Advertisement

ನಾಳೆಯಿಂದ ರೈಲು ಸೇವೆ ಪುನರಾರಂಭ, 4 ಗಂಟೆಗೆ ಟಿಕೆಟ್ ಬುಕ್ಕಿಂಗ್: ಹೊಸ ನಿಯಮ ತಿಳಿದುಕೊಳ್ಳಿ

08:30 AM May 12, 2020 | Nagendra Trasi |

ನವದೆಹಲಿ: ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ರೈಲು ಸಂಚಾರ ಸ್ಥಗಿತಗೊಂಡು ಒಂದೂವರೆ ತಿಂಗಳು ಕಳೆದಿದೆ. ಇದೀಗ ಭಾರತೀಯ ರೈಲ್ವೆ ನಾಳೆಯಿಂದ ರೈಲು ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ. ಕೋವಿಡ್ 19 ವಿರುದ್ಧ ಹೋರಾಡಲು ಜಾರಿಗೊಳಿಸಿದ್ದ 3ನೇ ಹಂತದ ಲಾಕ್ ಡೌನ್ ಮೇ 17ರಂದು ಅಂತ್ಯಗೊಳ್ಳಲಿದೆ.

Advertisement

ಕೋವಿಡ್ 19 ವೈರಸ್ ತಡೆಯಲು ಮಾರ್ಚ್ ತಿಂಗಳಾಂತ್ಯದಲ್ಲಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿತ್ತು. ಮಾರ್ಚ್ 22ರಿಂದ ಎಲ್ಲಾ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಮಂಗಳವಾರದಿಂದ ಪ್ರತಿದಿನ 15 ರೈಲುಗಳು ಸಂಚಾರ ನಡೆಸಲಿವೆ. ಈ ವಿಶೇಷ ರೈಲುಗಳು ನವದೆಹಲಿಯಿಂದ ದಿಬ್ರುಗಢ್, ಅಗರ್ತಾಲಾ, ಹೌರಾ, ಪಾಟ್ನ, ಬಿಲಾಸ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮುವಿನ ಟಾವ್ವಿಗೆ ಸಂಚರಿಸಲಿದೆ. ಈ ರೈಲು ಕೆಲವು ಕಡೆ ಮಾತ್ರ ನಿಲುಗಡೆಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಾರದಲ್ಲಿ ಹವಾನಿಯಂತ್ರಿತ ರೈಲು ಸೇವೆ ಆರಂಭವಾಗಲಿದೆ. ಟಿಕೆಟ್ ದರ ರಾಜಧಾನಿ ಎಕ್ಸ್ ಪ್ರೆಸ್ ನ ದರಕ್ಕೆ ಸಮಾನಂತರವಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಇಂದು ಸಂಜೆ 4ಗಂಟೆಯಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಆರಂಭ ಎಂದು ವರದಿ ಹೇಳಿದೆ.

ಪ್ರಯಾಣಿಕರು ಐಆರ್ ಸಿಟಿಸಿ ವೆಬ್ ಸೈಟ್ ಅಥವಾ ಐಆರ್ ಸಿಟಿಸಿ ಮೊಬೈಲ್ ಆ್ಯಪ್ ಮೂಲಕ ಮಾತ್ರ ಟಿಕೆಟ್ ಖರೀದಿಸಬೇಕು. ರೈಲ್ವೆ ನಿಲ್ದಾಣಗಳಲ್ಲಿನ ಟಿಕೆಟ್ ಬುಕ್ಕಿಂಗ್ ಕೌಂಟರ್ ಬಂದ್ ಮುಂದುವರಿದಿದೆ. ಅಲ್ಲದೇ ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ ಮಾಡುವ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಟಿಕೆಟ್ ಕನ್ ಫರ್ಮ್ ಆದ ಪ್ರಯಾಣಿಕರನ್ನು ಮಾತ್ರ ರೈಲ್ವೆ ನಿಲ್ದಾಣದೊಳಕ್ಕೆ ಬಿಡಲಾಗುವುದು. ಫ್ಲ್ಯಾಟ್ ಫಾರಂ ಟಿಕೆಟ್ ಕೊಡುವುದಿಲ್ಲ. ಎಲ್ಲಾ ಪ್ರಯಾಣಿಕರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ನಿಲ್ದಾಣದಲ್ಲಿ ಟೆಂಪರೇಚರ್ ಸ್ಕ್ರೀನಿಂಗ್ ಕಡ್ಡಾಯ. ರೈಲ್ವೆ ನಿಲ್ದಾಣಕ್ಕೆ ಒಂದು ಗಂಟೆ ಮುನ್ನ ಆಗಮಿಸಬೇಕು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇತರ ಹೊಸ ಮಾರ್ಗಗಳಲ್ಲಿಯೂ ವಿಶೇಷ ರೈಲು ಸಂಚಾರ ಕೂಡಲೇ ಆರಂಭಿಸಲಾಗುವುದು. ಕೋವಿಡ್ 19 ಕೇರ್ ಸೆಂಟರ್ ಗಾಗಿ 20 ಸಾವಿರ ಕೋಚ್ ಗಳನ್ನು ಬಳಸಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ 300 ರೈಲುಗಳು ಮಾತ್ರ ಕಾರ್ಯಾಚರಿಸಲು ಸಾಧ್ಯತೆ ಇದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next