Advertisement

ಭೂಕುಸಿತ ಪತ್ತೆಗೆ ಹೊಸ ಸ್ವದೇಶಿ ತಂತ್ರಜ್ಞಾನ ಸಿದ್ಧ: ಐಐಟಿ ಮಂಡಿ ರೂಪಿಸಿರುವ ತಂತ್ರಜ್ಞಾನ

08:22 PM Oct 24, 2021 | Team Udayavani |

ನವದೆಹಲಿ: ಮಳೆಗಾಲ ಹಾಗೂ ಮತ್ತಿತರ ಸಂದರ್ಭಗಳಲ್ಲಿ ದೇಶದ ನಾನಾ ಭಾಗಗಳಲ್ಲಿ ಸಂಭವಿಸುವ ಭೂಕುಸಿತಗಳನ್ನು ಮೊದಲೇ ಪತ್ತೆ ಹಚ್ಚಿ, ಹಲವಾರು ಜನರ ಜೀವ ಉಳಿಸುವಂಥ ನಿಖರ ತಂತ್ರಜ್ಞಾನವನ್ನು ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ-ಮಂಡಿ) ರೂಪಿಸಿದೆ. ಈಗಾಗಲೇ ಇದರ ಪ್ರಾಯೋಗಿಕ ಅನುಷ್ಠಾನ ನಿಖರ ಫ‌ಲಿತಾಂಶ ನೀಡಿದೆ.

Advertisement

ಈಗಾಗಲೇ, ಇಂಥ ಕೆಲವು ತಂತ್ರಜ್ಞಾನಗಳು ದೇಶದಲ್ಲಿ ಚಾಲ್ತಿಯಲ್ಲಿವೆ. ಆದರೆ, ಈ ಹೊಸ ತಂತ್ರಜ್ಞಾನ ಅವೆಲ್ಲವುಕ್ಕಿಂತ ನಿಖರವಾಗಿದ್ದು, ಇದರ ಅಳವಡಿಕೆಯು ಮಿತವ್ಯಯಕಾರಿಯೂ ಆಗಿದೆ.

ಹಲವು ಸಂಸ್ಥೆಗಳ ಸಹಭಾಗಿತ್ವ
ಐಐಟಿ-ಮಂಡಿ ರೂಪಿಸಿರುವ ಈ ತಂತ್ರಜ್ಞಾನದ ಅನುಷ್ಠಾನಕ್ಕಾಗಿ, ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸಿಆರ್‌ಆರ್‌ಐ), ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್‌ಐ), ವಾಡಿಯಾ ಇನ್ಸ್ಟಿಟ್ಯೂಟ್‌ ಆಫ್ ಹಿಮಾಲಯನ್‌ ಜಿಯೋಲಜಿ (ಡೆಹ್ರಾಡೂನ್‌) ಹಾಗೂ ರಕ್ಷಣಾ ಕ್ಷೇತ್ರದ ಸಂಸ್ಥೆಗಳಾದ ಗಡಿ ರಸ್ತೆ ನಿರ್ಮಾಣ ಸಂಸ್ಥೆ (ಬಿಆರ್‌ಒ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಹಿಮ ಮತ್ತು ಹಿಮಪಾತ ಅಧ್ಯಯನ ಸಂಸ್ಥೆ (ಎಸ್‌ಎಎಸ್‌ಇ).

ಇದನ್ನೂ ಓದಿ : ಭಾರತವನ್ನು ಬ್ಯಾಟಿಂಗ್ ಗೆ ಇಳಿಸಿ ಆರಂಭಿಕ ಆಘಾತ ನೀಡಿದ ಪಾಕ್

ನಿಖರ ಫ‌ಲಿತಾಂಶ
ಈ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಮಂಡಿ- ಜೋಗಿಂದರ್‌ ನಗರ್‌ ಹೆದ್ದಾರಿಯಲ್ಲಿ ಅಳವಡಿಸಲಾಗಿತ್ತು. ಆ ಮಾರ್ಗದಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತಕ್ಕೆ ಕೆಲವು ಗಂಟೆಗಳ ಮುನ್ನವೇ ಆ ಕುರಿತಂತೆ ಈ ತಂತ್ರಜ್ಞಾನ ಸಂದೇಶವನ್ನು ರವಾನಿಸಿತ್ತು. ಇದರಿಂದ, ಆ ಹೆದ್ದಾರಿಯನ್ನು ಬಂದ್‌ ಮಾಡಿದ್ದ ಪೊಲೀಸರು ಆ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಬೇರೆಡೆಗೆ ತಿರುಗಿಸಿದ್ದರು. ಇದರಿಂದ, ಸಾವಿರಾರು ಜನರನ್ನು ಉಳಿಸಲು ಸಹಾಯವಾಯಿತು ಎಂದು ತಜ್ಞರು ತಿಳಿಸಿದ್ದಾರೆ.

Advertisement

80 ಸಾವಿರ ರೂ. ವೆಚ್ಚ:
ಜಾಗತಿಕ ಮಟ್ಟದಲ್ಲಿ ಬಳಕೆಯಲ್ಲಿರುವ ಕೆಲವು ಅತ್ಯುನ್ನತ ವಿದೇಶಿ ತಂತ್ರಜ್ಞಾನವನ್ನು ತಂದು ಅಳವಡಿಸುವುದಾದರೆ ಅದಕ್ಕೆ 2 ಕೋಟಿ ರೂ. ಖರ್ಚಾಗುತ್ತದೆ. ಆದರೆ, ಮಂಡಿ-ಜೋಗಿಂದರ್‌ ನಗರ್‌ ಹೆದ್ದಾರಿಯಲ್ಲಿ ಈ ತಂತ್ರಜ್ಞಾನ ಅಳವಡಿಸಲು 80 ಸಾವಿರ ರೂ. ಖರ್ಚಾಗಿದೆ. ಹಾಗಾಗಿ, ಸ್ವದೇಶಿ ತಂತ್ರಜ್ಞಾನ, ಅಗ್ಗವೂ ಹೌದು, ನಿಖರವೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next