Advertisement

ಭಾರತೀಯ ರೈಲ್ವೇಯ 2,500 ಕೋಚ್‌ಗಳಲ್ಲಿ ಐಸೋಲೇಶನ್‌ ವಾರ್ಡ್‌

01:55 AM Apr 07, 2020 | Hari Prasad |

ಭಾರತೀಯ ರೈಲ್ವೆ ತನ್ನ 2,500 ಕೋಚ್‌ಗಳನ್ನು ಐಸೋಲೇಶನ್‌ ವಾರ್ಡ್‌ಗಳನ್ನಾಗಿ ಪರಿವರ್ತಿಸುತ್ತಿದೆ. ಅಂದರೆ, 40 ಸಾವಿರ ರೋಗಿಗಳು ಇಲ್ಲಿ ಕೋವಿಡ್ 19 ವೈರಸ್ ಸೋಂಕಿಗೆ ಶುಶ್ರೂಷೆ ಪಡೆಯಬಹುದಾಗಿದೆ. ಪ್ರತಿ ಕೋಚ್‌ನಲ್ಲೂ 10 ರೋಗಿಗಳು ಚಿಕಿತ್ಸೆ ಪಡೆಯಲು, ಅಗತ್ಯ ಸೌಲಭ್ಯ ಏರ್ಪಡಿಸಲಾಗುತ್ತಿದೆ.

Advertisement

ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ. ಪ್ರತಿನಿತ್ಯ ಸರಾಸರಿ 375 ಕೋಚ್‌ಗಳು, ಐಸೋಲೇಶನ್‌ ವಾರ್ಡ್‌ಗಳಾಗಿ ರೂಪುಗೊಳ್ಳುತ್ತಿವೆ.

‘ದೇಶದ ಎಲ್ಲ ಕಡೆಗಳಲ್ಲಿ ಈ ಯೋಜನೆ ಜಾರಿಗೆ ತರುವುದು ಅತ್ಯಂತ ಸವಾಲಿನ ಕೆಲಸ. ಪ್ರಸ್ತುತ 133 ರೈಲ್ವೆ ಪ್ರದೇಶಗಳಲ್ಲಿ ಈ ಕೆಲಸ ನಡೆಯುತ್ತಿದೆ’ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next