Advertisement

ಪ್ರಜಾಪ್ರಭುತ್ವ ರಕ್ಷಿಸುವ ನಿಟ್ಟಿನಲ್ಲಿ ಕ್ರಿಪ್ಟೋ ನಿಯಂತ್ರಣವಾಗಲಿ

12:40 AM Dec 11, 2021 | Team Udayavani |

ಹೊಸದಿಲ್ಲಿ: ಜಾಗತಿಕ ಮಟ್ಟದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಕ್ರಿಪ್ಟೋ ಕರೆನ್ಸಿಗಳು ವಿವಿಧ ದೇಶಗಳ ಪ್ರಜಾಪ್ರಭುತ್ವವನ್ನು ಕಾಪಾ ಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿ­ಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ, ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

Advertisement

ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಆಯೋಜಿಸಿದ್ದ “ಪ್ರಜಾಪ್ರಭುತ್ವ ವಿಷಯಾ­ಧಾರಿತ ಸಮ್ಮೇಳನ’ದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿದ್ದ ಅವರು, “ಇಂದಿನ ವೈಜ್ಞಾನಿಕ ಯುಗದಲ್ಲಿ ಆಧುನಿಕ ತಂತ್ರಜ್ಞಾನಗಳು ಪ್ರಜಾ­­ಪ್ರಭುತ್ವ ವ್ಯವಸ್ಥೆಗಳ ಮೇಲೆ ಸಕಾರಾತ್ಮಕವಾಗಿ ಹಾಗೂ ನಕಾ­ರಾತ್ಮಕವಾಗಿ ಪರಿಣಾಮ ಬೀರಬಲ್ಲವಾದ್ದರಿಂದ ಜಗತ್ತಿನ ತಂತ್ರಜ್ಞಾನ ಅಭಿವೃದ್ಧಿ ಕಂಪೆನಿಗಳು, ಪ್ರಜಾಪ್ರಭುತ್ವವನ್ನು ಕಾಪಾಡುವಂಥ ತಂತ್ರಜ್ಞಾನಗಳನ್ನು ಬಳಕೆಗೆ ತರಬೇಕು’ ಎಂದು ಮನವಿ ಮಾಡಿದರು.

ಇದನ್ನೂ ಓದಿ:ವಾಸ್ತುಶಿಲ್ಪಿ ಬಾಲಕೃಷ್ಣ ಜೋಷಿಗೆ ರಾಯಲ್‌ ಗೋಲ್ಡ್‌ ಮೆಡಲ್‌ 2022 ಗೌರವ

ಗಾಂಧಿಯನ್ನು ಸ್ಮರಿಸಿದ ಬೈಡನ್‌: ಸಮ್ಮೇಳನದಲ್ಲಿ ಮಾತನಾಡಿದ ಬೈಡೆನ್‌, ಮಹಾತ್ಮ ಗಾಂಧಿ ಹಾಗೂ ನೆಲ್ಸನ್‌ ಮಂಡೇಲಾ ಅವರು ಅಮೆರಿಕದ ಸಾಮಾಜಿಕ ಹೋರಾಟಗಾರ ಜಾನ್‌ ಲೂಯಿಸ್‌ಗೆ ಸ್ಫೂರ್ತಿ­ಯಾಗಿದ್ದರು. ಪ್ರಜಾಪ್ರಭುತ್ವವೆಂಬುದು ದೇಶದ ವ್ಯವಸ್ಥೆ ಯಲ್ಲ, ಅದೊಂದು ಆಚರಣೆ ಎಂದು ಲೂಯಿಸ್‌ ತಮ್ಮ ಅಂತ್ಯಕಾಲದಲ್ಲಿ ಹೇಳಿದ್ದರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next