Advertisement

ಮಿಂಚ್‌ ಅಂಚೆ

02:51 PM Sep 04, 2017 | |

ನೋಟಿನ ಅಪನಗದೀಕರಣದ ನಂತರ ಎಲ್ಲರ ನೋಟ ಅಂಚೆ ಇಲಾಖೆ ಕಡೆಗೆ ತಿರುಗಿದೆ.  ಅಲ್ಲಿ ಖಾತೆ ತೆರೆಯಲು ಕಿರಿಕಿರಿ ಇಲ್ಲ. ಸಾವಿರಾರು ರೂ. ಮಿನಿಮಮ್‌ ಬ್ಯಾಲೆನ್ಸ್‌ ಇಡುವಂಗಿಲ್ಲ. ಎಷ್ಟು ಸಲ ಬೇಕಾದರೂ ದುಡ್ಡು ತೆಗೆಯಬಹುದು. ಮೊಬೈಲ್‌ ಆ್ಯಪ್‌ನಲ್ಲೇ ನಿಮ್ಮ ವ್ಯವಹಾರ ಮುಗಿಸಬಹುದು. ಈ ಮಟ್ಟಕ್ಕೆ ಅಂಚೆ ಇಲಾಖೆ ಬದಲಾಗಿದೆ. 

Advertisement

    ಭಾರತೀಯ ಅಂಚೆ ಇಲಾಖೆಗೆ ಸುಮಾರು 160 ವರ್ಷಗಳ ಇತಿಹಾಸವಿದೆ. ಮೊದಲು ಪತ್ರಗಳ ವಿಲೇವಾರಿಗಷ್ಟೇ ಸೀಮಿತವಾಗಿದ್ದ ಇಲಾಖೆ, ತದನಂತರ ತನ್ನ ಕದಂಬ ಬಾಹುಗಳನ್ನು ವಿಸ್ತರಿಸುತ್ತಾ ಹೋಯಿತು. ಇಂದು ಜಗತ್ತಿನಾದ್ಯಂತ ಇರುವ ಅತಿ ದೊಡ್ಡ ಸಾರ್ವಜನಿಕ ರಂಗದ ಉದ್ಯಮಗಳಲ್ಲಿ ಭಾರತೀಯ ಅಂಚೆ ಇಲಾಖೆಯೂ ಒಂದು. ತೊಂಭತ್ತರ ದಶಕದವರೆಗೆ ಮಂದಗತಿಯಲ್ಲೇ ಸಾಗಿದ ಇಲಾಖೆಯ ಬೆಳವಣಿಗೆ ಗಣಕೀಕೃತಗೊಂಡ ಮೇಲೆ ಹೊಸ ವೇಗ ಪಡೆದುಕೊಂಡಿದೆ. ಗಣಕೀಕೃತದಲ್ಲೇ ಆಫ್ಲೈನ್‌ ಮೋಡ್‌ನ‌ ಸುಮಾರು ಹದಿನೈದು ವರ್ಷಗಳ ಕಾಲ ಸಾಗಿ, ನಿಧಾನವಾಗಿ ಆನ್ಲ„ನ್‌ಗೆ ಲಗ್ಗೆ ಇಟ್ಟಿತು. ಯಾವಾಗ ಸಣ್ಣ ಉಳಿತಾಯ ಯೋಜನೆಗೆ ಇನ್ಫೋಸಿಸ್‌ನ ಸಹಯೋಗದೊಂದಿಗೆ CBS  (ಕೋರ್‌ ಬ್ಯಾಂಕಿಂಗ್‌ ಸೊಲ್ಯೂಷನ್‌) ಹಾಗೂ ವಿಮಾ ವಿಭಾಗಕ್ಕೆ Macmish ಸಾಫ್ಟ್ವೇರ್‌ ಬಳಸಲು ಪ್ರಾರಂಭಿಸಿತೋ, ಆಗ ಬ್ಯಾಂಕಿಗ್‌ ಹಾಗೂ ವಿಮಾ  ಕ್ಷೇತ್ರಕ್ಕೊಮ್ಮೆ ನಡುಕ ಹುಟ್ಟಿಸಿದ್ದು ನಿಜ. ಕಾರಣ, ಅಂಚೆ ಇಲಾಖೆಯಷ್ಟು ದೊಡ್ಡ ನೆಟ್‌ವರ್ಕ್‌ ಹೊಂದಿದ ಬ್ಯಾಂಕು ಭಾರತದಲ್ಲೇ ಇಲ್ಲ. ಅಂಚೆ ಇಲಾಖೆ 1,65,000 ಕ್ಕಿಂತ ಹೆಚ್ಚಿನ ಬ್ರಾಂಚ್‌ಗಳನ್ನು  ಹೊಂದಿದೆ. ಅದರಲ್ಲಿ ಬಹುತೇಕ ಗ್ರಾಮೀಣ ಭಾಗದಲ್ಲಿ ಇವೆ. ಪ್ರಸ್ತುತ ಎಸ್‌ಬಿಐಗಿಂತಲೂ ಹೆಚ್ಚಿನ ಕೋರ್‌ ಬ್ಯಾಂಕಿಂಗ್‌ ಬ್ರಾಂಚುಗಳನ್ನು ಅಂಚೆ ಇಲಾಖೆ ಹೊಂದಿದೆ. ಈ ವರ್ಷದಿಂದ ಪೇಮೆಂಟ್‌ ಬ್ಯಾಂಕ್‌ ಪರವಾನಿಗೆಯನ್ನೂ ಪಡೆದಿದೆ. 

 ಅಪನಗದಿಕರಣದ ನಂತರ ಅಂಚೆ ಇಲಾಖೆ 
ಅಪನಗದಿಕರಣದ ತರುವಾಯ ದಿನಕ್ಕೊಂದು ನೀತಿಯನ್ನು ಆರ್‌ಬಿಐ ಜಾರಿಗೆ ತರುತ್ತಿರುವುದರಿಂದ ಬೇಸತ್ತ ಗ್ರಾಹಕರು ಅಂಚೆ ಇಲಾಖೆಯತ್ತ ಮುಖ ಮಾಡುತ್ತಿದ್ದಾರೆ. ಬ್ಯಾಂಕಿನಲ್ಲಿ, ಒಂದು ತಿಂಗಳಿಗೆ ಮೂರಕ್ಕಿಂತ ಅಧಿಕ ಸಲ ತಮ್ಮ ಖಾತೆಗೆ ಹಣ ಜಮಾ ಮಾಡಿದಲ್ಲಿ, ಪ್ರತಿ ವ್ಯವಹಾರಕ್ಕೆ ರೂ. 50 ಸೇವಾ ಶುಲ್ಕ ನೀಡಬೇಕು ಆದರೆ ಅಂಚೆ ಇಲಾಖೆಯಲ್ಲಿ ಈ ಶುಲ್ಕ ಇಲ್ಲ. ಬ್ಯಾಂಕ್‌ನಲ್ಲಾದರೆ, ಖಾತೆಯಲ್ಲಿ ಕನಿಷ್ಠ ಮೊತ್ತ ಹೊಂದಿರಲೇ ಬೇಕು.  ಅದು ಮಹಾನಗರದಲ್ಲಿ ರೂ 5000, ನಗರದಲ್ಲಿ 2,000 ಸಾವಿರ , ಗ್ರಾಮೀಣ ಭಾಗದಲ್ಲಿ 1,000 ಹೊಂದಿರಬೇಕು. ಆದರೆ ಅಂಚೆ ಇಲಾಖೆಯಲ್ಲಿ ಕನಿಷ್ಠ ಮೊತ್ತವಾಗಿ ರೂ. 50 ಹೊಂದಿದ್ದರೆ ಸಾಕು.

    ಬ್ಯಾಂಕ್‌ ಎಟಿಎಂನಲ್ಲಿ, ನಗರದಲ್ಲಿ ತಿಂಗಳಿಗೆ ಮೂರು, ಗ್ರಾಮೀಣದಲ್ಲಿ ಐದು ಬಾರಿ ಹಣ ತೆಗೆಯಬಹುದು. ಅದರ ಬಳಿಕ ಪ್ರತಿ ವ್ಯವಹಾರಕ್ಕೆ ಸೇವಾಶುಲ್ಕ ನೀಡಬೇಕಾಗುತ್ತದೆ. ಅಂಚೆ ಇಲಾಖೆಯ ಎಟಿಎಂ ನಲ್ಲಿ ಈ ನಿರ್ಬಂಧ ಇಲ್ಲ.  ಖಾತೆಗೆ ಮೂರನೇ ವ್ಯಕ್ತಿ ಹಣ ಜಮಾ ಮಾಡಲು ಅಂಚೆ ಇಲಾಖೆಯಲ್ಲಿ ಯಾವುದೇ ನಿರ್ಬಂಧ ಇಲ್ಲ. ಬ್ಯಾಂಕಿನಲ್ಲಿ ಹಲವು ನಿರ್ಬಂಧಗಳಿವೆ. ಒಂದು ಖಾತೆ ತೆರೆಯಲು ಬ್ಯಾಂಕಿನಲ್ಲಿ ಗ್ರಾಹಕ ಒಂದು ವಾರದವರೆಗೂ ಕಾಯುವ ಪರಿಸ್ಥಿತಿ ಇದೆ.ಆದರೆ ಅಂಚೆ ಇಲಾಖೆಯಲ್ಲಿ ಕೇವಲ ಒಂದು ದಿನದಲ್ಲಿ ಖಾತೆ ತೆರೆದು ಅದಕ್ಕೆ ಡೆಬಿಟ್‌ ಕಾರ್ಡ್‌… ಸಹ ನೀಡುತ್ತಾರೆ.

     ಅಂಚೆ ಇಲಾಖೆಯು ಪ್ರಯೋಗಿಕವಾಗಿ ಐಪಿಪಿಬಿ ಇಂಡಿಯಾದ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಅನ್ನು ಜಾರ್ಖಂಡ್‌ ಹಾಗೂ ಛತ್ತಿಸ್‌ಗಡದಲ್ಲಿ ಪ್ರಾರಂಭಿಸಿದೆ. ಇನ್ನು ಕೆಲವೇ ತಿಂಗಳುಗಳಲ್ಲಿ ದೇಶಾದ್ಯಂತ ಈ ಬ್ಯಾಂಕ್‌ ಕಾರ್ಯ ನಿರ್ವಹಿಸಲಿದ್ದು. ಸಾಲ ಹೊರತುಪಡಿಸಿ ಉಳಿದೆಲ್ಲ ರೀತಿಯ ಬ್ಯಾಂಕಿಂಕ್‌ ಸೇವೆಯನ್ನು ನೀಡಲಿದೆ. ಈಗಾಗಲೇ ಪ್ರಾಂಭವಾಗಿರುವ ಏರ್‌ಟೆಲ… ಪೇಮೆಂಟ್‌ ಬ್ಯಾಂಕಿನಂತೆ ಹಣ ಹಿಂಪಡೆಯುವುದರ ಮೇಲೆ ಯಾವುದೇ ಶುಲ್ಕವಿರುವುದಿಲ್ಲ.  ಹತ್ತು ಸಾವಿರದವರೆಗೆ ಹಣವನ್ನು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಐಪಿಪಿಬಿ ಹೊಂದಿದೆ.  ಅಂಚೆ ಇಲಾಖೆಯ ಈ ಮಲ್ಟಿ ಟಾಸ್ಕ್ ಕೆಲಸದಿಂದಾಗಿ ಇಲಾಖೆಯಲ್ಲಿ ಇಪ್ಪತ್ತಕ್ಕಿಂತಲೂ ಹೆಚ್ಚು ಅಪ್ಲಿಕೇಷನ್‌ಗಳಿವೆ. ಇದು ಇಲಾಖೆಯ ಹಿರಿಯ ಹಾಗೂ ನಿವೃತ್ತಿ ಸಮೀಪವಿರುವ ನೌಕರರಿಗೆ ತೊಂದರೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈಗ ಈ ಎಲ್ಲ ಅಪ್ಲಿಕೇಷನ… ಗಳನ್ನು ಒಂದೇ ಪ್ಲಾಟ್‌ ಫಾರ್ಮ್ನ ಅಡಿಯಲ್ಲಿ ತರಲು  ಕೋರ… ಸಿಸ್ಟಮ… ಇಂಟಿಗ್ರೇಷನ… ಮೂಲಕ ಒಂದುಗೂಡಿಸುವ ಸಾಫ್ಟ್ವೇರ್‌ ಟಿಸಿಎಸ್‌ ಸಹಯೋಗದೊಂದಿಗೆ ಇಲಾಖೆ ಮಾಡುತ್ತಿದೆ.  ಮುಂದಿನ  ಕೆಲವೇ ತಿಂಗಳುಗಳಲ್ಲಿ ದೇಶದ ಎಲ್ಲ ಬ್ರ್ಯಾಂಚ್‌ಗಳು ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸಲಿವೆ.

Advertisement

 ಪತ್ರ,  ಪಾರ್ಸಲ್ ವ್ಯವಹಾರಗಳು
  ಅಂಚೆ ಇಲಾಖೆಯ ಅತ್ಯಂತ ಹಳೆಯ ಸೇವೆಯಲ್ಲಿ ಪತ್ರ ವ್ಯವಹಾರವೂ ಒಂದು. 1970ರ ದಶಕದವರೆಗೂ ಪತ್ರ ವ್ಯವಹಾರದಲ್ಲಿ ಅನಭಿಶಕ್ತ ದೊರೆಯಂತೆ ಮೆರೆದಾಡಿದ ಇಲಾಖೆಗೆ ತದನಂತರ ಬಂದ ಖಾಸಗಿ ಕೋರಿಯರ್‌ಗಳು ಸವಾಲನ್ನು ಒಡ್ಡಿದವು. ಇದನ್ನು ಮೆಟ್ಟಿ ನಿಲ್ಲಲು ಅಂಚೆ ಇಲಾಖೆ ಸ್ಪೀಡ್‌ ಪೋಸ್ಟ್‌ ಅನ್ನು ಪರಿಚಯಿಸಿತು. ಹಾಗೂ ತನ್ನ ಪತ್ರ ಸೋರ್ಟಿಂಗ್‌ ವಿಭಾಗವನ್ನು ಮರು ಪರಿಶೀಲಿಸಿ ವೇಗದ ವಿಲೇವಾರಿಗೆ ಒತ್ತು ನೀಡಿತು. ಇತ್ತೀಚಿನ CAG (Comptroller and Auditor General) ಸರ್ವೇ ಪ್ರಕಾರ ಅಂಚೆ ಇಲಾಖೆಯ ಸ್ಪೀಡ್‌ ಪೋಸ್ಟ್‌ ಶೇ. 99ರಷ್ಟು ಖಚಿತ ಡೆಲಿವರಿ ನೀಡುತ್ತದೆಯಂದು ಹೇಳಿದೆ. ಆದರೆ ಕೋರಿಯರ್‌ನದ್ದು ಕೇವಲ ಶೇ 90 ರಷ್ಟು ಮಾತ್ರ.  ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವ್ಯವಹಾರ ಹೆಚ್ಚಿರುವುದನ್ನು ಅರಿತ ಇಲಾಖೆ COD ( (ಕ್ಯಾಷ್‌ ಆನ್‌ ಡೆಲಿವರಿ) ಸೌಲಭ್ಯವನ್ನು ಪರಿಚಯಿಸಿತು. ಇದಕ್ಕೆ ಉತ್ತಮ ಬೆಂಬಲ ದೊರೆತ ಪರಿಣಾಮ ನಷ್ಟದಿಂದ ನಡೆಯುತ್ತಿದ್ದ ಇಲಾಖೆ ಲಾಭದೆಡೆಗೆ ಮುಖ ಮಾಡಿದೆ.

ಸಣ್ಣ ಉಳಿತಾಯ 
ಸಣ್ಣ ಉಳಿತಾಯದಲ್ಲಿ ಬ್ಯಾಂಕಿನಲ್ಲಿರುವಷ್ಟೇ ಹಲವು ಬಗೆಯ ಸ್ಕೀಮುಗಳು, ಅಂಚೆ ಇಲಾಖೆಯಲ್ಲಿ  ಅಷ್ಟೇ ಅಲ್ಲದೆ ಪಸ್ತುತ  ಬ್ಯಾಂಕಿನಲ್ಲಿರುವುದಕ್ಕಿಂತ ಶೇ.1 ರಷ್ಟು ಬಡ್ಡಿ ದರ ಹೆಚ್ಚಿದೆ. ಸಣ್ಣ ಉಳಿತಾಯಕ್ಕೆ ಶೇ.4ರಷ್ಟು ಬಡ್ಡಿ, ಒಂದರಿಂದ ನಾಲ್ಕು ವರ್ಷದ ಟಿಡಿಗಳಿಗೆ 6.8ರಿಂದ 7.6ತನಕ ಬಡ್ಡಿ ಕೊಡುತ್ತಿದೆ. ಪಿಪಿಎಫ್ 7.3, ಅತಿ ಹೆಚ್ಚು ಬಡ್ಡಿ ಅಂದರೆ ಸುಕನ್ಯಾ ಸಮೃದ್ಧಿ ಯೋಜನೆ ಶೇ. 8.3.    ಈ ಎಲ್ಲಾ ಸ್ಕೀಮುಗಳಲ್ಲಿ ಇಡೀ ದೇಶದಾದ್ಯಂತ ಎಲ್ಲಾ ಅಂಚೆ ಇಲಾಖೆಯಲ್ಲಿ ತೆರೆಯಬಹುದು. ಯಾವುದೇ ಶುಲ್ಕವಿಲ್ಲದೆ. 

ವಿಮೆ 
    ವಿಮಾ ವಿಭಾಗದಲ್ಲಿ ನಿಧಾನಗತಿಯ ವ್ಯವಹಾರದಿಂದ ಅಂಚೆ ಇಲಾಖೆ ಸ್ವಲ್ಪ ಹಿನ್ನಡೆ ಅನುಭವಿಸಿದ್ದು ನಿಜ. ಅಷ್ಟೇ ಅಲ್ಲದೇ ಜಾಹೀರಾತಿನ ಕೊರತೆಯಿಂದಲೂ ನೀರಿಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಪ್ರಸ್ತುತ Macmish  ಸಾಫ್ಟ್ವೇರ್‌ ಉಪಯೋಗದಿಂದ ವಿಮೆ ವ್ಯವಹಾರವನ್ನು ಆನ್‌ಲೈನ್‌ ಮಾಡಲಾಗಿದೆ. ವಿಮೆಯ ಹಣವನ್ನು ಆನ್‌ಲೈನ್‌ನಿಂದಲೂ ತುಂಬಬಹುದು. ಅಲ್ಲದೆ, ಪ್ರತಿ ತಿಂಗಳು ನಿಮ್ಮ ಬ್ಯಾಂಕಿನ ಅಕೌಟ್‌ನಿಂದಲೂ ಉಇಖ ಮೂಲಕ ನೇರವಾಗಿ ವಿಮೆ ಕಂತನ್ನು ತುಂಬಬಹುದು. ಈ ವಿಮಾ ಕಂತುಗಳಿಗೆ ಆದಾಯ ತೆರಿಗೆ ವಿನಾಯಿತಿಯನ್ನು ಪಡೆಯಬಹುದು.

 ಎರಡು ಬಗೆ ವಿಮೆಗಳಿವೆ
ಪ್ರಮುಖವಾಗಿ ಭಾರತೀಯ ಅಂಚೆ ವಿಮೆ ಹಾಗೂ ಗ್ರಾಮೀಣ ಅಂಚೆ ವಿಮೆ . ಭಾರತೀಯ ಅಂಚೆ ವಿಮೆಯನ್ನು ಪಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಲ್ಲದೇ ಪಿಎಸ್‌ಯು ನಿಗಮ ಮಂಡಳಿಯ ನೌಕರರು ಅರ್ಹರಾಗಿರುತ್ತಾರೆ. ಇನ್ನು ಗ್ರಾಮೀಣ ಅಂಚೆ ವಿಮೆ ಹೆಸರೇ ಹೇಳುವಂತೆ ಗ್ರಾಮೀಣ ಜನರಿಗಾಗಿ ಆರಂಭಿಸಲ್ಪಟ್ಟ ವಿಮೆಯಾಗಿದೆ. ಪ್ರಸ್ತುತ ಭಾರತೀಯ ಅಂಚೆ ವಿಮೆ ಶೇ. 55 ರಿಂದ 65 ರಷ್ಟು ಬೋನಸ್‌ ನೀಡುತ್ತಿದೆ. ಅಲ್ಲದೆ ಗ್ರಾಮೀಣ ಅಂಚೆ ವಿಮೆಗೆ ಶೇ.50 ರಿಂದ 60 ರವರೆಗೆ ಬೋನಸ್‌ ನೀಡುತ್ತಿದೆ. ಇದು ಎಲ್ಐಸಿಯ ಬೋನಸ್‌ ಪ್ರಮಾಣಕ್ಕಿಂತ ಹೆಚ್ಚು. ಎಲ್ಐಸಿಯು ಪ್ರಸ್ತುತ  ಶೇ.45 ರಷ್ಟು ಬೋನಸ್‌ ನೀಡುತ್ತಿದೆ.

 ಜನರಿಗಾಗಿಯೇ ಯೋಜನೆಗಳು..
ಅಂಚೆ ಇಲಾಖೆಯಲ್ಲಿ ಕೇಂದ್ರ ಸರ್ಕಾರದ ಹಲವು ಜನಸ್ನೇಹಿ ಯೋಜನೆಗಳಿವೆ.  ಪ್ರಧಾನಮಂತ್ರಿ ಸುರûಾ$ ಭೀಮಾ ಯೋಜನೆಯಲ್ಲಿ ಪ್ರತಿ ತಿಂಗಳು 1 ರೂ. ಪಾವತಿಸಿ,  ಅಪಘಾತದಲ್ಲಿ ಮರಣ ಹೊಂದಿದರೆ 2 ಲಕ್ಷದವರೆಗೆ ವಿಮಾ ಸೌಲಭ್ಯ ಪಡೆಯಬಹುದು. ಅಲ್ಲದೆ ಅಂಗ ಊನವಾದರೆ ಒಂದು ಲಕ್ಷ$ದವರೆಗೆ ವಿಮೆ ಪಡೆಯಬಹುದು.   ಪ್ರಧಾನಮಂತ್ರಿ ಜೀವನ್‌ ಜ್ಯೋತಿ ಭೀಮಾ ಯೋಜನೆಯಲ್ಲಿ ಪ್ರತಿ ವರ್ಷ 330 ರೂ.  ಪಾವತಿಸಿ ಯಾವ ರೀತಿ ಮರಣ ಹೊಂದಿದರೂ 2 ಲಕ್ಷದವರೆಗೆ ವಿಮಾ ಸೌಲಭ್ಯ ಪಡೆಯಬಹುದು.

ಅಟಲ್ ಪೆನ್ಷನ್‌ಯೋಜನೆಯಲ್ಲಿ -ಪ್ರತಿ ದಿನ 1 ರೂ ನಂತೆ ಪಾವತಿಸಿ 60 ವರ್ಷದ ಬಳಿಕ ಪ್ರತಿ ತಿಂಗಳು ರೂ 1000 ದಿಂದ 5000 ದವರೆಗೆ ಪೆನ್ಷನ್‌ ಪಡೆಯಬಹುದು.

  ಸುಕನ್ಯಾ ಸಮೃದ್ಧಿ ಯೋಜನೆ 
ಹತ್ತು ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಮೋದಿ ಸರ್ಕಾರ ರೂಪಿಸಿದ ಅತ್ಯುತ್ತಮ ಯೋಜನೆ ಇದಾಗಿದೆ. ಪ್ರತಿ ತಿಂಗಳು ರೂ 1000 ದಂತೆ ಪಾವತಿಸಿದೆರೆ 21 ವರ್ಷದ ಬಳಿಕ ರೂ 6 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಪಡೆಯಬಹುದು. ಇನ್ನು, ವಿದೇಶದಿಂದ ಸುಲಭವಾಗಿ ಹಣ ಪಡೆಯಲು ಅಂಚೆ ಇಲಾಖೆಯು ವೆಸ್ಟ್ರನ್‌ ಯೂನಿಯನ್‌ ಜೊತೆ ಒಪ್ಪಂದ ಮಾಡಿಕೊಂಡು, ಜನರಿಗೆ ಅತಿ ಸರಳವಾಗಿ ಹಣ ವರ್ಗಾವಣೆ ಸೇವೆ ಒದಗಿಸುತ್ತಿದೆ. 
ಇದರಂತೆ, ಭಾರತದೊಳಗೆ ಎಲ್ಲಿಗಾದರೂ ಸಣ್ಣ ಪ್ರಮಾಣದಲ್ಲಿ ಹಣ ವರ್ಗಾವಣೆ ಮಾಡಲು ಇ ಮನಿ ಆರ್ಡರ್‌ ವ್ಯವಸ್ಥೆ ಹಾಗೂ ಹೆಚ್ಚಿನ ಹಣ ಇದ್ದಲ್ಲಿ ಐಎಮ್‌ಓ ಮೂಲಕ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದು.

    ಹವ್ಯಾಸಿ ಅಂಚೆ ಚೀಟಿ ಸಂಗ್ರಹ
ಅಂಚೆ ಚೀಟಿ ಸಂಗ್ರಹ ಮಾಡುವ ಹವ್ಯಾಸ ಉಳ್ಳವರಿಗೆ ಇಲಾಖೆಯಲ್ಲಿ ಒಂದು ಖಾತೆ ತೆರೆದರೆ ಸಾಕು, ಹೊಸ ಹೊಸ ಅಂಚೆ ಚೀಟಿ ಬಿಡುಗಡೆಯಾದ ಕೂಡಲೆ ನೇರವಾಗಿ ಅಂಚೆ ಮೂಲಕ ಮನೆಗೆ ತಲುಪುವ ವ್ಯವಸ್ಥೆಯನ್ನು ಮಾಡಲಾಗುವುದು. ಅಲ್ಲದೆ ಮೈ ಸ್ಟಾಂಪ್‌ ವಿಭಾಗದಲ್ಲಿ ನಿಮ್ಮದೇ ಛಾಯಾಚಿತ್ರದ ಅಂಚೆ ಚೀಟಿಯನ್ನು ಪಡೆಯಬಹುದು.

    ಇಷ್ಟೆಲ್ಲ ಬದಲಾವಣೆಯೊಂದಿಗೆ ಅಂಚೆ ಇಲಾಖೆ ಮುಂದಡಿ ಇಡುತ್ತಿದೆ. ಅತಿ ಪುರಾತನ ಇಲಾಖೆಗೆ ಹೊಸ ಹೊಸ ಯುವ ಮುಖಗಳು ಬರುತ್ತಿವೆ. ಇಂಥ ಹೊಸ ಯೋಜನೆಗಳಿಂದಾಗಿ ಭವಿಷ್ಯದ ಅರ್ಥವ್ಯವಸ್ಥೆಯಲ್ಲಿ ಅಂಚೆ ಇಲಾಖೆಯ ಪಾತ್ರ ಹೆಚ್ಚುವುದಂತೂ ದಿಟ. 

ಮೊಬೈಲ್ ಆ್ಯಪ್‌ ಉಂಟು
    ಪೋಸ್ಟ್‌ ಇನ್ಫೋ  ಅಂಚೆ ಇಲಾಖೆಯ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಇನ್‌ ಪೋಸ್ಟಲ್ ಟೆಕ್ನಾಲಜಿ ವಿಭಾಗವು ಈ ಆ್ಯಪ್‌ ಹೊರ ತಂದಿದ್ದು, ಇದುವರೆಗೆ 5 ಲಕ್ಷ ಜನ ಡೌನ್‌ಲೋಡ್‌ ಮಾಡಿದ್ದಾರೆ. ಇಲಾಖೆಗೆ ಸಂಬಂಧಪಟ್ಟಂತಹ ಹಲವು ಮಾಹಿತಿಗಳನ್ನು ಈ ಆ್ಯಪ್‌ ಮೂಲಕ ಪಡೆಯಬಹುದು. ಇದರಂತೆ, ಪೋಸ್ಟ್‌ ಆಫೀಸ್‌ ಸೇವಿಂಗ್ಸ್‌  ಈ ಆ್ಯಪ್‌ ಅನ್ನು ಆರ್‌ಆರ್‌ ಫೈನಾನ್ಸ… ಹೊರತಂದಿದೆ. ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳ ಸಂಪೂರ್ಣ ವಿವರ ಈ ಆ್ಯಪ್‌ನಲ್ಲಿ ಇದೆ. ಇದುವರೆಗೆ 1000 ಜನ ಡೌನ್‌ಲೋಡ್‌ ಮಾಡಿದ್ದಾರೆ. ಪೋಸ್ಟಲ್ ಲೈಫ್ ಇನ್ಸೂರೆನ್ಸ್‌ ಈ ಆ್ಯಪ್‌ ಕೂಡ ಇದೆ.  ಇಂಡಿಯಪೋಸ್ಟ್‌ ಮೊಬೈಲ್ ಬ್ಯಾಂಕಿಂಗ್‌ ಆ್ಯಪ್‌ ಅನ್ನು ಭಾರತೀಯ ಅಂಚೆ ಅಧಿಕೃತವಾಗಿ ಹೊರತಂದಿದ್ದು . ಇದರ ಮೂಲಕ ಮೊಬೈಲ… ಬ್ಯಾಂಕಿಂಗ್‌ ವ್ಯವಹಾರ ನಡೆಸಬಹುದು. ಇದುವರೆಗೆ ಒಂದು ಲಕ್ಷ ಜನ ಡೌನ್‌ಲೋಡ್‌ ಮಾಡಿದ್ದಾರೆ.

 ರಂಗನಾಥ ಹಾರಗೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next