖರೀದಿ ಕಾರ್ಯಕ್ರಮದ ನಡುವೆ ಭಾರತದ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ವಿರುದ್ಧ 8 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ ಎಂದು ವರದಿಯಾಗಿದೆ.
ಆರ್ ಬಿ ಐ ನಿಂದ ಸರ್ಕಾರದ ಬಾಂಡ್ ಖರೀದಿ ಕಾರ್ಯಕ್ರಮ ಘೋಷಣೆ ಮಾಡಿದ್ದು, ನಮ್ಮ ದೃಷ್ಟಿಯಲ್ಲಿ ಭಾರತದ ರೂಪಾಯಿಗೆ ಋಣಾತ್ಮಕ ಅಚ್ಚರಿಯಾಗಿದೆ. ಈ ನೀತಿ ನಿರ್ಣಯದಿಂದ ಭಾರತದ ರೂಪಾಯಿಯ ನಕಾರಾತ್ಮಕ ಅಪಾಯವು ಸ್ಥಳೀಯ ಹಣದುಬ್ಬರ ಏರಿಕೆ, ದುರ್ಬಲ ಆರ್ಥಿಕ ಸ್ಥಿತಿ ಜಾಗತಿಕ ಯೀಲ್ಡ್ ಹೆಚ್ಚಳದಿಂದ ಬಂದಿದೆ ಎಂದು ನೂಮುರಾ ಅಧ್ಯಯನ ತಿಳಿಸಿದೆ.
ಓದಿ : 18 ವರ್ಷ ಮೇಲ್ಪಟ್ಟವರು ಬೇಕಾದ ಧರ್ಮ ಆಯ್ಕೆ ಮಾಡಲು ಅರ್ಹರು : ಸುಪ್ರೀಂ ಕೋರ್ಟ್
ಭಾರತದಲ್ಲಿ ಇಂದು(ಶುಕ್ರವಾರ, ಏ.09) 1,31, 968 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲಾಕ್ ಡೌನ್ ಹಾಗೂ ಒಂದಿಷ್ಟು ಕಟ್ಟು ನಿಟ್ಟಿನ ನಿಯಮಗಳ ಹೇರಿಕೆಯ ಕಾರಣದಿಂದಾಗಿ ಹೂಡಿಕೆದಾರರು ಗಾಬರಿಯಾಗುವಂತಾಗಿದೆ. ಕಳೆದ ಒಂಬತ್ತು ಟ್ರೆಂಡಿಂಗ್ ಸೆಷನ್ ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 102 ಕೋಟಿ ಅಮೆರಿಕನ್ ಡಾಲರ್ ನಷ್ಟು ಈಕ್ವಿಟಿ ಮಾರಾಟ ಮಾಡಿದ್ದಾರೆ.
ಈಕ್ವಿಟಿ ಇಳಿಕೆಯಾಗುವ ಅಪಾಯ, ಈಕ್ವಿಟಿ ಮಾರುಕಟ್ಟೆಗಳ ಸಂಕುಚಿತತೆ ದುರ್ಬಲವಾಗುವ ಡಾಲರ್ ಪೂರೈಕೆ ಹಾಗೂ ತ್ರೈಮಾಸಿಕ ಗಳಿಕೆ ಫಲಿತಾಂಶಗಳ ಘೋಷಣೆ ಇವೆಲ್ಲವೂ ಒಳಗೊಂಡು ಭಾರತದ ರೂಪಾಯಿ ದುರ್ಬಲವಾಗುವ ಸಾಧ್ಯತೆ ಇದೆ. ಇನ್ನು ಡಾಲರ್ ವಿರುದ್ಧ ರೂಪಾಯಿ ಮೌಲ್ಯ 75.5 ರಷ್ಟು ತಲುಪಬಹುದು ಎಂದು ಯು ಬಿ ಎಸ್ ವರದಿ ತಿಳಿಸಿದೆ.
ಇನ್ನು, ಕಳೆದ ವರ್ಷ ಆಗಸ್ಟ್ 20 ರ ನಂತರ, ಕನಿಷ್ಠ ಮಟ್ಟ 74. 97ತಲುಪಿತ್ತು. ಇಂದು(ಶುಕ್ರವಾರ) ಮಧ್ಯಾಹ್ನ 1 ಗಂಟೆ ಹೊತ್ತಿಗೆ ಭಾರತದ ರೂಪಾಯಿ 74. 86 ರಲ್ಲಿ ವಹಿವಾಟು ನಡೆಸುತ್ತಿತ್ತು. ಈ ಹಿಂದಿನ ದಿನದ ಮುಕ್ತಾಯಕ್ಕೆ ಹೋಲಿಸಿದರೆ ಶೇಕಡಾ. 0.33 ರಷ್ಟು ಇಳಿಕೆಯಾಗಿತ್ತು. ಇನ್ನು, ಈ ವರ್ಷ ಇಲ್ಲಿಯ ತನಕ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ವಿರುದ್ಧದ ಶೇಕಡಾ. 2.4 ರಷ್ಟು ಕಡಿಮೆಯಾಗಿದೆ.
ಓದಿ : ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಪತಿ, ರಾಜ ಫಿಲಿಪ್ ವಿಧಿವಶ, ದೇಶಾದ್ಯಂತ ಶೋಕಾಚರಣೆ