ನವದೆಹಲಿ: ಮಾರಣಾಂತಿಕ ಕೋವಿಡ್ 19 ವೈರಸ್ ಜಗತ್ತಿನಾದ್ಯಂತ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ಸುಮಾರು 20 ಸಾವಿರ ಕೋಚ್ ಗಳನ್ನು ಕೋವಿಡ್ ಸೋಂಕಿತರಿಗೆ ಕ್ವಾರಂಟೈನ್ ಮತ್ತು ಐಸೋಲೇಶನ್ ಗಾಗಿ ಬಳಸುವಂತೆ ಮಾಡಲು ಬದಲಾವಣೆ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಮುಂಜಾಗ್ರತಾ ಕ್ರಮವಾಗಿ 3.2 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿತರಿಗೆ ಅನುಕೂಲವಾಗುವಂತೆ ಕೋಚ್ ಗಳನ್ನು ಮಾರ್ಪಡಿಸಲಾಗುತ್ತಿದೆ. ಐಸೋಲೇಶನ್ ಗೆ ಬೇಕಾದ ಬೆಡ್ಸ್ ಗಳನ್ನು ಹಾಕಬೇಕಾಗುತ್ತದೆ. 5000 ಕೋಚ್ ಗಳನ್ನು ಮಾರ್ಪಡಿಸಲಾಗುತ್ತಿದ್ದು, ಪ್ರಾಥಮಿಕವಾಗಿ ಕ್ವಾರಂಟೈನ್ ಮತ್ತು ಐಸೋಲೇಶನ್ ಗಾಗಿ ಬಳಸಲು ಅನುಕೂಲವಾಗುವಂತೆ
ಸಿದ್ದಪಡಿಸಲಾಗುತ್ತಿದೆ.
5000 ಕೋಚ್ ಗಳಲ್ಲಿ 80 ಸಾವಿರ ಬೆಡ್ ಗಳನ್ನು ಹಾಕುವಷ್ಟು ಸಾಮರ್ಥ್ಯ ಹೊಂದಿದೆ. ಒಂದು ಕೋಚ್ ನಲ್ಲಿ 16 ಬೆಡ್ ಗಳನ್ನು ಹಾಕಿ ಐಸೋಲೇಶನ್ ಗೆ ಬಳಸುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. ಪ್ರಸ್ತುತ ಹವಾನಿಯಂತ್ರಣ ರಹಿತ ಕೋಚ್ ಗಳನ್ನು ಕ್ವಾರಂಟೈನ್ ಮತ್ತು ಐಸೋಲೇಶನ್ ಗೆ ಬಳಸಲು ಸಿದ್ಧತೆ ನಡೆದಿದೆ.