Advertisement

ರೈಲ್ವೆ “ಸಿ’, “ಡಿ’ಹುದ್ದೆಗಳ ನೇಮಕಾತಿಗೆ ಚಾಲನೆ

08:15 AM Feb 16, 2018 | Team Udayavani |

ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ “ಸಿ’ ಮತ್ತು “ಡಿ’ ಗ್ರೂಪ್‌ನ 89,000 ಹುದ್ದೆಗಳ ನೇಮಕಾತಿಗಳಿಗೆ ಗುರುವಾರ ಚಾಲನೆ ನೀಡಲಾಗಿದೆ. ಈ ಬಗ್ಗೆ ರೈಲ್ವೆ ಸಚಿವ ಪಿಯೂಶ್‌ ಗೋಯಲ್‌ ಗುರುವಾರ ಟ್ವೀಟ್‌ ಮಾಡಿದ್ದಾರೆ.

Advertisement

ಇದು ರೈಲ್ವೆ ಇಲಾಖೆಯ ಇತಿಹಾಸದಲ್ಲೇ ಅತಿ ದೊಡ್ಡ ನೇಮಕ ಪ್ರಕ್ರಿಯೆ ಎಂದು ಹೇಳಲಾಗಿದ್ದು, ಟೆಕ್ನಿಷಿಯನ್‌, ಗ್ಯಾಂಗ್‌ಮನ್‌, ಸ್ವಿಚ್‌ಮನ್‌, ಟ್ರಾಕ್‌ ಮನ್‌, ಕ್ಯಾಬಿನ್‌ಮನ್‌, ವೆಲ್ಡರ್‌ಗಳು ಹಾಗೂ ಪೋರ್ಟರ್‌ಗಳ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಮಾ. 12ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರಿಂದಾಗಿ ವಾರ್ಷಿಕವಾಗಿ ರೈಲ್ವೆ ಇಲಾಖೆಗೆ 3ರಿಂದ 4 ಸಾವಿರ ಕೋಟಿ ರೂ. ಹೊರೆಬೀಳಲಿದೆ.  2018-19ರ ಬಜೆಟ್‌ನಲ್ಲಿ ಇದಕ್ಕೆ ಹಣ ನೀಡಲಾಗಿದೆ.

ಎಸ್ಸೆಸ್ಸೆಲ್ಸಿ ಹಾಗೂ ಡಿಪ್ಲೊಮಾ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಗ್ರೂಪ್‌ “ಡಿ’ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ವಯೋಮಿತಿ 18ರಿಂದ 31 ವರ್ಷ ಎಂದು ತನ್ನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಆಯ್ಕೆಗೊಂಡ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ ಶಿಫಾರಸಿನಂತೆ (ಲೆವೆಲ್‌1) ವೇತನ ನೀಡಲಾಗುವುದು ಎಂದು ಹೇಳಲಾಗಿದೆ. ಇದೇ ಮಾದರಿಯಲ್ಲಿ ಇನ್ನು, 26,502 ಗ್ರೂಪ್‌ “ಸಿ’ ಹುದ್ದೆಗಳ ಆಯ್ಕೆ ನಡೆಸಲಾಗುವುದು ಎಂದು ಇಲಾಖೆ ತಿಳಿಸಿದೆ. 

89,000 ಖಾಲಿ ಇರುವ “ಸಿ’ ಮತ್ತು “ಡಿ’ ಗ್ರೂಪ್‌ ಹುದ್ದೆಗಳು
3,000 – 4,000 ಕೋಟಿ ರೂ. ನೂತನ ನೇಮಕಾತಿಯಿಂದ ಇಲಾಖೆಗೆ ಆಗುವ ವೇತನ ಹೊರೆ
40,000 – 45,000 ಪ್ರತಿ ವರ್ಷ ರೈಲ್ವೆ ಇಲಾಖೆಯಲ್ಲಿ ನಿವೃತ್ತಿಯಾಗುವ ನೌಕರರ ಸಂಖ್ಯೆ
ಇಲಾಖೆಯ ಇತಿಹಾಸದಲ್ಲೇ ಅತಿ ದೊಡ್ಡ ನೇಮಕಾತಿ
ಆಯ್ಕೆಯಾದವರಿಗೆ 7ನೇ ವೇತನ ಆಯೋಗದ ಶಿಫಾರಸು ವೇತನ

Advertisement

Udayavani is now on Telegram. Click here to join our channel and stay updated with the latest news.

Next