ಅಬುಧಾಬಿ : ಐಪಿಎಲ್ ಆರಂಭವಾಗಿದೆ.ಆದರೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ಕೆಲ ಆಟಗಾರರು ತಮ್ಮ ಮೊದಲ ಪಂದ್ಯವನ್ನು ಆಡುವುದು ಅನುಮಾನ. ಇಂಗ್ಲೆಂಡ್ ತಂಡದ ಆಟಗಾರ ರಾಜಸ್ಥಾನ್ ರಾಯಲ್ಸ್ ತಂಡದ ಸ್ಟಾರ್ ಪ್ಲೇಯರ್ ಜೋಸ್ ಬಟ್ಲರ್ ತಮ್ಮ ಮೊದಲ ಪಂದ್ಯ ತಪ್ಪಿಸಿಕೊಳ್ಳವುದು ಖಚಿತವಾಗಿದೆ.
ಜೋಸ್ ಬಟ್ಲರ್ ಆಸ್ಟ್ರೇಲಿಯಾದ ವಿರುದ್ಧದ ಸರಣಿಯನ್ನು ಮುಗಿಸಿ ಗುರುವಾರ ದುಬೈಗೆ ಬಂದು ಇಳಿದಿದ್ದಾರೆ. ತಮ್ಮ ಕುಟುಂಬದೊಂದಿಗೆ ಆಗಮಿಸಿರುವ ಅವರು ಸದ್ಯ ಕಡ್ಡಾಯ ಕ್ವಾರಂಟೈನ್ ನಲ್ಲಿ ಇದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಲೈವ್ ಚ್ಯಾಟ್ ನಲ್ಲಿ ಮಾತಾಡಿದ ಬಟ್ಲರ್ ತಂಡದ ಕುರಿತು ಹಾಗೂ ಮೊದಲ ಪಂದ್ಯದ ಕುರಿತು ಮಾತಾನಾಡಿದ್ದಾರೆ.
ದುರದೃಷ್ಟವಶಾತ್ ನಾನು ರಾಜಸ್ಥಾನ ತಂಡದ ಮೊದಲ ಪಂದ್ಯವನ್ನು ಮಿಸ್ ಮಾಡಿಕೊಳ್ಳುತ್ತಾನೆ. ನಾನೀಗ ನನ್ನ ಕುಟುಂಬದೊಂದಿಗೆ ಕಡ್ಡಾಯ ಕ್ವಾರಂಟೈನ್ ನಲ್ಲಿದ್ದೇನೆ.ಕುಟಂಬವನ್ನು ನಾನೊಟ್ಟಿಗೆ ಇರಲು ಅನುಮತಿ ಕೊಟ್ಟ ರಾಜಸ್ಥಾನ್ ತಂಡಕ್ಕೆ ಅಭಾರಿಯಾಗಿರುತ್ತೇನೆ ಎಂದಿದ್ದಾರೆ.
ಇದೇ ಸಮಯದಲ್ಲಿ ಬಟ್ಲರ್ ತಮ್ಮ ಬ್ಯಾಟಿಂಗ್ ಕ್ರಮಾಂಕದ ಕುರಿತು ಮಾತಾನಾಡಿದ್ದಾರೆ. ನನಗೆ ತಂಡದಲ್ಲಿ ಆರಂಭಿಕನಾಗಿ ಕಣಕ್ಕೀಳಿವುದು ಇಷ್ಟ.ತಂಡದ ಕಪ್ತಾನಾ ಹಾಗೂ ಕೋಚ್ ಹೇಳಿದಾಗೆ ಯಾವ ಕ್ರಮಾಂಕದಲ್ಲಿ ಆಡಲು ಸಿದ್ಧ ಎಂದು ಹೇಳಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತನ್ನ ಈ ಬಾರಿಯ ಐಪಿಎಲ್ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಪ್ಟೆಂಬರ್ 22 ರಂದು ಆಡಲಿದೆ.