Advertisement

Narendra Modi; 41 ವರ್ಷಗಳ ಬಳಿಕ ಆಸ್ಟ್ರಿಯಾಗೆ ಭಾರತದ ಪ್ರಧಾನಿ ಭೇಟಿ!

09:35 PM Jul 02, 2024 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 8 ಮತ್ತು 9ರಂದು ರಷ್ಯಾ ಮತ್ತು 9 ಮತ್ತು 10ಕ್ಕೆ ಆಸ್ಟ್ರಿಯಾಗೆ ಭೇಟಿ ನೀಡಲಿದ್ದಾರೆ. 1983ರ ಬಳಿಕ ಆಸ್ಟ್ರಿಯಾ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಅವರು ಪಾತ್ರರಾಗಲಿದ್ದಾರೆ.

Advertisement

41 ವರ್ಷಗಳ ಹಿಂದೆ ಪ್ರಧಾನಿ ಇಂದಿರಾ ಗಾಂಧಿ ಆಸ್ಟ್ರಿಯಾಗೆ ಭೇಟಿ ನೀಡಿದ್ದರು. ಆ ಬಳಿಕ ಮತ್ತೆ ಯಾವುದೇ ಪ್ರಧಾನಿ ಆಸ್ಟ್ರಿಯಾಗೆ ತೆರಳಿರಲಿಲ್ಲ. 1949ರಿಂದಲೇ ಆಸ್ಟ್ರಿಯಾ ಹಾಗೂ ಭಾರತದ ಮಧ್ಯೆ ರಾಜತಾಂತ್ರಿಕ ಸಂಬಂಧಗಳು ಶುರುವಾಗಿವೆ. ಜತೆಗೆ, ರಷ್ಯಾ ಉಕ್ರೇನ್‌ ವಿರುದ್ಧ ಆರಂಭಿಸಿದ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ. ಈ ಭೇಟಿ ವೇಳೆ, ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next