Advertisement

ಆಟಗಾರರ ಟ್ಯಾಟೂ, ಹೇರ್‌ ಸ್ಟೈಲ್‌ ಸಮರ್ಥಿಸಿಕೊಂಡ ರವಿಶಾಸ್ತ್ರಿ

07:40 AM Sep 16, 2017 | Team Udayavani |

ನವದೆಹಲಿ: ಟ್ಯಾಟೂ, ವಿಭಿನ್ನ ಹೇರ್‌ ಸ್ಟೈಲ್‌ ಇದ್ದರೆ ಮಾತ್ರ ಭಾರತ ತಂಡದಲ್ಲಿ ಸ್ಥಾನ ಎಂದು ಈ ಹಿಂದೆ ಕೆಲವು ಮಾಜಿ ಆಟಗಾರರು ಟೀಕಿಸಿದ್ದರು. ಆದರೆ ಸ್ವತಃ ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಆಟಗಾರರನ್ನು ಸಮರ್ಥಿಸಿಕೊಂಡಿದ್ದಾರೆ.

Advertisement

ನಮ್ಮ ಆಟಗಾರರು ಯಾವ ಫ್ಯಾಷನ್‌ಗಾರಗಿಗೂ ಕಮ್ಮಿಯಿಲ್ಲ. ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ, ಕೆ.ಎಲ್‌.ರಾಹುಲ್‌ ಆಗಾಗ ಹೇರ್‌ ಸ್ಟೈಲ್‌ ಬದಲಿಸುತ್ತಾ ಇರುತ್ತಾರೆ. ಇವರು ಟ್ಯಾಟೂವನ್ನು ಇಷ್ಟಪಡುತ್ತಾರೆ. ಇದು ಆಟಗಾರರಲ್ಲಿ ಉತ್ಸಾಹ ತರುತ್ತಿದೆ ಎಂದು ತಿಳಿಸಿದ್ದಾರೆ.

ಫಿಟೆ°ಸ್‌ ಕಾಯ್ದುಕೊಳ್ಳಲು ಆಟಗಾರರು ಶ್ರಮವಹಿಸುತ್ತಾರೆ. ಅವರಿಗೆ ಬೇಕಾದ ಅಗತ್ಯ ಮಾರ್ಗದರ್ಶನವನ್ನು ನೀಡುತ್ತೇವೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next