Advertisement

Para World Cup Shooting: ಭಾರತ ತಂಡಕ್ಕೆ ಬಂಗಾರ

12:18 AM Mar 13, 2024 | Team Udayavani |

ಹೊಸದಿಲ್ಲಿ: ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ 2ನೇ ಚಿನ್ನದ ಪದಕ ಜಯಿಸಿದೆ. ಮಂಗಳವಾರದ 10 ಮೀ. ಏರ್‌ ಪಿಸ್ತೂಲ್‌ ಸ್ಟಾಂಡರ್ಡ್‌ (ಎಸ್‌ಎಚ್‌1) ವಿಭಾಗದಲ್ಲಿ ಚಿನ್ನ ಒಲಿಯಿತು.

Advertisement

ದಕ್ಷಿಣ ಕೊರಿಯಾ ವಿರುದ್ಧದ ಫೈನಲ್‌ನಲ್ಲಿ ರುದ್ರಾಂಶ್‌ ಖಾಂಡೇಲ್ವಾಲ (364), ಆಕಾಶ್‌ (346) ಸಂದೀಪ್‌ ಕುಮಾರ್‌ (340) ಸೇರಿಕೊಂಡು ಒಟ್ಟು 1,050 ಅಂಕ ಗಳಿಸಿ ಬಂಗಾರ ಗೆದ್ದರು. ದ. ಕೊರಿಯಾ ಬೆಳ್ಳಿ (1,037), ಚೀನ ಕಂಚು (1,019) ಗೆದ್ದಿತು.

ಇದೇ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ರುದ್ರಾಂಶ್‌ ಬೆಳ್ಳಿಗೆ ತೃಪ್ತಿಪಟ್ಟರು. ಕೊರಿಯಾದ ಕಿಮ್‌ ಜುಂಗ್ನಾಮ್‌ ಮತ್ತು ರುದ್ರಾಂಶ್‌ ಸಮಾನ 364 ಅಂಕ ಗಳಿಸಿದರು. ಆದರೆ “ಇನ್ನರ್‌ ಟೆನ್ಸ್‌’ ಲೆಕ್ಕಾಚಾರದಲ್ಲಿ ಮುಂದಿದ್ದ ಕೊರಿಯಾದ ಶೂಟರ್‌ ಚಿನ್ನವನ್ನು ತಮ್ಮದಾಗಿಸಿಕೊಂಡರು. ಜುಂಗ್ನಾಮ್‌ 9, ರುದ್ರಾಂಶ್‌ ಕೇವಲ 2 ಸಲ ಈ ಗುರಿ ಮುಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next