Advertisement

ದೂರು ದುಮ್ಮಾನಗಳಿಗೆ ಇನ್ನು ಒಂದೇ ನಂಬರ್‌ ; ರೈಲ್ವೇ ಇಲಾಖೆಯಿಂದ ಮಹತ್ವದ ಹೆಜ್ಜೆ

10:00 AM Jan 04, 2020 | Hari Prasad |

ಹೊಸದಿಲ್ಲಿ: ರೈಲು ಪ್ರಯಾಣಿಕರು ಇಲಾಖೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಅಥವಾ ದೂರುಗಳನ್ನು ನೀಡಲು ರೈಲ್ವೇ ಸಹಾಯವಾಣಿಯಡಿ ಒದಗಿಸಲಾಗಿರುವ ನಾನಾ ಸಂಖ್ಯೆಗಳಿಗಾಗಿ ತಡಕಾಡಬೇಕಿಲ್ಲ.

Advertisement

ಕೇವಲ 139 ಸಂಖ್ಯೆಗೆ ಕರೆ ಮಾಡಿದರೆ, ಅದು ರೈಲ್ವೇ ತ್ವರಿತ ದೂರು ವಿಲೇವಾರಿ ಘಟಕವನ್ನು ಸಂಪರ್ಕಿಸುವುದಲ್ಲದೆ, ಪ್ರಯಾಣಿಕರಿಗೆ ಅಗತ್ಯವಾದ ನೆರವನ್ನೂ ನೀಡುತ್ತದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ. ಈ ಹಿಂದೆ, ಪ್ರಯಾಣಿಕರ ದೂರು- ದುಮ್ಮಾನಗಳನ್ನು ಆಲಿಸಲು ಅನೇಕ ಸಂಖ್ಯೆಗಳಿದ್ದವು. ಇದೆಲ್ಲವನ್ನೂ ಬದಿಗಿರಿಸಿ 139 ಸಂಖ್ಯೆಯೊಂದನ್ನೇ ಏಕಮೇವ ಸಂಖ್ಯೆಯನ್ನಾಗಿಸಲಾಗಿದೆ.

ಸುಲಭವಾಗಿ ನೆನಪಿಡಬೇಕಾದ ಈ ಸಂಖ್ಯೆಯನ್ನು ಕೇವಲ ಸ್ಮಾರ್ಟ್‌ ಫೋನ್‌ಗಳು ಮಾತ್ರವಲ್ಲದೆ ಯಾವುದೇ ಮೊಬೈಲ್‌ನಿಂದ ಡಯಲ್‌ ಮಾಡಬಹುದು. ಇಂಟರ್ಯಾಕ್ಟಿವ್‌ ವಾಯ್ಸ ರೆಸ್ಪಾನ್ಸ್‌ (ಐವಿಆರ್‌ಎಸ್‌) ಸೇವೆಗಳ ಆಧಾರದಲ್ಲಿ ಸೇವೆಗಳನ್ನು ಪಡೆಯಬಹುದಾಗಿದೆ. ಆದರೆ, ರೈಲ್ವೇ ಸುರಕ್ಷತೆಗೆ ಸಂಬಂಧಿಸಿದಂತೆ ದೂರು ನೀಡಲು ಈ ಹಿಂದೆ ಚಾಲ್ತಿಯಲ್ಲಿದ್ದ 182 ಸಂಖ್ಯೆಯನ್ನು ಹಾಗೆಯೇ ಮುಂದುವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next