Advertisement
ಪ್ರಯಾಣಿಕರಿಗೆ ಒಂದೇ ಬಾರಿಗೆ ಬಳಸಬಹುದಾದ ಬೆಡ್ ಶೀಟ್ ಒದಗಿಸಲು ಅಥವಾ ಪ್ರಯಾಣಿಕರೇ ಸ್ವತಃ ಚಾದರ ಮತ್ತು ಹೊದಿಕೆ ತರುವಂತೆ ಸೂಚಿ ಸಲು ನಿರ್ಧರಿಸಿದ್ದೇವೆ. ಇದಕ್ಕಾಗಿ ವಿಸ್ತೃತ ನೀತಿಯೊಂದನ್ನು ಜಾರಿಗೆ ತಂದು, ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಈ ಹಿಂದೆ ಎಸಿ ಬೋಗಿಗಳಲ್ಲಿ ಪ್ರಯಾಣಿಕರಿಗೆ ರೈಲ್ವೆಯ ವತಿಯಿಂದಲೇ ಹೊದಿಕೆ ಒದಗಿಸಲಾಗುತ್ತಿತ್ತು. ಆದರೆ, ಕೊರೊನಾ ಸೋಂಕು ದೇಶವನ್ನು ಪ್ರವೇಶಿ ಸಿದ ಬಳಿಕ, ಸೋಂಕಿನ ವ್ಯಾಪಿಸುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಇಲಾಖೆಯು ತಿಳಿಸಿತ್ತು. ಸಂಚಾರ ರದ್ದಾಗಲ್ಲ: ರೈಲ್ವೆಯು ಸುಮಾರು 500ರಷ್ಟು ರೈಲುಗಳ ಸಂಚಾರವನ್ನೇ ರದ್ದು ಮಾಡಲಿದೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಮಂಡಳಿ, ಯಾವುದೇ ರೈಲಿನ ಸಂಚಾರವನ್ನೂ ರದ್ದುಗೊಳಿಸುವ ನಿರ್ಧಾರ ಕೈಗೊಂಡಿಲ್ಲ ಮತ್ತು ಯಾವುದೇ ರೈಲು ನಿಲ್ದಾಣವನ್ನೂ ಮುಚ್ಚಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ.