Advertisement

ಕಲ್ಕಾ-ಶಿಮ್ಲಾ ನಡುವೆ ಗಾಜು ಮುಚ್ಚಿದ ರೈಲು ಆರಂಭ

11:37 AM Dec 26, 2019 | Team Udayavani |

ಚಂಡೀಗಡ್‌: ಕಲ್ಕಾ-ಶಿಮ್ಲಾ ಮಾರ್ಗದಲ್ಲಿ ಏಳು ಕೋಚ್‌ಗಳ ಗಾಜು ಮುಚ್ಚಿರುವ ವಿಸ್ಟಾಡೋಮ್‌ ರೈಲು ಸೇವೆಯನ್ನು ಪ್ರಾರಂಭಿಸಿಸಲಾಗಿದೆ. ಕೆಂಪು ಬಣ್ಣದ ರೈಲು ಹರಿಯಾಣದ ಕಲ್ಕಾ ರೈಲು ನಿಲ್ದಾಣದಿಂದ ಬೆಳಗ್ಗೆ 7 ಗಂಟೆ ಸುಮಾರಿಗೆ ತೆರಳುತ್ತದೆ. ಈ ರೈಲಿಗೆ ಹಿಮದರ್ಶನ್‌ ಎಂದು ಹೆಸರಿಡಲಾಗಿದ್ದು, ಇದು 100ಕ್ಕೂ ಹೆಚ್ಚು ಪ್ರಯಾಣಿಕರ ಆಸನ ಸಾಮರ್ಥ್ಯ ಹೊಂದಿದೆ.

Advertisement

ಈ ವರ್ಷದ ಆರಂಭದಲ್ಲಿ, ಒಂದು ವಿಸ್ಟಾಡೋಮ್‌ ರೈಲನ್ನು ಪ್ರಾರಂಭಿಸಿತ್ತು. ಆದರೆ ಇದಕ್ಕೆ ಭಾರಿ ಪ್ರತಿಕ್ರಿಯೆ ವ್ಯಕ್ತವಾದ ದೃಷ್ಠಿಯಿಂದ ಈಗ 7 ಕೋಚ್‌ಗಳ ಒಂದು ರೈಲನ್ನೇ ಪ್ರಾರಂಭಿಸಲಾಗಿದೆ. ಈ ರೈಲು ಸೇವೆ ಅತ್ಯಂತ ರೋಮಾಂಚನಕಾರಿಯಾಗಿದ್ದು, ಜಗತ್ತಿನ ಕೆಲವು ಆಕರ್ಷಕ ರೈಲುಗಳಲ್ಲಿ ಇದು ಒಂದಾಗಿದೆ. ಶಿಮ್ಲಾಕ್ಕೆ ತೆರಳುವ ಪ್ರವಾಸಿಗರು ಈ ಗಾಜಿನ ಸುತ್ತುವರಿದ ಬೋಗಿಗಳಲ್ಲಿ ಹಿಮ ಮತ್ತು ಮಳೆಯನ್ನು ಅನುಭವಿಸ ಬಹುದಾಗಿದೆ.

ರೈಲಿನ ಎಡ-ಬಲ ಮತ್ತು ಮೇಲಿನ ಭಾಗವನ್ನು ಸಂಪೂರ್ಣ ಗಾಜಿನಿಂದಲೇ ತಯಾರಿಸಲಾಗಿದೆ. ಇದು ಅತ್ಯಂತ ಪಾರದರ್ಶಕವಾಗಿ ಪ್ರಕೃತಿಯನ್ನು ಅನುಭವಿಸಲು ನೆರವಾಗುತ್ತದೆ. ಪನೋರಮಿಕ್‌ ನೋಟವನ್ನು ನೀಡುವಂತೆ ಪಾರದರ್ಶಕ ಛಾವಣಿಗಳನ್ನು ಇದರಲ್ಲಿ ಅಳವಡಿಸಲಾಗಿದೆ. ದೂರದಲ್ಲಿ ಹಿಮಪಾತವಾಗುವ ದೃಶ್ಯಗಳನ್ನು ಇದರಲ್ಲಿ ನೋಡುತ್ತಾ ತೆರಳಬಹುದಾಗಿದೆ.

ಇನ್ನು ವಿಮಾನದ ವಿನ್ಯಾಸವನ್ನು ಅಂದಾಗೊಳಿಸಲಾಗಿದೆ. ವಿಸ್ಟಾಡೋಮ್‌ ಬೋಗಿಗಳನ್ನು ಸೊಗಸಾದ ಒಳಾಂಗಣ ಇದೆ. 95.5 ಕಿ.ಮೀ. ಈ ಮಾರ್ಗದಲ್ಲಿ ಮಾರ್ಗದಲ್ಲಿನ ಹವಾನಿಯಂತ್ರಿತ ವ್ಯವಸ್ಥೆಯನ್ನು ಈ ರೈಲು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next